Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!

ಮಗಳಂತೆ ನೋಡಿಕೊಳ್ಳುತ್ತೇನೆ ಎಂದು ನಂಬಿಸಿ 16 ವರ್ಷದ ಯುವತಿಯನ್ನು ಕರೆದೊಯ್ದ ವ್ಯಕ್ತಿಯೇ ಆಕೆಯನ್ನು ಕೊಲೆ ಮಾಡಿದ್ದಾನೆ. ಒಂದೂವರೆ ವರ್ಷದ ನಂತರ, ಸೂಟ್‌ಕೇಸ್‌ನಲ್ಲಿ ಶವವನ್ನು ಬಿಸಾಡಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದ ಈ ಘೋರ ಕೃತ್ಯವು ಬಯಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Share this Video
  • FB
  • Linkdin
  • Whatsapp

'ಮಗಳಂತೆ ಸಲಹುವೆ' ಎಂದವರೇ ಮಾಡಿದ್ರು ಅಮಾನವೀಯ ಕೊಲೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಂಬಿಕೆಯೇ ಇಂದಿನ ಜಗತ್ತಿನಲ್ಲಿ ಅಪಾಯಕಾರಿ ಎಂಬ ಮಾತಿಗೆ ಈ ಘಟನೆ ಸಾಕ್ಷಿಯಾಗಿದೆ. ಕೇವಲ 16 ವರ್ಷದ ಹುಡುಗಿ ಸಂಗೀತಾಗೆ ಎಲ್ಲವಿದ್ದೂ ಯಾರೂ ಇಲ್ಲದಂತಹ ಸ್ಥಿತಿ. ತಾಯಿ ಕುಟುಂಬ ತೊರೆದಿದ್ದರೆ, ತಂದೆ ಅನಾರೋಗ್ಯ ಪೀಡಿತರು. ಇದ್ದ ಒಬ್ಬ ತಮ್ಮ ಸಂಬಂಧಿಕರ ಮನೆಯಲ್ಲಿದ್ದ. ಇಂತಹ ಸಂದರ್ಭದಲ್ಲಿ ಆಕೆಗೆ ಆಸರೆಯಾಗಿದ್ದು ಒಬ್ಬ ವ್ಯಕ್ತಿ. 'ನಿಮ್ಮ ಮಗಳನ್ನ ನಾನು ಮಗಳಂತೆಯೇ ಸಾಕುತ್ತೇನೆ' ಎಂದು ಆಕೆಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದ. ಆದರೆ, ಈ ಆಶ್ರಯದ ಹಿಂದೆ ಅಡಗಿತ್ತು ಒಂದು ಭೀಕರ ಕ್ರೌರ್ಯ.

ಸಂಗೀತಾಳನ್ನು ಕರೆದುಕೊಂಡು ಹೋದ ಎರಡು ವರ್ಷಗಳ ನಂತರ ತಂದೆ ಮಗಳನ್ನು ನೋಡಲು ಬಂದಾಗ, ಆಕೆ ಅಲ್ಲಿರಲಿಲ್ಲ. 'ಆಕೆ ಯಾರ ಜೊತೆಯೋ ಓಡಿಹೋಗಿದ್ದಾಳೆ' ಎಂದು ಆಶ್ರಯ ಕೊಟ್ಟವರು ಸುಳ್ಳು ಹೇಳಿದ್ದರು. ಮಗಳ ಮೇಲೆ ನಂಬಿಕೆ ಕಳೆದುಕೊಂಡ ಅಪ್ಪ ಅನಿವಾರ್ಯವಾಗಿ ಮೌನಕ್ಕೆ ಶರಣಾಗಿದ್ದರು. ಆದರೆ, ಸುಳ್ಳಿನ ಕಂತೆ ಅದೆಷ್ಟು ದಿನ ತಾನೆ ಅಡಗಿರುತ್ತದೆ? ಬರೋಬ್ಬರಿ ಒಂದೂವರೆ ವರ್ಷದ ನಂತರ ಅಸಲಿ ಸತ್ಯ ಹೊರಬಂದಿದೆ. ಆಶ್ರಯ ಕೊಟ್ಟವರೇ ಸಂಗೀತಾನನ್ನು ಕೊಲೆ ಮಾಡಿದ್ದರು!

ಪಿಜಿಯೊಂದರಲ್ಲಿ ಆಕೆಯನ್ನು ಕೊಂದ ಕಿರಾತಕರು, ಸಾಕ್ಷ್ಯ ನಾಶಪಡಿಸಲು ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಯಾರಿಗೂ ಸಿಗದಂತೆ ದೂರದ ಪ್ರದೇಶದಲ್ಲಿ ಬಿಸಾಡಿದ್ದರು. ಈ ರೋಚಕ ಹತ್ಯೆ ಪ್ರಕರಣ ಈಗ ಬಯಲಾಗಿದ್ದು, ಮಗಳಂತೆ ನೋಡಿಕೊಳ್ಳುತ್ತೇನೆ ಎಂದವರೇ ಹಂತಕರಾಗಿರುವುದು ಮನುಕುಲವೇ ತಲೆತಗ್ಗಿಸುವಂತೆ ಮಾಡಿದೆ. ಸದ್ಯ ಪೊಲೀಸರು ಈ ಕಿರಾತಕರನ್ನು ಜೈಲಿಗಟ್ಟಿದ್ದಾರೆ.

Related Video