ಹೃದಯಾಘಾತ, ಹೃದಯ ಸ್ತಂಭನ: ಏನು ವ್ಯತ್ಯಾಸ?
ಹೃದಯ ಅನ್ನೋದು ಮನುಷ್ಯನ ದೇಹದ ಅವಿಭಾಜ್ಯ ಅಂಗ. ಹೃದಯ ಬಡಿತ ನಿಂತರೆ ಜೀವ ನಿಂತು ಹೋಗುತ್ತೆ. ಆದರೆ ಹೃದಯ ಸಂಬಂಧಿತ ಸಮಸ್ಯೆಯನ್ನು ಬಹುತೇಕರು ಹಾರ್ಟ್ ಅಟ್ಯಾಕ್ ಎಂದೇ ತಪ್ಪು ತಿಳಿದುಕೊಳ್ಳುತ್ತಾರೆ. ಆದ್ರೆ ಹೃದಯಾಘಾತ, ಹೃದಯ ಸ್ತಂಭನ ಒಂದೇ ಅಲ್ಲ. ಆ ಬಗ್ಗೆ ತಜ್ಞ ವೈದ್ಯರು ಮಾಹಿತಿ ನೀಡುತ್ತಾರೆ.
ಹೃದಯ ಸಂಬಂಧಿತ ಕಾಯಿಲೆಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿವೆ. ಹೃದಯಾಘಾತ, ಹೃದಯಸ್ತಂಭನ ಮೊದಲಾದ ಕಾರಣಗಳಿಂದ ಜನರು ಮೃತಪಡುತ್ತಾರೆ. ಆದರೆ ಎದೆನೋವಿನಿಂದ ಕುಸಿದುಬಿದ್ದು ಮೃತಪಟ್ಟರೆ ಸಾಮಾನ್ಯವಾಗಿ ಎಲ್ಲವನ್ನೂ ಹೃದಯಾಘಾತವೆಂದ ಹೇಳಲಾಗುತ್ತದೆ. ಆದರೆ ಪ್ರತಿ ಬಾರಿ ಹೀಗೆ ಸಾವನ್ನಪ್ಪಿದಾಗ ಅದು ಹೃದಯಾಘಾತವೇ ಆಗಬೇಕೆಂದಿಲ್ಲ, ಹೃದಯ ಸ್ತಂಭನವೂ ಆಗಿರಬಹುದು. ಹಾಗಿದ್ರೆ ಹೃದಯಾಘಾತ, ಹೃದಯ ಸ್ತಂಭನಕ್ಕಿರುವ ವ್ಯತ್ಯಾಸವೇನು, ಇವುಗಳ ಲಕ್ಷಣವೇನು ಎಂಬುದರ ಬಗ್ಗೆ ಕಾರ್ಡಿಯಾಕ್ ಸರ್ಜನ್ ಡಾ.ರಾಜೇಶ್ ಮಾಹಿತಿ ನೀಡುತ್ತಾರೆ.