Coastal Karnataka: ಮಲ್ಯ, ಸಚಿನ್, ಶಾಸ್ತ್ರಿ.. ನಾಗಾರಾಧನೆ ನಂಬಿ ತುಳುನಾಡಿಗೆ ಬರುವ ಸೆಲೆಬ್ರಿಟಿಗಳು..

ತುಳುನಾಡಿನ ನಾಗದೇವರು ತನ್ನ ಮರೆತವರಿಗೆ ನೆನಪಿಸಿಕೊಡುತ್ತದೆ, ಕರೆಸಿಕೊಳ್ಳುತ್ತದೆ. ಬೇಡಿ ಬಂದವರನ್ನು ಅನುಗ್ರಹಿಸುತ್ತದೆ, ಬಿಟ್ಟು ಹಾಕಿದವರಿಗೆ ಪಾತಾಳದ ಮಣ್ಣು ಮುಕ್ಕಿಸುತ್ತದೆ. ಇದಕ್ಕೆ ಇಂಬು ಕೊಡುವ ಈ ಸೆಲೆಬ್ರಿಟಿಗಳ ಕತೆ ಕೇಳಿ.

Share this Video
  • FB
  • Linkdin
  • Whatsapp

ತುಳುನಾಡೆಂದರೆ ಅದಕ್ಕೂ ನಾಗಗಳಿಗೂ ಬಾದರಾಯಣ ಸಂಬಂಧ. ನಾಗಗಳು ತುಳುವರ ಆರಾಧ್ಯ ದೈವ. ಕರಾವಳಿಯ ಈ ಸರ್ಪಗಳು ನಡೆಸಿದ ಪವಾಡಗಳಿಗೆ ಲೆಕ್ಕವೇ ಇಲ್ಲ. ಆ ಪವಾಡಗಳನ್ನು ನೆಚ್ಚಿ, ವಿಜಯ್ ಮಲ್ಯ(Vijay Malya), ಸಚಿನ್ ತೆಂಡೂಲ್ಕರ್(Sachin Tendulkar), ರವಿಶಾಸ್ತ್ರಿ, ಕಪೂರ್ ಕುಟುಂಬ, ವರುಣ್ ಗಾಂಧಿ ಸೇರಿದಂತೆ ಸೆಲೆಬ್ರಿಟಿಗಳ ಹಿಂಡೇ ತುಳುನಾಡಿನ ನಾಗದೇವರನ್ನು ನಂಬಿ ಬರುತ್ತಾರೆ. ದೇವರಿಗೆ ನಾನಾ ಸೇವೆಗಳನ್ನು ಮಾಡಿಸುತ್ತಾರೆ ಎಂಬುದು ನಿಮಗೆ ಗೊತ್ತಾ? 

Chanakya Niti: ವೈವಾಹಿಕ ಜೀವನ ಹಾಳು ಮಾಡುವ ಆರು ಅಭ್ಯಾಸಗಳು

ಅರೆ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್‌ಗೂ ತುಳುನಾಡಿನ ನಾಗದೇವರಿಗೂ ಎಲ್ಲಿಯ ಸಂಬಂಧವಪ್ಪಾ? ಕರ್ನಾಟಕ(Karnataka)ಕ್ಕೆ ಎಲ್ಲಿಯ ನಂಟೂ ಇಲ್ಲದ ರವಿಶಾಸ್ತ್ರಿ ಪ್ರತಿ ವರ್ಷ ತುಳು ನಾಡಿಗೆ ಬರುವುದಾದರೂ ಏಕೆ? ಪೂರ್ವಜರು ನಡೆಸುತ್ತಿದ್ದ ನಾಗಾರಾಧನೆ ಮರೆತರೇ ವಿಜಯ್ ಮಲ್ಯ? ತಮ್ಮ ಪುತ್ರ ಸಿದ್ಧಾರ್ತ್ ಸರ್ಪದ ವಿಷಯದಲ್ಲಿ ಮಾಡಿದ ತಪ್ಪಿಗೆ ಸಾಮ್ರಾಜ್ಯವನ್ನೇ ಕಳೆದುಕೊಂಡು ನೆಲ ಕಚ್ಚಿದರೆ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಈ ವಿಡಿಯೋದಲ್ಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video