ಹೃದಯಾಘಾತದ ಸೂಚನೆ ಪುರುಷರು, ಮಹಿಳೆಯರಲ್ಲಿ ವ್ಯತ್ಯಾಸವಾಗಿರುತ್ತಾ?
ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಬಹುತೇಕರು ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿಕೊಂಡಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ. ಹಾರ್ಟ್ ಅಟ್ಯಾಕ್‌ಗೂ ಮೊದಲೇ ದೇಹ ಕೆಲವು ಸೂಚನೆಗಳನ್ನು ಕೊಡುತ್ತೆ. ಇದು ಪುರುಷ ಹಾಗೂ ಮಹಿಳೆಯರಲ್ಲಿ ವ್ಯತ್ಯಸ್ಥವಾಗಿರುತ್ತಾ?
ಹಾರ್ಟ್ ಅಟ್ಯಾಕ್ ಅನ್ನೋದು, ನೆಗಡಿ, ಕೆಮ್ಮು ಜ್ವರಕ್ಕಿಂತ ಕಾಮನ್ ಅನ್ನೋ ಭಯಾನಕ ವಾತಾವರಣ ನಿರ್ಮಾಣವಾಗಿದೆ. ನಿನ್ನೆ ಮೊನ್ನೆ ತನಕ ಗಟ್ಟಿ ಮುಟ್ಟಾಗಿದ್ದೋರೇ, ಹಾರ್ಟ್ ಅಟ್ಯಾಕ್ ಆಗಿ ಪ್ರಾಣ ಕಳ್ಕೊಳ್ತಾರೆ. ಬಹುತೇಕರು ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿಕೊಂಡಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ. ಹೃದಯಾಘಾತಕ್ಕೂ ಮೊದಲು ದೇಹ ಕೆಲವು ಸೂಚನೆಗಳನ್ನು ಕೊಡುತ್ತೆ. ಇದನ್ನು ಸರಿಯಾಗಿ ಗಮನಿಸಿದರೆ ಹೃದಯಾಘಾತವನ್ನ ತಪ್ಪಿಸಬಹುದು ಎಂದು ಕೆಲವರು ಹೇಳುತ್ತಾರೆ. ಆದರೆ ಹಾರ್ಟ್ ಅಟ್ಯಾಕ್ ಸೂಚನೆ ಪುರುಷರು ಹಾಗೂ ಮಹಿಳೆಯರಲ್ಲಿ ವ್ಯತ್ಯಸ್ಥವಾಗಿರುತ್ತಾ? ಈ ಬಗ್ಗೆ ಕಾರ್ಡಿಯಾಕ್ ಸರ್ಜನ್ ಡಾ.ರಾಜೇಶ್ ಏನ್ ಹೇಳ್ತಾರೆ ತಿಳಿಯೋಣ.
ಹೃದಯ ಎಡಗಡೆ ಇರೋದ್ರಿಂದ, ಅಲ್ಲಿ ನೋವು ಕಾಣಿಸಿಕೊಂಡ್ರೆ ಹಾರ್ಟ್‌ಅಟ್ಯಾಕ್ ಆಗುತ್ತಾ?