Asianet Suvarna News Asianet Suvarna News

ನ್ಯಾಷನಲ್‌ ಹಾಕಿ ಪಟುವಿಗೆ ಬೇಕಿದೆ ಸ್ವಂತದ್ದೊಂದು ಸೂರು..!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವ ಹರೀಶ್‌ ಗದಗಿನ ಬೆಟಗೆರೆಯ ಗಾಂಧಿ ಬಡಾವಣೆಯ ನಿವಾಸಿಯಾಗಿದ್ದಾರೆ. ಸುಮಾರು ನಲ್ವತ್ತು ವರ್ಷದಿಂದ ಹರೀಶ್ ಕುಟುಂಬ ಇದೇ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಸ್ವಂತ ಮನೆಯಿಲ್ಲದೇ ಕಚ್ಚಾ ಮನೆಯಲ್ಲಿ ವಾಸವಾಗಿದ್ದಾರೆ.  
 

ಗದಗ(ಅ.20): ಹಾಕಿ (Hockey) ಕ್ರೀಡೆಯಲ್ಲಿ ಅಬ್ಬರಿಸಿರುವ ಹರೀಶ್ ಸೋಮಪ್ಪ ಮುಟಗಾರ್ ಮನೆ ಕಟ್ಟುವ ಅಕ್ಷರಶಃ ನಿಸ್ಸಾಹಾಯಕರಾಗಿದ್ದಾರೆ. ತಾವಿರುವ ಮನೆಯ ಗೋಡೆ ಕುಸಿಯುತ್ತಿದ್ದು ಮುಂದೇನು ಮಾಡಬೇಕು ಎಂದು ತೋಚದೇ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವ ಹರೀಶ್‌ ಗದಗಿನ (Gadag) ಬೆಟಗೆರೆಯ ಗಾಂಧಿ ಬಡಾವಣೆಯ ನಿವಾಸಿಯಾಗಿದ್ದಾರೆ. ಸುಮಾರು ನಲ್ವತ್ತು ವರ್ಷದಿಂದ ಹರೀಶ್ ಕುಟುಂಬ ಇದೇ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಸ್ವಂತ ಮನೆಯಿಲ್ಲದೇ ಕಚ್ಚಾ ಮನೆಯಲ್ಲಿ ವಾಸವಾಗಿದ್ದಾರೆ.  

FIH Hockey Awards: ವಿಶ್ವ ಹಾಕಿ ವಾರ್ಷಿಕ ಪ್ರಶಸ್ತಿ ಕ್ಲೀನ್‌ಸ್ವೀಪ್‌ ಮಾಡಿದ ಭಾರತ

ಹರೀಶ್‌ ತಂದೆ ಸೋಮಪ್ಪ 20 ವರ್ಷಗಳ ಹಿಂದೆ ಕಾಲು ಕಳೆದುಕೊಂಡಿದ್ದರು. ಇನ್ನು ಹರೀಶ್ ತಾಯಿ ಕೂಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ದೇಶಕ್ಕೆ ಮತ್ತಷ್ಟು ಚಿನ್ನಗೆಲ್ಲಬೇಕು ಎನ್ನುವ ಹರೀಶ್‌ಗೆ ಈಗ ಮನೆಯದ್ದೇ ಚಿಂತೆ. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಪರಿಸ್ಥಿತಿ ಅರ್ಥಮಾಡಿಕೊಂಡು ಮನೆ ಮಂಜೂರು ಮಾಡಿಕೊಡಲಿ ಎನ್ನುವುದು ಹರೀಶ್‌ ಮನವಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ..