ರೋಗಿಗಳು ತುರ್ತು ಚಿಕಿತ್ಸೆಗೆ ಬಂದಾಗ ಹಣ ನೋಡಲ್ಲ, ಜೀವ ಉಳಿಸೋದು ಮುಖ್ಯ; ಡಾ.ಸಿ.ಎನ್.ಮಂಜುನಾಥ್
ಜಯದೇವ ಆಸ್ಪತ್ರೆ ಜನರಿಗೆ ಅತ್ಯುತ್ತಮ ಸೇವೆ ನೀಡುವುದಕ್ಕೆ ಹೆಸರುವಾಸಿಯಾಗಿದೆ. ರಾಜ್ಯದ ಹಲವೆಡೆಯಿಂದ ಜನರು ಚಿಕಿತ್ಸೆಗೆಂದು ಇಲ್ಲಿಗೆ ಬರುತ್ತಾರೆ. ಹೀಗಿರುವಾಗ, 'ನಮ್ಮ ಪಾಲಿಗೆ ಟ್ರೀಟ್‌ಮೆಂಟ್ ಫಸ್ಟ್, ಪೇಮೆಂಟ್ ನೆಕ್ಸ್ಟ್' ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಜಯದೇವ ಆಸ್ಪತ್ರೆಯಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ. ರೋಗಿಗಳ ಬಳಿ ಹಣವಿರಲಿ, ಇಲ್ಲದೇ ಇರಲಿ, ಡಾಕ್ಯುಮೆಂಟ್ ಇರಲಿ, ಇಲ್ಲದಿರಲಿ, ಇನ್ಶೂರೆನ್ಸ್ ಇರಲಿ ಇಲ್ಲದಿರಲಿ ತುರ್ತು ಚಿಕಿತ್ಸೆಗೆ ಬಂದ ಸಂದರ್ಭದಲ್ಲಿ ನಾವು ಹಣ ನೋಡುವುದಿಲ್ಲ. ಯಾಕೆಂದರೆ ಜೀವ ಉಳಿಸೋದೆ ನಮ್ಮ ಮೂಲ ಉದ್ದೇಶ ಎಂದು ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ನಮ್ಮ ಘೋಷವಾಕ್ಯವೂ ಅದೇ ಆಗಿದೆ. ಟ್ರೀಟ್‌ಮೆಂಟ್ ಫಸ್ಟ್ ಪೇಮೆಂಟ್ ನೆಕ್ಸ್ಟ್ ಎಂದು ತಿಳಿಸಿದ್ದಾರೆ.
Heartattack in Children: ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ, ತಜ್ಞರು ಏನಂತಾರೆ?