News Hour: ವಿಧಾನಸಭೆಯಲ್ಲೇ ಮಹಿಳೆಯರ ಬಗ್ಗೆ ಸಿಎಂ ಅಶ್ಲೀಲ ಮಾತು, ಪ್ರಧಾನಿಯಿಂದಲೂ ಟೀಕೆ!

ಬಿಹಾರ ವಿಧಾನಸಭೆಯಲ್ಲಿ ಮಹಿಳೆಯರ ಬಗ್ಗೆ ಸಿಎಂ ನಿತೀಶ್‌ ಕುಮಾರ್‌ ಅಶ್ಲೀಲ ಮಾತು ಆಡಿದ್ದಾರೆ. ನಿತೀಶ್‌ ಕುಮಾರ್‌ ಮಾತಿಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಘಮಂಡಿಯಾ ಕೂಟದ ಸಭ್ಯತೆ ಇದೇನಾ ಎಂದು ಮೋದಿ ಟೀಕೆ ಮಾಡಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ನ.8): ಬಿಹಾರ ಸದನದಲ್ಲಿ ಮುಖ್ಯಮಂತ್ರಿ ನಿತೀಶಕುಮಾರ್ ಮಾತು ವಿವಾದ ಸೃಷ್ಟಿಸಿದೆ. ಲೈಂಗಿಕ ಕ್ರಿಯೆ ಬಗ್ಗೆ ನಿತೀಶ್‌ ಕುಮಾರ್‌ ವಿವಾದಾತ್ಮಕ ಭಾಷಣ ಮಾಡಿದ್ದಾರೆ. ವಿಧಾನಸಭೆಯಲ್ಲಿ ಜನಸಂಖ್ಯಾ ನಿಯಂತ್ರಣ ಕುರಿತು ಪ್ರಸ್ತಾಪ ಮಾಡಿದ ಅವರು, ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾರೆ.

ನಿತೀಶಕುಮಾರ್ ಭಾಷಣದ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ನಿತೀಶ್ ಭಾಷಣಕ್ಕೆ ರಾಷ್ಟ್ರೀಯ ಮಹಿಳಾ ಆಯೋಗ ಆಕ್ಷೇಪ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲಿಯೇ ಬುಧವಾರ ಈ ಬಗ್ಗೆ ನಿತೀಶ್‌ ಕುಮಾರ್‌ ಕ್ಷಮೆಯಾಚಿಸಿ ತಮ್ಮ ಮಾತನ್ನು ಹಿಂಪಡೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಂಗ್ರೆಸ್‌ ಧೋರಣೆ ಬಗ್ಗೆ ನಿತೀಶ್ ಕಿಡಿ, ಇಂಡಿಯಾ ಕೂಟದಲ್ಲಿ ಒಡಕು!

ನಿತೀಶ್ ವಿರುದ್ಧ ಬಿಹಾರ, ದೆಹಲಿಯಲ್ಲಿ ಬಿಜೆಪಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದೆ. ಮಧ್ಯಪ್ರದೇಶದಲ್ಲಿ ಸಮಾವೇಶದಲ್ಲಿ ನಿತೀಶ್ ವಿರುದ್ಧ ಮೋದಿ ಕಿಡಿಕಾರಿದ್ದು, ಘಮಂಡಿಯಾ ಕೂಟದ ಸಭ್ಯತೆ ಇದೇನಾ , ವಿರೋಧ ಪಕ್ಷ ಇಷ್ಟು ಕೆಳಗಿಳಿಯಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.

Related Video