Vastu Tips: ಪದೇ ಪದೆ ಹೊಟ್ಟೆನೋವು ಕಾಡುತ್ತಾ? ವಾಸ್ತುವಿನಲ್ಲಿದೆ ಪರಿಹಾರ!
ಪದೇ ಪದೆ ಉದರ ಸಂಬಂಧಿ ಸಮಸ್ಯೆಗಳು ಕಾಣಿಸುತ್ತಾ? ಎಷ್ಟೇ ಔಷಧಿ ಮಾಡಿದರೂ ಪರಿಹಾರ ಸಿಗುತ್ತಿಲ್ಲ ಎನಿಸುತ್ತಾ? ವಾಸ್ತುವಿನಲ್ಲಿದೆ ಪರಿಹಾರ.
ವಾಸ್ತುವು ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗಿದೆ. ಉದ್ಯೋಗ ಸಂಬಂಧಿ ಸಮಸ್ಯೆಗಳಿರಬಹುದು, ಆರ್ಥಿಕ ತೊಂದರೆಗಳು(financial problems), ಮಕ್ಕಳ ಓದಿನ ಸಮಸ್ಯೆಗಳು, ಆರೋಗ್ಯ ಸಮಸ್ಯೆಗಳು(health issue)- ಎಲ್ಲಕ್ಕೂ ವಾಸ್ತುವಿನಲ್ಲಿ ಪರಿಹಾರವಿದೆ. ಹಾಗೆ ವಾಸ್ತುವಿನಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಏನೆಲ್ಲ ಸಲಹೆಗಳಿವೆ, ವಿಶೇಷವಾಗಿ ಪದೇ ಪದೆ ಕಾಡುವ ಹೊಟ್ಟೆನೋವಿನಿಂದ ಮುಕ್ತರಾಗಲು ಏನು ಮಾಡಬೇಕು?
ಹೊಟ್ಟೆನೋವು, ಜೀರ್ಣಕ್ರಿಯೆಯ ಸಮಸ್ಯೆಗಳು(Digestive Problems), ಗ್ಯಾಸ್ಟಿಕ್, ಅಜೀರ್ಣ- ಹೀಗೆ ಜೀರ್ಣ ಕ್ರಿಯೆಗೆ ಸಂಬಂಧಿಸಿದಂತೆ ಒಂದಿಲ್ಲೊಂದು ಸಮಸ್ಯೆ ಮನೆಯಲ್ಲಿ ಒಬ್ಬರಿಗಾದರೂ ಕಾಡುತ್ತಲೇ ಇರುತ್ತದೆ. ಒಂದು ತಿಂದರೆ ಪಿತ್ತ, ಮತ್ತೊಂದು ತಿಂದರೆ ಅಜೀರ್ಣ ಎಂದು ಆಹಾರವೇ ಸರಿ ಹೋಗುತ್ತಿರುವುದಿಲ್ಲ. ಈ ಜೀರ್ಣ ಸಮಸ್ಯೆಗಳಿಗೆ ಹಲವಾರು ಮನೆ ಮದ್ದುಗಳಿವೆ. ಅಲೋಪತಿ ಔಷಧಗಳಿವೆ. ಆದರೆ, ವಾಸ್ತುವಿನ ಈ ಸಲಹೆಗಳು ಕೂಡಾ ಉದರ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ನಿಮಗೆ ಗೊತ್ತೇ? ಹೌದು, ಅದಕ್ಕಾಗಿ ನೀವು ಮಾಡಬೇಕಾದ್ದಿಷ್ಟು;
ಹಳದಿ ವಿಗ್ರಹ
ಹಳದಿ ವಸ್ತುವನ್ನು ಮನೆಯ ನೈಋತ್ಯ(southwest) ಭಾಗದಲ್ಲಿ ಇರಿಸಿ. ವಾಸ್ತು ಪ್ರಕಾರ, ಮನೆಯ ನೈಋತ್ಯ ಭಾಗದಲ್ಲಿ ಹಳದಿ ವಸ್ತುಗಳನ್ನು ಇಡುವುದರಿಂದ ಮನೆಯ ಎಲ್ಲ ಸದಸ್ಯರ ಆರೋಗ್ಯ ಸುಧಾರಿಸುತ್ತದೆ. ಹಳದಿ ಬಣ್ಣದ ಯಾವುದೇ ಶೋ ಪೀಸ್ ಇಲ್ಲವೇ ಹಳದಿ ಕಲ್ಲ(yellow stone)ನ್ನು ಈ ದಿಕ್ಕಿನಲ್ಲಿ ಇರಿಸಬಹುದು. ಇಲ್ಲದಿದ್ದರೆ ದೇವರ ಹಳದಿ ವಿಗ್ರಹ ಇಡಬಹುದು. ಏಕೆಂದರೆ ಹಳದಿ ಬಣ್ಣಕ್ಕೂ ಆರೋಗ್ಯಕ್ಕೂ ನಂಟಿದೆ.
ಹಳದಿ ಹಣ್ಣು, ತರಕಾರಿಗಳು
ಅಡುಗೆ ಮನೆಯಲ್ಲಿ ಸಾಕಷ್ಟು ಹಣ್ಣು ತರಕಾರಿಗಳು ತುಂಬಿರುವಂತೆ ನೋಡಿಕೊಳ್ಳಿ. ವಿಶೇಷವಾಗಿ ಹಳದಿ ಬಣ್ಣದ ತರಕಾರಿಗಳು ಹಾಗೂ ಹಣ್ಣುಗಳು ಅಡುಗೆ ಮನೆಯಲ್ಲಿ ಸದಾ ಇರಬೇಕು. ಈ ಬಣ್ಣದ ಹಣ್ಣು ತರಕಾರಿಗಳು ಹೊಟ್ಟೆಯ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿವೆ. ಅಂದರೆ, ಬಾಳೆಹಣ್ಣು, ಹಳದಿ ದೊಣ್ಣೆಮೆಣಸು, ಅನಾನಸ್, ಸಿಹಿ ಜೋಳ, ನಿಂಬೆಹಣ್ಣು, ಕಿತ್ತಳೆ, ಮೂಸಂಬಿ ಇತ್ಯಾದಿ. ಅಡುಗೆಮನೆಯಲ್ಲಿ ಇವುಗಳು ಹೆಚ್ಚಿರಬೇಕೆಂಬ ಅರ್ಥ ಇವುಗಳ ಸೇವನೆ ಕೂಡಾ ದೈನಂದಿನ ಆಹಾರದ ಭಾಗವಾಗಬೇಕು ಎಂದು. ಇದಲ್ಲದೇ, ಅಡುಗೆಮನೆಯಲ್ಲಿನ ಹಳದಿ ಬಣ್ಣದ ಬೇಳೆಕಾಳುಗಳು ಕೂಡಾ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ. ವಿಶೇಷವಾಗಿ ಹೊಟ್ಟೆನೋವಿನ ಸಮಸ್ಯೆಯಿಂದ ಮುಕ್ತರಾಗಲು ಅಡುಗೆಮನೆಯ ದಕ್ಷಿಣ ದಿಕ್ಕಿನಲ್ಲಿ ಹಳದಿ ವಸ್ತುಗಳನ್ನಿರಿಸಿ.
ಹರಿಹರರ ಸಂಗಮ ಈ ಪ್ರಸಿದ್ಧ ಅರ್ಲವಾಡ ಸೂರ್ಯ ದೇಗುಲ
ಒಂದು ವೇಳೆ ಕುಟುಂಬದಲ್ಲಿ ಎಲ್ಲರಿಗೂ ಒಂದಿಲ್ಲೊಂದು ದೈಹಿಕ ಸಮಸ್ಯೆಗಳು ಕಾಡುತ್ತಿದ್ದರೆ, ಆಗ ಈ ವಾಸ್ತು ಸಲಹೆ ಪರಿಗಣಿಸಿ. ಮನೆಯ ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ಕನ್ನಡಿಯನ್ನು ಇರಿಸಿ. ಈ ಕನ್ನಡಿಯು ಮನೆಯ ಎಲ್ಲ ರೋಗಗಳನ್ನು ಗುಣಪಡಿಸುತ್ತದೆ. ಕನ್ನಡಿ ಯಾವ ಗಾತ್ರದ್ದಾದರೂ ಪರವಾಗಿಲ್ಲ, ಅದು ಮನೆಯ ಕೆಟ್ಟ ಶಕ್ತಿಗಳನ್ನು ಹೊರಗೆ ಕಳುಹಿಸುತ್ತದೆ. ಇದಲ್ಲದೆ, ಹಾರ್ಸ್ ಶೂ ಕಬ್ಬಿಣವನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ಕೂಡಾ ಆರೋಗ್ಯ ಸುಧಾರಿಸುತ್ತದೆ. ಇದನ್ನು ಶನಿವಾರದ ದಿನ ಮನೆಗೆ ತಂದಿಟ್ಟುಕೊಳ್ಳಬೇಕು. ಗೋಡೆಗೆ ಕುಂಕುಮ ಹಚ್ಚಿ ಮೇಲೆ ಈ ಕಬ್ಬಿಣ ಇಡಬೇಕು.
ಭಕ್ತರ ಪ್ರಶ್ನೆಗಳಿಗೆ ಸ್ಥಳದಲ್ಲೇ ಉತ್ತರಿಸುತ್ತೆ ಹಾಲು ರಾಮೇಶ್ವರ ದೇವಾಲಯದ ಚಮತ್ಕಾರಿ ಕೊಳ!
ಅಗ್ನಿ
ವಾಯುವ್ಯ ಮೂಲೆಯಲ್ಲಿ ಪ್ರತಿ ದಿನ ದೀಪ ಹಚ್ಚುವುದು ಅಥವಾ ಸ್ಟೌ ಹಚ್ಚುವುದರಿಂದ ಅದು ಮನೆ ಮಂದಿಯಲ್ಲಿ ಉತ್ತಮ ಆರೋಗ್ಯವನ್ನು ಹೊತ್ತು ತರುತ್ತದೆ. ಸರಿಯಾದ ದಿಕ್ಕಿನಲ್ಲಿ ಪ್ರವಹಿಸುವ ಬೆಂಕಿ ಯಾವತ್ತೂ ಪಾಸಿಟಿವ್ ಎನರ್ಜಿ ತರುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.