ರಾಯಲ್ ಸೌದಿ ನೇವಲ್ ಫೋರ್ಸ್ ಕೆಡೆಟ್ ಭೇಟಿ ಮಾಡಿದ ADM ಹರಿಕುಮಾರ್!
ದಕ್ಷಿಣ ನೌಕಾ ಕಮಾಂಡ್‌ನಲ್ಲಿ ತರಬೇತಿ ಪಡೆಯುತ್ತಿರುವ ರಾಯಲ್ ಸೌದಿ ನೇವಲ್ ಫೋರ್ಸಸ್ ಕೆಡೆಟ್‌ಗಳ ಮೊದಲ ಬ್ಯಾಚ್ ಭೇಟಿ ಮಾಡಿರುವ ಅಡ್ಮಿರಲ್ ಆರ್ ಹರಿ ಕುಮಾರ್ ಮಹತ್ವದ ಸಂದೇಶ ನೀಡಿದ್ದಾರೆ.
ಕೊಚ್ಚಿ(ಜೂ.02): ಕೇರಳದ ಕೊಚ್ಚಿಯ ದಕ್ಷಿಣ ನೇವಲ್ ಕಮಾಂಡ್‌ನಲ್ಲಿ ಸಮುದ್ರ ತರಬೇತಿ ಕಾರ್ಯಗಾರ ನಡೆಯುತ್ತಿದೆ. ಈ ಮಹತ್ವಾಕಾಂಕ್ಷೆಯ ತರಬೇತಿ ಕಾರ್ಯಕ್ರಮದಲ್ಲಿ ಸೌದಿ ಅರೇಬಿಯಾದ ಕಿಂಗ್ ಫಹದ್ ನೇವಲ್ ಅಕಾಡೆಮಿಯ ಕೆಡೆಟ್ಸ್ ಪಾಲ್ಗೊಂಡಿದ್ದಾರೆ. ಇಂದು ಕೆಡೆಟ್‌ಗಳ ಮೊದಲ ಬ್ಯಾಚ್ ಭೇಟಿ ಮಾಡಿದ ಭಾರತದ ಆಡ್ಮಿರಲ್ ಆರ್ ಹರಿಕುಮಾರ್ ಮಹತ್ವದ ಸಂದೇಶ ರವಾನಿಸಿದ್ದಾರೆ. ಇದೇ ವೇಳೆ ಸಿಎನ್‌ಎಸ್‌ಗೆ ಚಾಲ್ತಿಯಲ್ಲಿರುವ ಬಂದರು ಮತ್ತು ತೇಲುವ ತರಬೇತಿ ಚಟುವಟಿಕೆಗಳ ಬಗ್ಗೆ ಹರಿ ಕುಮಾರ್‌ಗೆ ಮಾಹಿತಿ ನೀಡಲಾಯಿತು. ತರಬೇತಿ ಅವಧಿಯಲ್ಲಿನ ಪ್ರಗತಿಯ ಬಗ್ಗೆಯೂ ಮಾಹಿತಿ ನೀಡಿದರು.