
ಕೊಳ್ಳುವ ದಿನವಲ್ಲ, ಕೊಡುವ ದಿನ ಅಕ್ಷಯ ತೃತೀಯ
ಅಕ್ಷಯ ತೃತೀಯದ ದಿನ ಏನು ಮಾಡಬೇಕು, ಯಾರನ್ನು ಆರಾಧಿಸಬೇಕು, ಚಿನ್ನ ಖರೀದಿಸಲೇಬೇಕೇ? ಈ ದಿನದ ದಾನ ಮಹತ್ವವನ್ನು ಶ್ರೀಕಂಠ ಶಾಸ್ತ್ರಿಗಳು ವಿವರಿಸುತ್ತಾರೆ.
ವೈಶಾಖ ಮಾಸದ ಶುಕ್ಲ ತೃತೀಯ ಒಂದು ವಿಶೇಷ ದಿನ. ಅಕ್ಷಯ ತೃತೀಯ ಎಂಬ ಹೆಗ್ಗಳಿಕೆ ಹೊಂದಿರುವ ಈ ದಿನ ಪರಶುರಾಮ ಜಯಂತಿ, ಬಸವೇಶ್ವರ ಜಯಂತಿ ಕೂಡಾ ಹೌದು. ಅಕ್ಷಯಕ್ಕೆ ಅಧಿಪತಿಯಾಗಿರುವವನು ಪರಮೇಶ್ವರ. ಇಂದು ಅವನ ಆರಾಧನೆ ಮಾಡಬೇಕು. ಅಲ್ಲದೆ, ಅಕ್ಷಯ ತೃತೀಯದ ದಿನ ಚಿನ್ನ ಖರೀದಿಸುವ ಸಂಪ್ರದಾಯವಿದೆ. ಆದರೆ, ಶಾಸ್ತ್ರಗಳಲ್ಲಿ ಎಲ್ಲಿಯೂ ಈ ದಿನ ಚಿನ್ನ ಖರೀದಿಸಲು ಹೇಳಿಲ್ಲ. ಬದಲಿಗೆ ಈ ದಿನ ಕೊಡುವ ದಾನದಿಂದ ಸಿಗುವ ಪುಣ್ಯ ಅಕ್ಷಯವಾಗುತ್ತದೆ ಎಂದು ಹೇಳಲಾಗಿದೆ ಎನ್ನುತ್ತಾರೆ ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು.
ಅಕ್ಷಯ ತೃತೀಯದ ದಿನ ಚಿನ್ನ ಖರೀದಿ ಬೇಡವೇ ಬೇಡ, ಬೆಳ್ಳಿ ಕೊಳ್ಳಿ
ಹೌದು, ಅಕ್ಷಯ ತೃತೀಯದ ದಿನ ಮಾಡುವ ದಾನಕ್ಕೆ ಮಹತ್ವವಿದೆ. ಈ ದಿನ ಏನು ದಾನ ಮಾಡಬೇಕು, ಯಾರಿಗೆ ಮಾಡಬೇಕು ಸೇರಿದಂತೆ ಈ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.