Asianet Suvarna News Asianet Suvarna News

‘ಒನ್ ಇಂಡಿಯಾ ಒನ್ ಕಾರ್ಡ್’ ಹೆಸರಲ್ಲಿ ವಂಚನೆ: ಖದೀಮರ ಜಾಲ ಪತ್ತೆ ಹಚ್ಚಿದ ವಿಜಯಪುರ ಪೊಲೀಸರು..!

ವಿಜಯಪುರದಲ್ಲಿ ಸೈಬರ್ ಕಳ್ಳರ ಹಾವಳಿ ದಿನೇ ದಿನೇ ಜಾಸ್ತಿಯಾಗಿದೆ. ಇದೀಗ ಕೇಂದ್ರ ಸರ್ಕಾರದ ಯೋಜನೆಯನ್ನೇ ದುರ್ಬಳಕೆ ಮಾಡಿಕೊಂಡು ಜನರಿಗೆ ವಂಚನೆ ಎಸಗಲಾಗಿದೆ. ಒನ್ ನೇಷನ್ ಒನ್ ಕಾರ್ಡ್ ಹೆಸರಲ್ಲಿ ಜನರಿಗೆ ಮಹಾದೋಖ ಮಾಡಿದವನು ಪೊಲೀಸರ ಅತಿಥಿಯಾಗಿದ್ದಾನೆ.
 

ಕೇಂದ್ರ ಸರ್ಕಾರದ ಮಹತ್ವದ  ಒನ್‌ ನೇಶನ್‌ ಒನ್‌ ಕಾರ್ಡ ಯೋಜನೆ(One Nation One Card scheme) ಬಗ್ಗೆ ಈಗಾಗಲೇ ಗೊತ್ತೆ ಇದೆ. ದೇಶದ ಜನರ ಅನುಕೂಲಕ್ಕಾಗಿ ಪ್ರಧಾನಿ ನರೇಂದ್ರ ಮೋದಿ(PM Modi) ಮಾರ್ಚ್‌ 2019ಕ್ಕೆ ಈ ಯೋಜನೆ ಲಾಂಚ್‌ ಮಾಡಿದ್ರು. ಕೇಂದ್ರದ ಯೋಜನೆಯ ಹೆಸರನ್ನೇ ಬಳಸಿಕೊಂಡು ಆಸಾಮಿಯೊಬ್ಬ ಭಾರಿ ವಂಚನೆ(Fraud) ಮಾಡಿದ್ದಾನೆ. ಆದ್ರೆ ವಿಜಯಪುರ ಪೊಲೀಸರು ಖತರ್ನಾಕ್ ಕಿಲಾಡಿಯ ಹೆಡೆಮುರಿಕಟ್ಟಿದ್ದಾರೆ. ಆಂಧ್ರ ಮೂಲದ ಆಸಾಮಿಯೊಬ್ಬ ಕೇಂದ್ರ ಸರ್ಕಾರದ ಯೋಜನೆಯ ಹೆಸರಲ್ಲಿ ರಾಜ್ಯದ ಮೂಲೆ-ಮೂಲೆಯಲ್ಲೂ ಹಣ ಸುಲಿದು ಮಹಾ ವಂಚನೆ ಮಾಡಿದ್ದಾನೆ. ಮೂಲತಃ ಆಂಧ್ರದ ಅನಂತಪುರ ಜಿಲ್ಲೆಯ ಸುಧೀರ್‌ ಬಾಬು ರೆಡ್ಡಿ ಎಂಬಾತನೇ ಈ ಖತರ್ನಾಕ್‌ ಆಸಾಮಿ. ಕೇಂದ್ರ ಸಾರಿಗೆ ಪಾವತಿಗಾಗಿ ಒನ್‌ ನೇಶನ್‌ ಒನ್‌ ಕಾರ್ಡ್‌ ಜಾರಿಗೆ ತಂದಿದ್ರೆ, ಇದನ್ನ ಸುಧೀರ್‌ ರೆಡ್ಡಿ ರಾಜ್ಯದಲ್ಲಿ ಬೇರೆಯದ್ದೆ ರೀತಿಯಲ್ಲಿ ಪರಿಚಯಿಸಿದ್ದ. ಒನ್‌ ನೇಶನ್‌ ಒನ್‌ ಕಾರ್ಡ್‌ ತಯಾರಿಕೆಗೆ ಕೇಂದ್ರದಿಂದ ನನಗೆ ಕರ್ನಾಟಕ ರಾಜ್ಯದ ಟೆಂಡರ್‌ ಸಿಕ್ಕಿದೆ ಎಂದು ಜನರನ್ನ ನಂಬಿಸಿದ್ದ. ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌, ರೇಶನ್‌ ಕಾರ್ಡ್‌, ಆರೋಗ್ಯ ಕಾರ್ಡಗಳನ್ನ ಸೇರಿಸಿ ಒಂದೇ ಕಾರ್ಡ್‌ ಆಗಿ ರೂಪಿಸಿ ಒನ್‌ ನೇಶನ್‌ ಒನ್‌ ಕಾರ್ಡಗಳನ್ನ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ವೀಕ್ಷಿಸಿ: ಭೂ ನುಂಗಣ್ಣರಿಗೆ ಶುರುವಾಯ್ತು ಢವಢವ: 5 ಸಾವಿರ ಎಕರೆಗೂ ಹೆಚ್ಚು ಸರ್ಕಾರಿ ಭೂಮಿ ಕಬಳಿಕೆ ಆರೋಪ