Asianet Suvarna News Asianet Suvarna News

Udupi Krishna Mutt: ವಿದ್ಯಾಸಾಗರ ತೀರ್ಥರಿಗೆ ನಾಲ್ಕನೇ ಬಾರಿ ಕೃಷ್ಣ ಪೂಜೆಯ ಅಧಿಕಾರ

ಉಡುಪಿಯಲ್ಲಿ ಪರ್ಯಾಯ ಮಹೋತ್ಸವವು ಈ ಬಾರಿ ಸರಳವಾಗಿ, ಆದರೆ ಸಂಪ್ರದಾಯಬದ್ಧವಾಗಿ ನಡೆಯಿತು. 

ಉಡುಪಿ(Udupi)ಯಲ್ಲಿ ಎರಡು ವರ್ಷಕ್ಕೊಮ್ಮೆ ನಡೆವ ಪರ್ಯಾಯ ಮಹೋತ್ಸವ ಸಂಪ್ರದಾಯಬದ್ಧವಾಗಿ ನಡೆಯಿತು. ಕೋವಿಡ್(Covid) ನಿಯಮಾವಳಿಯ ಹಿನ್ನೆಲೆಯಲ್ಲಿ ನಾಡಹಬ್ಬದ ರೀತಿ ವಿಜೃಂಭಣೆಯಿಂದ ನಡೆಯುತ್ತಿದ್ದ ಪರ್ಯಾಯ ಮಹೋತ್ಸವ ಈ ಬಾರಿ ಸರಳವಾಗಿ ಸೀಮಿತ ಭಕ್ತರ ಎದುರಿನಲ್ಲಿ ನಡೆಯಿತು. ಈ ಬಾರಿ ಕೃಷ್ಣಾಪುರ(Krishnapur) ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರಿಗೆ ಕೃಷ್ಣಪೂಜೆಯ ಅಧಿಕಾರ ಹಸ್ತಾಂತರ ಮಾಡಲಾಯಿತು. ಅವರು ನಾಲ್ಕನೇ ಬಾರಿಗೆ ಸರ್ವಜ್ಞ ಪೀಠಾಲಂಕಾರ ಮಾಡುತ್ತಿದ್ದಾರೆ. 

Temple Special: ಮೂಕಾಸುರನ ವಧೆ ಮಾಡಿದ ಕೊಲ್ಲೂರು ಮೂಕಾಂಬಿಕೆಯ ಬಗ್ಗೆ ಆಸಕ್ತಿಕರ ವಿಷಯಗಳು

800 ವರ್ಷಗಳ ಹಿಂದೆ ದ್ವಾರಕೆಯಿಂದ ಹಡಗಿನಲ್ಲಿ ಬಂದ ಕಡಗೋಲು ಹಿಡಿದ ಕೃಷ್ಣನನ್ನು ಮಧ್ವಾಚಾರ್ಯರೆನಿಸಿಕೊಂಡ ಆನಂದ ತೀರ್ಥರು ಉಡುಪಿಯಲ್ಲಿ ಪ್ರತಿಷ್ಠಾಪಿಸಿದ್ದರು. ಅಂದಿನಿಂದಲೂ ಕೃಷ್ಣ ಪೂಜೆಯ ಅಧಿಕಾರ ಎಂಟು ಮಠಾಧೀಶರ ನಡುವೆ ನಿಯಮಬದ್ಧವಾಗಿ ಎರಡು ವರ್ಷಕ್ಕೊಮ್ಮೆ ಬದಲಾಗುತ್ತಲೇ ಬಂದಿದೆ. ಈ ಪರ್ಯಾಯ ಉತ್ಸವದ ವೈಶಿಷ್ಠ್ಯವೇನು, ಈ ಬಾರಿ ಅದು ಹೇಗೆ ನಡೆಯಿತು.. ಎಲ್ಲದರ ಸಂಪೂರ್ಣ ವಿಡಿಯೋ ರಿಪೋರ್ಟ್ ಇಲ್ಲಿದೆ. 

Video Top Stories