ಕಿಡ್ನಿ ಸ್ಟೋನ್‌ನಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತಾ?

ಇತ್ತೀಚಿನ ದಿನಗಳಲ್ಲಿ ಅನೇಕರು ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುವ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಕೆಲವೊಬ್ಬರು ಕಿಡ್ನಿ ಸ್ಟೋನ್‌ನಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ ಎಂದು ಅಂದುಕೊಳ್ಳುತ್ತಾರೆ. ಆದರೆ ಇದು ಎಷ್ಟರಮಟ್ಟಿಗೆ ನಿಜ.

First Published Sep 1, 2023, 2:23 PM IST | Last Updated Sep 1, 2023, 2:23 PM IST

ಅನಾರೋಗ್ಯಕರ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಅನೇಕರು ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುವ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಮೂತ್ರಪಿಂಡದ ಕಲ್ಲುಗಳು ಮೂತ್ರಪಿಂಡದೊಳಗೆ ರೂಪುಗೊಳ್ಳುವ ಖನಿಜಗಳು ಮತ್ತು ಲವಣಗಳಿಂದ ಮಾಡಲ್ಪಟ್ಟ ಘನ ದ್ರವ್ಯರಾಶಿಯಾಗಿದೆ. ಕೆಲವೊಬ್ಬರು ಕಿಡ್ನಿ ಸ್ಟೋನ್‌ನಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ ಎಂದು ಅಂದುಕೊಳ್ಳುತ್ತಾರೆ. ಆದರೆ ಇದು ಎಷ್ಟರಮಟ್ಟಿಗೆ ನಿಜ ಎಂಬ ಬಗ್ಗೆ ಹಲವರಿಗೆ ಗೊಂದಲವಿದೆ. ಕಿಡ್ನಿ ಸ್ಟೋನ್ ಇರುವಾಗ ಹೊಟ್ಟೆನೋವು ಕಾಣಿಸಿಕೊಳ್ಳುವ ಕಾರಣ ಕೆಲವರು ಇದನ್ನು ಅಸಿಡಿಟಿ ಎಂದು ತಪ್ಪಾಗಿ ತಿಳಿದುಕೊಳ್ಳುತ್ತಾರೆ ಎಂದು ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥ ಡಾ.ಎಚ್‌ ಸುದರ್ಶನ ಬಲ್ಲಾಳ್ ಹೇಳಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಕಿಡ್ನಿ ಸ್ಟೋನ್‌ ಇದ್ರೆ ಮೂತ್ರ ಮಾಡೋಕೆ ತೊಂದ್ರೆಯಾಗುತ್ತಾ?