ತುಳಸಿಯಿಂದ ಬಂದ ಗಾಳಿ ನಮ್ಮ ಆರೋಗ್ಯಕ್ಕೆ ಉತ್ತಮ
ತುಳಸಿ ಸಸ್ಯವನ್ನು ಮನೆಯಲ್ಲಿ ಇಡೋದು ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗುತ್ತೆ. ಹಾಗೆಯೇ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಅನ್ನೋದು ನಿಮಗೆ ಗೊತ್ತಿದ್ಯಾ?
ಮನೆಯೊಂದಿದ್ದರೆ, ಮನೆಯೆದುರು ತುಳಸಿ ಗಿಡವೊಂದು ಇರಬೇಕು ಎಂದು ಹಿರಿಯರು ಹೇಳ್ತಾರೆ. ತುಳಸಿ ಗಿಡವನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಮನೆಯೆದುರು ತುಳಸಿ ಗಿಡವಿದ್ದರೆ ಎಲ್ಲಾ ಒಳ್ಳೆಯದಾಗುತ್ತದೆ ಎಂದು ನಂಬುತ್ತಾರೆ. ಹಾಗೆಯೇ ತುಳಸಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅನ್ನೋದು ನಿಮಗೆ ಗೊತ್ತಿದ್ಯಾ? ಇದು ಹಲವು ರೋಗ ನಿರೋಧಕ ಶಕ್ತಿಗಳನ್ನು ಹೊಂದಿದೆ. ತುಳಸಿಯಿಂದ ಬಂದ ಗಾಳಿಯೇ ಆರೋಗ್ಯದಲ್ಲಿ ಹಲವು ಮ್ಯಾಜಿಕ್ ಮಾಡಬಲ್ಲದು. ಹಾಗೆಯೇ ತುಳಸಿ ಎಲೆಯನ್ನು ಕುದಿಸಿ ಆ ನೀರು ಕುಡಿಯುವುದರಿಂದಲೂ ಆರೋಗ್ಯಕ್ಕೆ ಹಲವು ಪ್ರಯೋಜನವಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಡಯಟೀಷಿಯನ್ ಡಾ.ಹೆಚ್.ಎಸ್. ಪ್ರೇಮ ನೀಡಿದ್ದಾರೆ.
ಎಷ್ಟು ಕೆಜಿ ಕಡಿಮೆ ಆದ್ರೂ ಹೃದಯಾಘಾತ ಆಗಲ್ಲ, ಮಾಡರ್ನ್ ಲೈಫ್‌ಗೆ ಗ್ಯಾರಂಟಿ: ಡಾ. ಪ್ರೇಮಾ