ಮಹಾಮಳೆಗೆ ಕೊಚ್ಚಿಹೋದ ಬೈಕ್ ಸವಾರರು; ರಕ್ಷಿಸಿದ್ರು ಅಗ್ನಿಶಾಮಕ ದಳದ ವೀರರು

ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮತ್ತೆ ಮಹಾಮಳೆ ಆರಂಭವಾಗಿದೆ. ಹಾವೇರಿಯಲ್ಲಿ ನಿನ್ನೆ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಹಳ್ಳ-ಕೊಳ್ಳಗಳು ತುಂಬಿ ರಸ್ತೆ, ಗದ್ದೆಗಳು ಜಲಾವೃತವಾಗಿವೆ. ರಸ್ತೆ ಯಾವುದು, ಗದ್ದೆ ಯಾವುದು, ಹಳ್ಳ ಯಾವುದು ಏನೂ ಗೊತ್ತಾಗುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಬೈಕ್ ಸವಾರರಿಬ್ಬರು ಮಳೆನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿ ಅವರಿಬ್ಬರನ್ನು ರಕ್ಷಿಸಿದರು. ಇಲ್ಲಿದೆ ವಿವರ....    

First Published Oct 21, 2019, 12:52 PM IST | Last Updated Oct 21, 2019, 12:52 PM IST

ಹಾವೇರಿ (ಅ.21): ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮತ್ತೆ ಮಹಾಮಳೆ ಆರಂಭವಾಗಿದೆ. ಹಾವೇರಿಯಲ್ಲಿ ನಿನ್ನೆ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಹಳ್ಳ-ಕೊಳ್ಳಗಳು ತುಂಬಿ ರಸ್ತೆ, ಗದ್ದೆಗಳು ಜಲಾವೃತವಾಗಿವೆ.

ರಸ್ತೆ ಯಾವುದು, ಗದ್ದೆ ಯಾವುದು, ಹಳ್ಳ ಯಾವುದು ಏನೂ ಗೊತ್ತಾಗುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಬೈಕ್ ಸವಾರರಿಬ್ಬರು ಮಳೆನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿ ಅವರಿಬ್ಬರನ್ನು ರಕ್ಷಿಸಿದರು.

ಕಳೆದ ತಿಂಗಳಷ್ಟೇ ಮಹಾಮಳೆ ಮತ್ತು ನೆರೆಯಿಂದ ತತ್ತರಿಸಿದ್ದ ಕರ್ನಾಟಕದ ಬಹುತೇಕ ಜಿಲ್ಲೆಗಳು, ಇನ್ನೂ ಆ ಹೊಡೆತದಿಂದ ಹೊರಬಂದಿಲ್ಲ. ಈಗ ಮತ್ತೊಮ್ಮೆ ಮಳೆ ಶುರುವಾಗಿದೆ. ಅ.24ರವರೆಗೆ ಈ ರೀತಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.