ಜಗತ್ತು ಯುದ್ಧಭೂಮಿಯಾಗುತ್ತೆ ಎಂದು ಬಾಂಬ್ ಸಿಡಿಸಿದ ಬಬಲಾದಿ ಭವಿಷ್ಯ!

ಬೆಂಕಿ ಮಠವೆಂದೇ ಹೆಸರಾದ ಬಬಲಾದಿ ಮಠದ ಸಿದ್ದು ಮುತ್ಯಾ ಈ ವರ್ಷದ ಕಾಲಜ್ಞಾನ ಓದಿದ್ದು, ಭವಿಷ್ಯವು ಬೆಚ್ಚಿ ಬೀಳಿಸುವಂತಿದೆ. 

Share this Video
  • FB
  • Linkdin
  • Whatsapp

ಬಬಲಾದಿ ಮಠ(Babaladi Math)ಕ್ಕೆ ಬೆಂಕಿ ಮಠ ಎಂದೂ ಕರೆಯಲಾಗುತ್ತದೆ. ಇಲ್ಲಿನ ಸಿದ್ದು ಮುತ್ಯಾ((Siddu Muttya)) ಬಾಯಲ್ಲಿ ಬರುವ ಕೆಂಡದಂತ ಭವಿಷ್ಯಗಳಿಗಾಗಿ ಬೆಂಕಿ ಮಠ ಎಂಬ ಹೆಸರು ಬಂದಿದೆ. ಇಲ್ಲಿ ನುಡಿದ ಎಲ್ಲ ಭವಿಷ್ಯವಾಣಿಗಳೂ ನಿಜವಾಗಿವೆ. ಕೊರೋನಾ ಕಲ್ಪನೆಯೂ ಇಲ್ಲದಿದ್ದ ಸಂದರ್ಭದಲ್ಲಿ ಧೂಳಿ ವ್ಯಾಧಿ ಕಾಡಲಿದೆ ಎಂದು ಮಠ ಹೇಳಿತ್ತು. ಕಳೆದ ವರ್ಷವೇ ಯುದ್ಧ ನಡೆಯುವ ಬಗ್ಗೆ ಭವಿಷ್ಯ ನುಡಿದಿತ್ತು. ಈಗ ಅದೂ ಆಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಮಠದ ವಿಶೇಷವೆಂದರೆ 300 ವರ್ಷದ ಹಿಂದೆ ಸದಾಶಿವ ಅಜ್ಜನವರು ಬಬಲಾದಿ ಕ್ಷೇತ್ರದಲ್ಲಿ ನೆಲೆಸಿದ್ದರು. ಅವರೊಬ್ಬ ಪವಾಡ ಪುರುಷರು. ಅವರು ನುಡಿದ ಎಲ್ಲ ಮಾತುಗಳೂ ಸತ್ಯವಾಗಿವೆ. ಅವರು ಬರೆದಿರುವ ಕಾಲಜ್ಞಾನ ಇಂದು 12 ಪುಟಗಳಲ್ಲಿದೆ. ಪ್ರತಿ ವರ್ಷ ಅದನ್ನು ತೆರೆದು ಆಯಾ ವರ್ಷದ ಕಾಲಜ್ಞಾನ ಓದಲಾಗುತ್ತದೆ. ಈ ಎಲ್ಲ ಭವಿಷ್ಯಗಳೂ ಶೇ.100ರಷ್ಟು ನಿಜವಾಗಿವೆ ಎನ್ನುತ್ತಾರೆ ಮಠದ ಭಕ್ತರು. ವಿಷಯ ಅದಲ್ಲ, ಈ ವರ್ಷದ ಕುರಿತ ಶಿವರಾತ್ರಿ ಭವಿಷ್ಯ ಓದಿರುವ ಸಿದ್ದು ಮುತ್ಯಾ ಮುಂದಿನ ದಿನಗಳ ಕುರಿತು ಬೆಚ್ಚಿ ಬೀಳಿಸುವಂಥ ವಿಷಯಗಳನ್ನು ಅರುಹಿದ್ದಾರೆ. 

ಭೂಕಾಂತಿ ನಡುಗೀತು, ಮತ್ತೆ ಸುನಾಮಿ, ಸುಂಟರಗಾಳಿ, ಭೂಕಂಪನ ಹೆಚ್ಚೀತು
ಜಗತ್ತಿನಲ್ಲಿ ಹೆಚ್ಚಲಿದೆ ಪಾಪ, ಶುರುವಾಗಲಿದೆ ಕಲಿಪುರುಷನ ಅಸಲಿ ಆಟ
ಕೈ ಬಳೆ ಒಡೆದಾವು, ಕಣ್ಣೀರು ಹರಿದಾವು
ಎನ್ನುವ ಮೂಲಕ ಜಗತ್ತು ವಿನಾಶದ ಹತ್ತಿರದಲ್ಲಿದೆ ಎಂಬ ಸೂಚನೆ ನೀಡಿದ್ದಾರೆ.
ಯುರೋಪ್, ರಷ್ಯಾ ಇರಾನ್, ಅಮೆರಿಕ ದೇಶದಲ್ಲಿ ಕೇಡಿದೆ. ನಾ ಮುಂದು, ತಾಮುಂದು ಎಂದು ಜಗಳ ಕಲಹ ಹೆಚ್ಚುತ್ತದೆ. ಭೂಮಿ ಕುಪ್ಪಳಿಸುತ್ತೆ, ಆಂಧ್ರ, ತೆಲುಗು ರಾಜ್ಯಕ್ಕೆ ಕೇಡೈತೆ, ಯುದ್ಧ ಭಯವಿದೆ. ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಪಾಪ ಹೆಚ್ಚಲಿದೆ ಎಂದು ಈ ಬಾರಿಯ ಭವಿಷ್ಯ ಓದಿದ್ದಾರೆ ಮುತ್ಯಾ. 

Vastu Tips: ಪದೇ ಪದೆ ಹೊಟ್ಟೆನೋವು ಕಾಡುತ್ತಾ? ವಾಸ್ತುವಿನಲ್ಲಿದೆ ಪರಿಹಾರ!

ಇದರಿಂದ ಈ ವರ್ಷದ ಮುಂದಿನ ದಿನಗಳ ಬಗ್ಗೆ ಭಯ ಎದ್ದಿದೆ. 

Related Video