ಫುಡ್, ಫನ್ ಮತ್ತು ಫ್ಯಾಷನ್ ಫೆಸ್ಟಿವಲ್‌ಗೆ ಇಂದೇ ಕೊನೆ ದಿನ: ಬನ್ನಿ ಭಾಗವಹಿಸಿ..ವೀಕೆಂಡ್‌ನಲ್ಲಿ ಸಂಭ್ರಮಿಸಿ

ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಆಯೋಜಿಸಿರುವ ಬೆಂಗಳೂರಿನ ಅತೀ ದೊಡ್ಡ ಫುಡ್, ಫನ್ ಮತ್ತು ಫ್ಯಾಷನ್ ಫೆಸ್ಟಿವಲ್‌ಗೆ ಇಂದು ಕೊನೆ ದಿನವಾಗಿದೆ.
 

Share this Video
  • FB
  • Linkdin
  • Whatsapp

ಒಂದೆಡೆ ಬಾಯಲ್ಲಿ ನೀರೂರಿಸುವ ವಿವಿಧ ತಿಂಡಿ ತಿನಿಸುಗಳು, ಮತ್ತೊಂದೆಡೆ ನೃತ್ಯ, ಹಾಡಿನ ಕಲರವ. ಹೆಜ್ಜೆ ಗೆಜ್ಜೆಗಳ ಝೇಂಕಾರದ ಸ್ಪರ್ಧೆ ಕಣ್ತುಂಬಿಕೊಳ್ಳಲು ಕಿಕ್ಕಿರಿದು ಸೇರಿದ ಜನಸ್ತೋಮ. ಅಲ್ಲೇ ಆಗಮಿಸಿದ ಸಿನಿಮಾ ತಂಡದ ಜೊತೆ ಸೆಲ್ಪಿ ತೆಗೆಯುವ ತವಕದಲ್ಲಿರುವ ಫ್ಯಾನ್ಸ್. ಈ ದೃಶ್ಯ ಕಂಡು ಬಂದಿದ್ದು ಏಷ್ಯಾನೆಟ್ ಸುವರ್ಣ ನ್ಯೂಸ್ ಆಯೋಜಿಸುತ್ತಿರುವ ಜಯನಗರ ಸಂಭ್ರಮದಲ್ಲಿ(Jayanagar celebration). ಜಯನಗರ ಸಂಭ್ರಮಕ್ಕೆ ಇಂದು ಕೊನೆ ದಿನ. ಮೊದಲ ದಿನ ಶಾಸಕ ಸಿ.ಕೆ ರಾಮಮೂರ್ತಿ ಮತ್ತು ನಮೋ ಭೂತಾತ್ಮ ಚಿತ್ರತಂಡ ಜಯನಗರ ಸಂಭ್ರಮಕ್ಕೆ ಅದ್ಧೂರಿ ಚಾಲನೆ ನೀಡಿತು. ಮೊದಲ ದಿನ ನಮೋ ಭೂತಾತ್ಮ-2(Namo Bhutatma-2) ಚಿತ್ರತಂಡ ಭಾಗವಹಿಸಿ ಜನರನ್ನು ನಕ್ಕು ನಗಿಸಿದ್ರೆ. ಎರಡನೇ ದಿನ ಕೌಸಲ್ಯ ಸುಪ್ರಜಾ ರಾಮ(Kausalya Supraja Rama) ಚಿತ್ರತಂಡ ಜಯನಗರ ಸಂಭ್ರಮಕ್ಕೆ ಆಗಮಿಸಿತ್ತು. ಸ್ಟಾರ್ ಜೋಡಿಗಳಾದ ಕೃಷ್ಣ-ಮಿಲನಾ ನಾಗರಾಜ್ ದಂಪತಿ ವೇದಿಕೆ ಮೇಲೆ ಒಟ್ಟಿಗೆ ಹೆಜ್ಜೆ ಹಾಕಿ, ಜಯನಗರ ಸಂಭ್ರಮಕ್ಕೆ ಆಗಮಿಸಿದ್ದ ಜನರನ್ನು ಖುಷಿಯಲ್ಲಿ ತೇಲಾಡಿಸಿದ್ರು. ಬ್ಯಾಂಬೂ ಇನ್ಸುಟ್ರುಮೆಂಟ್ ಕಲಾವಿದರ ಪರ್ಫಾರ್ಮೆನ್ಸ್ ಗೆ ಪ್ರೇಕ್ಷಕ ಫುಲ್ ಫಿದಾ ಆಗಿದ್ದು ಸಂಭ್ರಮಕ್ಕೆ ಹೊಸ ತೂಕ ಸಿಕ್ಕಂತಾಗಿತ್ತು. ಇಂದು ಜಯನಗರ ಸಂಭ್ರಮಕ್ಕೆ ಕೊನೆ ದಿನವಾಗಿದ್ದು, ನಿನ್ನೆ ಮೊನ್ನೆ ನಡೆದ ಸ್ಪರ್ಧೆಗಳ ಅಂತಿಮ ಸುತ್ತು ಇಂದು ನಡೆಯಲಿದೆ. ಬಹುಮಾನ ವಿತರಣಾ ಕಾರ್ಯಕ್ರಮ ಮತ್ತು ಸಮಾರೋಪ ಸಮಾರಂಭ ಕೂಡ ಜರುಗಲಿದೆ. ಈ ವರ್ಷದ ಜಯನಗರ ಸಂಭ್ರಮ ಕಣ್ತುಂಬಿಕೊಳ್ಳಲು ಇಂದೇ MES ಮೈದಾನಕ್ಕೆ ಭೇಟಿ ಕೊಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ‘ಒನ್ ಇಂಡಿಯಾ ಒನ್ ಕಾರ್ಡ್’ ಹೆಸರಲ್ಲಿ ವಂಚನೆ: ಖದೀಮರ ಜಾಲ ಪತ್ತೆ ಹಚ್ಚಿದ ವಿಜಯಪುರ ಪೊಲೀಸರು..!

Related Video