ವಿಕ್ಟೋರಿಯಾ ಸ್ಕಿನ್ ಬ್ಯಾಂಕ್‌ನಲ್ಲಿ ಚರ್ಮದ ಕೊರತೆ, ರೋಗಿಗಳ ಪರದಾಟ
ರಾಜ್ಯದ ಮೊದಲ ಸ್ಕಿನ್ ಬ್ಯಾಂಕ್‌ನಲ್ಲಿ ಸ್ಕಿನ್ ಕೊರತೆ ಎದುರಾಗಿದೆ. ಬೇಸಿಗೆ ಹೆಚ್ಚುತ್ತಿದ್ದಂತೆ ಸುಟ್ಟ ಗಾಯಗಳಿಂದ ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚಾಗ್ತಿದೆ. ಆದ್ರೆ ಸ್ಕಿನ್ ಸಿಗದೆ ರೋಗಿಗಳು ಪರದಾಡುವಂತಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ದೇಶದ ಮೂರನೇಯ ಸ್ಕಿನ್ ಬ್ಯಾಂಕ್ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸ್ಕಿನ್ ಲಭ್ಯವಿಲ್ಲ. ಚರ್ಮದ ದಾನಿಗಳಿಲ್ಲದೆ ಈ ಸಮಸ್ಯೆ ಕಾಡ್ತಿದೆ. ಈ ಹಿಂದೆ ಬೇರೆ ರಾಜ್ಯಗಳಿಗೂ ವಿಕ್ಟೋರಿಯಾ ಆಸ್ಪತ್ರೆಯಿಂದ ಚರ್ಮವನ್ನು ಕಳುಹಿಸಿ ಕೊಡಲಾಗ್ತಿತ್ತು. ಆದ್ರೆ ಸದ್ಯ ಆಸ್ಪತ್ರೆಗೆ ಬರುವ ರೋಗಿಗಳೇ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ತೊಂದರೆ ಅನುಭವಿಸುವಂತಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥರಾದ ಡಾ.ರಮೇಶ್ ಕೆ.ಟಿ ಹೇಳಿದ್ದಾರೆ.
Health Tips : ಕೋಲ್ಡ್ ಪ್ರೆಸ್ಡ್ ಆಯಿಲ್ ಅಂದ್ರೇನು? ಅದ್ರ ಲಾಭವೇನು ಗೊತ್ತಾ?