India@75: ಸ್ವಾತಂತ್ರ್ಯಕ್ಕಾಗಿ ವಿದೇಶದಿಂದಲೇ ಹೋರಾಡಿದ ಅನಿವಾಸಿ ಭಾರತೀಯ ಶ್ಯಾಮಜೀ ಕೃಷ್ಣ ವರ್ಮಾ
ಭಾರತದ ಸ್ವಾತಂತ್ರಕ್ಕಾಗಿ ವಿದೇಶದಿಂದಲೇ ಜೀವಮಾನವಡೀ ಹೋರಾಡಿದ ಅನಿವಾಸಿ ಭಾರತೀಯ ಶ್ಯಾಮಜೀ ಕೃಷ್ಣ ವರ್ಮಾ. ಗುಜರಾತ್‌ನ ಮಾಂಡ್ವಿಯಲ್ಲಿ ಜನಿಸುತ್ತಾರೆ. ಕಾಶೀ ವಿದ್ಯಾಪೀಠದಲ್ಲಿ ಪಂಡಿತ ಎಂಬ ಬಿರುದು ಪಡೆದ ಮೊದಲ ಬ್ರಾಹ್ಮಣೇತರ ವಿದ್ವಾಂಸ.
ಭಾರತದ ಸ್ವಾತಂತ್ರಕ್ಕಾಗಿ ವಿದೇಶದಿಂದಲೇ ಜೀವಮಾನವಡೀ ಹೋರಾಡಿದ ಅನಿವಾಸಿ ಭಾರತೀಯ ಶ್ಯಾಮಜೀ ಕೃಷ್ಣ ವರ್ಮಾ. ಗುಜರಾತ್‌ನ ಮಾಂಡ್ವಿಯಲ್ಲಿ ಜನಿಸುತ್ತಾರೆ. ಕಾಶೀ ವಿದ್ಯಾಪೀಠದಲ್ಲಿ ಪಂಡಿತ ಎಂಬ ಬಿರುದು ಪಡೆದ ಮೊದಲ ಬ್ರಾಹ್ಮಣೇತರ ವಿದ್ವಾಂಸ.
India@75: ಕಲಾಕ್ಷೇತ್ರಗಳಲ್ಲೂ ಸ್ವದೇಶಿ ಚಿಂತನೆ ತುಂಬಿದ ಅವನೇಂದ್ರ ಠಾಕೂರ್
ಮುಂದೆ ಲಂಡನ್‌ಗೆ ಹೋಗಿ ಅಲ್ಲಿ ಪ್ರತಿಷ್ಠಿತ ಇನ್ನರ್ ಟೆಂಪಲ್‌ನಲ್ಲಿ ವಕೀಲರಾಗುತ್ತಾರೆ. ಭಾರತದ ಸ್ವತಂತ್ರ ಹೋರಾಟದ ಪ್ರಚೋದನೆಗೆ ಒಳಗಾಗುತ್ತಾರೆ. ಭಾರತೀಯ ವಿದ್ಯಾರ್ಥಿಗಳಿಗಾಗಿ ಇಂಡಿಯಾ ಹೌಸ್ ಎಂಬ ಹಾಸ್ಟೆಲ್ ತೆರೆಯುತ್ತಾರೆ. ಕೆಲವೇ ದಿನಗಳಲ್ಲಿ ಇಂಡಿಯಾ ಹೌಸ್ ಕೇಂದ್ರ ಸ್ಥಾನವಾಯಿತು. ಮುಂದೆ ಜಿನೀವಾಗೆ ತೆರಳುತ್ತಾರೆ. ಅಲ್ಲಿ ಸ್ಮಶಾನದ ಅಧಿಕಾರಿಗಳ ಬಳಿ 'ನಾನು ಸತ್ತ ಕೂಡಲೇ ನನ್ನ ಚಿತಾ ಭಸ್ಮವನ್ನು ಭಾರತಕ್ಕೆ ಕಳುಹಿಸಬೇಡಿ, ಭಾರತಕ್ಕೆ ಸ್ವತಂತ್ರ ಸಕ್ಕ ಬಳಿಕ ಕಳುಹಿಸಿ ಎಂದಿದ್ದರು. ಭಾರತದ ಸ್ವಾತಂತ್ರವಾಗಿ ೫೬ ವರ್ಷಗಳ ನಂತರ ೨೦೦೩ ರಲ್ಲಿ ಪ್ರಧಾನಿ ನರೇಂದ್ರ ಮೋದಿ ಚಿತಾಭಸ್ಮವನ್ನು ಭಾರತಕ್ಕೆ ತರಿಸಿಕೊಂಡರು. ವರ್ಮಾರ ಜನ್ಮಸ್ಥಳ ಮಾಂಡ್ವಿಯಲ್ಲಿ ಸ್ಮಾರಕ ನಿರ್ಮಿಸಲಾಯಿತು.