India@75: 18ರ ಹರೆಯದ ಖುದಿರಾಮ್ ಬೋಸ್, ನಗುತ್ತಲೇ ಗಲ್ಲಿಗೇರಿದ ಕಿರಿಯ ಸ್ವಾತಂತ್ರ್ಯ ಸೇನಾನಿ!

ಬಂಗಾಳದಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಆ 18ರ ಹರೆಯದ ಯುವಕನ ಹೋರಾಟದ ಕಥೆ ಇದು. ಗಲ್ಲಿಗೇರಿಸುವಾಗಲು ನಗನಗುತ್ತಲೇ ಕೊರಳೊಡ್ಡಿದ ಖುದಿರಾಮ್‌ ಬೋಸ್‌ ಬಗ್ಗೆ ಒಂದಿಷ್ಟು ಮಾಹಿತಿ..
 

First Published Jun 8, 2022, 9:32 PM IST | Last Updated Jun 14, 2022, 9:33 PM IST

ಬೆಂಗಳೂರು (ಜೂನ್ 8): ಭಾರತ ಈ ಬಾರಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು (Azaadi Ki Amrith Mahothsav ) ಆಚರಣೆ ಮಾಡಲಿದೆ. ಭಾರತಕ್ಕೆ ಸ್ವಾತಂತ್ರ್ಯ ಕೊಡಿಸುವ ನಿಟ್ಟಿನಲ್ಲಿ ಸಾಕಷ್ಟು ವೀರರು ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಅವರಲ್ಲಿ ಒಬ್ಬರು 18 ವರ್ಷದ ಖುದಿರಾಮ್ ಬೋಸ್ ( Khudiram Bose). ನಗುಮುಖದಲ್ಲಿಯೇ ನೇಣುಗಂಬಕ್ಕೆ (gallows) ಕೊರಳೊಡ್ಡಿದ ಧೀರ ಸ್ವಾತಂತ್ರ್ಯ ಹೋರಾಟಗಾರ (freedom fighter).

ಬಂಗಾಳ ವಿಭಜನೆಯಾದ ನಂತರ ಪ್ರಮುಖವಾಗಿ ಕಾಣಿಸಿಕೊಂಡ ಕ್ರಾಂತಿಕಾರಿಗಳ ಪೈಕಿ ಖುದಿರಾಮ್ ಬೋಸ್ ಕೂಡ ಒಬ್ಬರು. ಮೇದಿನಿಪುರದ ತಹಸೀಲ್ಡಾರ ತ್ರೈಲೋಕ್ಯನಾಥ ಹಾಗೂ ಲಕ್ಷ್ಮೀದೇವಿಯವರ ಒಬ್ಬನೇ ಮಗ. ಇಬ್ಬರು ಗಂಡುಮಕ್ಕಳ ಸಾವು, ನಂತರದ ಮೂರು ಹೆಣ್ಣೆಮಕ್ಕಳ ಬಳಿಕ ಹುಟ್ಟಿದವರು ಖುದಿರಾಮ್ ಬೋಸ್. ಖುದಿರಾಮ್ ಅವರ ರಕ್ಷಣೆಗಗಾಗಿ ತಾಯಿ ಲಕ್ಷ್ಮೀ ದೇವಿ ಪ್ರತಿ ದಿನ ಪೂನೆ ಪುನಸ್ಕಾರಗಳನ್ನು ಮಾಡುತ್ತಿದ್ದರು. ಆದರೆ, ದುರಂತ ಏನೆಂದರೆ, ಖುದಿರಾಮ್ ಬಾಲಕನಾಗಿದ್ದಾಗಲೇ ಅಪ್ಪ-ಅಮ್ಮ ಇಬ್ಬರೂ ಸಾವಿಗೀಡಾದರು.

India@75: ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯ ತಾಣ ಮೈಸೂರಿನ ಸುಬ್ಬರಾಯನ ಕೆರೆ

ಅಕ್ಕನ ಆರೈಕೆಯಲ್ಲಿ ಬೆಳೆದ ಖುದಿರಾಮ್ ಬೋಸ್, ಆ ಸಮಯದಲ್ಲಿ ಬಂಗಾಳದಲ್ಲಿ ನಡೆಯುತ್ತಿದ್ದ ಕ್ರಾಂತಿಕಾರಿ ಚಟುವಟಿಕೆಗಳ ಬಗ್ಗೆ ಆಕರ್ಷಿತನಾಗಿದ್ದರು. ಅರಬಿಂದೋ ಘೋಷ್ ಹಾಗೂ ಸಿಸ್ಟರ್ ನಿವೇದಿತಾ ಅವರ ಭಾಷಣಗಳು ಖುದಿರಾಮ್ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದವು. ಬ್ರಿಟಿಷರನ್ನೂ ಶಕ್ತಿಯಿಂದಲೇ ಹೊರಹಾಕಬೇಕು ಎಂದು ಬಯಸಿದ್ದ ಅನುಶೀಲನ್ ಸಮಿತಿಗೆ ಖುದಿರಾಮ್ ಬೋಸ್ ಸದಸ್ಯರೂ ಆಗಿದ್ದರು.

Video Top Stories