ಮಂಗಳೂರು ದಸರಾ: ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ದಸರಾ ಸಂಭ್ರಮದ ಝಲಕ್
ಅದು ಕರಾವಳಿಯ ಕ್ರಾಂತಿಕಾರಿ ದೇಗುಲ. ನವರಾತ್ರಿ ಬಂತಂದ್ರೆ ಸಾಕು ಅಲ್ಲಿ ಸ್ವರ್ಗವೇ ಧರೆಗಿಳಿಯುತ್ತದೆ. ನವದುರ್ಗೆಯರ ಆರಾಧನೆಯ ಜೊತೆಗೆ ಇಡೀ ನಗರ ವಿದ್ಯುತ್ ದೀಪಾಲಂಕಾರದಿಂದ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತದೆ.
ಮಂಗಳೂರು (ಅ.18): ಅದು ಕರಾವಳಿಯ ಕ್ರಾಂತಿಕಾರಿ ದೇಗುಲ. ನವರಾತ್ರಿ ಬಂತಂದ್ರೆ ಸಾಕು ಅಲ್ಲಿ ಸ್ವರ್ಗವೇ ಧರೆಗಿಳಿಯುತ್ತದೆ. ನವದುರ್ಗೆಯರ ಆರಾಧನೆಯ ಜೊತೆಗೆ ಇಡೀ ನಗರ ವಿದ್ಯುತ್ ದೀಪಾಲಂಕಾರದಿಂದ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತದೆ. ಮಂಗಳೂರು ದಸರಾ ಎಂದೇ ಪ್ರಸಿದ್ದಿ ಪಡೆದಿರುವ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ದಸರಾ ಸಂಭ್ರಮದ ಝಲಕ್ ಇಲ್ಲಿದೆ ನೋಡಿ. ಕತ್ತಲು ಕವಿದಾಗ ಇಡೀ ಊರನ್ನೇ ಬೆಳಕುಗೊಳಿಸಿ, ಎಲ್ಲರನ್ನೂ ಬೆರಗುಗಣ್ಣಿನಿಂದ ನೋಡುವಂತೆ ಮಾಡುವ ಈ ಬೆಳಕಿನ ಚಿತ್ತಾರ ಕಂಡು ಬಂದಿದ್ದು ಮಂಗಳೂರು ದಸರಾ ಉತ್ಸವದಲ್ಲಿ.
ಹೌದು ದಕ್ಷಿಣ ಭಾರತದ ಕ್ರಾಂತಿಕಾರಿ ದೇವಸ್ಥಾನ ಎಂದೇ ಪ್ರಸಿದ್ದಿ ಪಡೆದಿರುವ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ನವದುರ್ಗೆಯರ ಆರಾಧನೆಯ ಜೊತೆಗೆ ದಸರಾ ಪ್ರಮುಖ ಆಕರ್ಷಣೆಯಾಗಿ ಮಂಗಳೂರು ನಗರ ವಿದ್ಯುತ್ ದೀಪಾಲಂಕಾರಗಳಿಂದ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಇನ್ನು ಕುದ್ರೋಳಿ ದೇವಸ್ಥಾನವಂತೂ ಲಕ್ಷ ಲಕ್ಷ ದೀಪಗಳಿಂದ ವೈಭವಿಸುತ್ತಿದ್ದು, ಸ್ವರ್ಗವೇ ಧರೆಗಿಳಿದ ಸೌಂದರ್ಯವಿದೆ. ಶಿವನ ಆಲಯ ಪೂರ್ತಿ ಬಣ್ಣ ಬಣ್ಣದ ಬೆಳಕಿನ ಚಿತ್ತಾರದಲ್ಲಿ ಮುಳುಗಿದ್ದು,ಭಕ್ತರಿಗೆ ಕಣ್ಣುಗಳಿಗೆ ದೀಪಲಂಕಾರ ನೋಡೋದೆ ಕಣ್ಣಿಗೆ ಹಬ್ಬವಾಗಿದೆ.
ಬೆಳಕಿನ ಚಿತ್ತಾರದೊಂದಿಗೆ ಕ್ಷೇತ್ರದಲ್ಲಿ ಬಾನೆತ್ತರಕ್ಕೆ ಹಾರುವ ನೀರಿನ ಕಾರಂಜಿ ದಸರಾ ಸಂಭ್ರಮಕ್ಕೆ ತಿಲಕವಿಟ್ಟಂತಿದೆ. ಕುದ್ರೋಳಿಯ ದಸರಾ ಉತ್ಸವ ಮಂಗಳೂರು ದಸರಾ ಎಂದೇ ಪ್ರಸಿದ್ದಿಯಾಗಿದ್ದು,ಹಬ್ಬದ ಹಿನ್ನಲೆಯಲ್ಲಿ ಮಂಗಳೂರು ನಗರದ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಈ ದೀಪಗಳು ನಗರದ ಸೌಂದರ್ಯಕ್ಕೆ ಮುತ್ತಿನ ಸರದಲ್ಲಿ ಮುತ್ತಂತೆ ಪೊಣಿಸಿದ್ದು, ಎಲ್ಲರ ಕಣ್ಮಣ ಸೆಳೆಯುತ್ತಿದೆ. ಬೆಳಕಿನ ಉತ್ಸವ ನೋಡುಗರ ಕಣ್ಣಿಗೆ ಮಹದಾನಂದ ನೀಡಿದ್ದು ಸ್ವರ್ಗವೇ ನಾಚುವಂತೆ ಬೆಳಕಿನಿಂದ ಸಿಂಗರಿಸಲಾಗಿದೆ. ಈ ಹಿಂದೆ ದಸರಾ ಮೆರವಣಿಗೆ ಸಾಗುವ ರಸ್ತೆಯುದ್ದಕ್ಕೂ ದೇವಸ್ಥಾನದ ವತಿಯಿಂದ ದಾನಿಗಳ ಸಹಕಾರದಿಂದ ಲೈಟಿಂಗ್ಸ್ ವ್ಯವಸ್ಥೆ ಮಾಡಲಾಗುತ್ತಿತ್ತು.
ಆದ್ರೆ ಕಳೆದ ಮೂರು ವರ್ಷಗಳಿಂದ ರಸ್ತೆಗಳಲ್ಲಿ ದೀಪಾಲಂಕಾರದ ವ್ಯವಸ್ಥೆಯನ್ನು ಮಂಗಳೂರು ಮಹಾನಗರ ಪಾಲಿಕೆಯಿಂದ ಮಾಡಲಾಗುತ್ತಿದೆ. ಈ ಬಾರಿಯು ಸಹ ಸುಮಾರು 1.39 ಕೋಟಿ ವೆಚ್ಚದ ಲೈಟಿಂಗ್ ವ್ಯವಸ್ಥೆಯನ್ನು ಮಂಗಳೂರು ನಗರದಲ್ಲಿ ಮಾಡಲಾಗಿದೆ. ಒಟ್ಟಿನಲ್ಲಿ ಮೈಸೂರು ದಸರಾ ಸಂಭ್ರಮ ನಾಡಿನ ಶ್ರೀಮಂತ ಕಲೆಯ ಅನಾವರಣ ಮಾಡಿದ್ರೆ, ಮಂಗಳೂರು ದಸರಾ ಬೆಳಕಿನ ವಯ್ಯಾರದಿಂದ ಕರಾವಳಿಯ ಗತ ವೈಭವವನ್ನು ಹೊರಹಾಕುತ್ತದೆ. ಮಂಗಳೂರಿನ ಭೂರಮೆಗೆ ಸ್ವರ್ಗವೇ ಇಳಿದು ಬಂದಿದ್ದು, ಮಂಗಳೂರು ದಸರಾ ವೈಭವ ಕಾಣಲು ನೀವೂ ಒಮ್ಮೆ ಭೇಟಿ ನೀಡಿ.