Asianet Suvarna News Asianet Suvarna News

ಬ್ರೈನ್‌ ಟ್ಯೂಮರ್‌ಗೂ ಸ್ಟ್ರೋಕ್‌ಗೂ ಸಂಬಂಧವಿದ್ಯಾ?

ಭಾರತದಲ್ಲಿ ಸ್ಟ್ರೋಕ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅಲ್ಲದೇ ಇದು ಗಂಭೀರ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇನ್ನೊಂದೆಡೆ ಬ್ರೈನ್ ಟ್ಯೂಮರ್‌ ಪ್ರಕರಣಗಳೂ ಉಲ್ಬಣಗೊಳ್ಳುತ್ತಿವೆ. ಆದರೆ ನಿಜಕ್ಕೂ ಬ್ರೈನ್‌ ಟ್ಯೂಮರ್‌ಗೂ ಸ್ಟ್ರೋಕ್‌ಗೂ ಸಂಬಂಧವಿದ್ಯಾ? ಆ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಸ್ಟ್ರೋಕ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅಲ್ಲದೇ ಇದು ಗಂಭೀರ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಅದರಲ್ಲೂ ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.  ಇನ್ನೊಂದೆಡೆ ಬ್ರೈನ್ ಟ್ಯೂಮರ್‌ ಪ್ರಕರಣಗಳೂ ಉಲ್ಬಣಗೊಳ್ಳುತ್ತಿವೆ. ಬ್ರೈನ್ ಟ್ಯೂಮರ್ ಮೆದುಳಿನಲ್ಲಿನ ಜೀವಕೋಶಗಳ ಸಮೂಹ ಅಥವಾ ಅಸಹಜ ಬೆಳವಣಿಗೆಯನ್ನು ಸೂಚಿಸುತ್ತದೆ. ಇದು ಕೆಲವೊಮ್ಮೆ ಸಾವಿಗೂ ಕಾರಣವಾಗಬಹುದು. ಆದರೆ ನಿಜಕ್ಕೂ ಬ್ರೈನ್‌ ಟ್ಯೂಮರ್‌ಗೂ ಸ್ಟ್ರೋಕ್‌ಗೂ ಸಂಬಂಧವಿದ್ಯಾ? ಆ ಬಗ್ಗೆ ಮಣಿಪಾಲ್ ಆಸ್ಪತ್ರೆಯ ನರರೋಗ ತಜ್ಞ ಡಾ.ಶಿವಕುಮಾರ್ ಆರ್‌ ಮಾಹಿತಿ ನೀಡಿದ್ದಾರೆ.

ಸ್ಟ್ರೋಕ್‌ನಿಂದ ಮಾನಸಿಕ ಕಾಯಿಲೆಯ ಅಪಾಯ ಹೆಚ್ಚು!

Video Top Stories