India@75: ತ್ರಿವರ್ಣ ಧ್ವಜ ರಾಷ್ಟ್ರಧ್ವಜವಾಗಿ ಬದಲಾಗಿದ್ದು ಹೇಗೆ?

ಭಾರತ ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಈ ವೇಳೆ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಶ್ರಮಿಸಿದ ವೀರ ಯೋಧರ, ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಸ್ತುತ ಪಡಿಸಿದೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಜೂನ್ 10): ಭಾರತದ ಸ್ವಾತಂತ್ರ್ಯ ಹೋರಾಟವೇ ಒಂದು ಸಾಹಸದ ಕಥೆ. ದೇಶಕ್ಕೆ ಸ್ವಾತಂತ್ರ್ಯ ಸಿಗಲು ಶ್ರಮಿಸಿದ ವೀರಯೋಧರ ಸಂಖ್ಯೆ ಲೆಕ್ಕವಿಲ್ಲದಷ್ಟು. ಭಾರತದ ಇಡೀ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ತುಂಬಿದ್ದು ತ್ರಿವರ್ಣ ಧ್ವಜ. 1906ರಲ್ಲಿ ರೂಪುಗೊಂಡ ತ್ರಿವರ್ಣ ಧ್ವಜ (Tricolour Flag), ರಾಷ್ಟ್ರಧ್ವಜವಾಗಿ (National Flag) ಬದಲಾಗಿದ್ದು ಹೇಗೆ ಎನ್ನುವುದರ ಮಾಹಿತಿ ಇಲ್ಲಿದೆ.

1906ರಲ್ಲಿ ನಡೆದ ಸ್ವದೇಶಿ ಚಳವಳಿಯೊಂದರಲ್ಲಿ ಮೊದಲ ಬಾರಿಗೆ ರಾಷ್ಟ್ರಧ್ವಜ, ಕೋಲ್ಕತದ (Kolkatta ) ಪಾರ್ಸಿ ಬಗಾನ್ ಚೌಕದಲ್ಲಿ ಹಾರಿಸಲಾಗಿತ್ತು. ಈ ಧ್ವಜದಲ್ಲಿ ಹಸಿರು, ಹಳದಿ ಹಾಗೂ ಕೆಂಪು ಬಣ್ಣದ ಮೂರು ಪಟ್ಟಿಗಳಿದ್ದವು. ಮಧ್ಯದ ಪಟ್ಟಿಯಲ್ಲಿ ಬಿಳಿ ಬಣ್ಣದಲ್ಲಿ ವಂದೆ ಮಾತರಂ ಎಂದು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿತ್ತು. ಮೇಲಿನ ಹಸಿರು ಪಟ್ಟಿಯಲ್ಲಿ ಎಂಟು ತಾವರೆಗಳನ್ನ ಚಿತ್ರಿಸಲಾಗಿತ್ತು. ಇದು ಅಂದಿನ 8 ಭಾರತೀಯ ಪ್ರಾಂತ್ಯಗಳನ್ನು ಸೂಚಿಸುತ್ತಿದ್ದವು.

India@75: 18ರ ಹರೆಯದ ಖುದಿರಾಮ್ ಬೋಸ್, ನಗುತ್ತಲೇ ಗಲ್ಲಿಗೇರಿದ ಕಿರಿಯ ಸ್ವಾತಂತ್ರ್ಯ ಸೇನಾನಿ!

ಕೆಳಗಿನ ಕೆಂಪು ಪಟ್ಟಿಯಲ್ಲಿ ಹಿಂದೂ ಧರ್ಮ ಸೂರ್ಯ ಹಾಗೂ ಮುಸ್ಲಿಮರ ಅರ್ಧ ಚಂದ್ರವನ್ನು ಚಿತ್ರಿಸಲಾಗಿತ್ತು. 1907ರಲ್ಲಿ ಮೊದಲ ಬಾರಿಗೆ ವಿದೇಶದ ನೆಲದಲ್ಲಿ ಭಾರತದ ಧ್ವಜ ಹಾರಾಡಿತ್ತು. ಜರ್ಮನಿಯ ಸ್ಟುಟ್ ಗರ್ಟ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾಜವಾದಿಗಳ ಸಮ್ಮೇಳನದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಮೇಡಂ ಕಾಮಾ ಈ ಧ್ವಜವನ್ನು ಪ್ರದರ್ಶನ ಮಾಡಿದ್ದರು.

Related Video