ಅಕ್ಷಯ ತೃತೀಯದ ದಿನ ಚಿನ್ನ ಖರೀದಿ ಬೇಡವೇ ಬೇಡ, ಬೆಳ್ಳಿ ಕೊಳ್ಳಿ

ಅಕ್ಷಯ ತೃತೀಯದ ದಿನ ಚಿನ್ನ ಖರೀದಿಯಿಂದ ಒಳಿತಿಗಿಂತ ಕೆಡುಕೇ ಹೆಚ್ಚಾಗುವುದು ಅಂತಾರೆ ಬ್ರಹ್ಮಾಂಡ ಗುರೂಜಿ. ಯಾಕೆ ಎಂಬ ವಿವರ ತಿಳಿಯಿರಿ. 

Share this Video
  • FB
  • Linkdin
  • Whatsapp

ಅಕ್ಷಯ ತೃತೀಯ ಸಂಭ್ರಮ ಎಲ್ಲೆಡೆ ಜೋರಾಗಿದೆ. ಜನರು ಬಂಗಾರ ಖರೀದಿಸಲು ಸಂಪೂರ್ಣ ಸಜ್ಜಾಗಿದ್ದಾರೆ. ಬಂಗಾರದಂಗಡಿಗಳಲ್ಲಿ ಕಾಲು ಹಾಕಲೂ ಜಾಗವಿಲ್ಲದಷ್ಟು ಜನಜಂಗುಳಿ ಅಕ್ಷಯ ತೃತೀಯದ ದಿನ ಕಾಣಿಸುತ್ತದೆ. ಈ ದಿನ ಬಂಗಾರ ಖರೀದಿಸಿದರೆ ಸಮೃದ್ಧಿ ಹೆಚ್ಚುತ್ತದೆ ಎಂಬ ಸಂದೇಶ ಎಲ್ಲೆಡೆ ಓಡಾಡುತ್ತಿದೆ. ಆದರೆ ಈ ದಿನ ಬಂಗಾರ ಖರೀದಿ ಬೇಡವೇ ಬೇಡ, ಬಂಗಾರ ಖರೀದಿಸಲು ಯಾವ ಶಾಸ್ತ್ರದಲ್ಲಿಯೂ ಹೇಳಿಲ್ಲ. ಬೇಕಿದ್ದರೆ ಕೊಂಚ ಬೆಳ್ಳಿ ಖರೀದಿ ಮಾಡಿ ಎನ್ನುತ್ತಾ ಕಾರಣಗಳನ್ನು ನೀಡಿದ್ದಾರೆ ಬ್ರಹ್ಮಾಂಡ ಗುರೂಜಿ ಖ್ಯಾತಿಯ ನರೇಂದ್ರ ಬಾಬು ಶರ್ಮಾ. 

ರಾಶಿಗನುಗುಣವಾಗಿ Akshaya Tritiyaದಂದು ಈ ಲೋಹ ಖರೀದಿಸಿ ಅದೃಷ್ಟ ಹೆಚ್ಚಿಸಿಕೊಳ್ಳಿ..

ಅಷ್ಟೇ ಅಲ್ಲ, ಮಂಗಳವಾರದ ದಿನ ರೋಹಿಣಿ ನಕ್ಷತ್ರದಲ್ಲಿ ಅಕ್ಷಯ ತೃತೀಯ ಬಂದಿರುವುದು ಶುಭವೇ ಅಶುಭವೇ? ಅಕ್ಷಯ ತೃತೀಯದಂದು ಏನು ಮಾಡಬೇಕು? ಬಸವ ಜಯಂತಿ, ರಾಮಾನುಜಂ ಜಯಂತಿ, ಶಂಕರ ಜಯಂತಿಯ ದಿನವೂ ಆದ ಈ ದಿನ ಏನೆಲ್ಲ ದಾನ ಮಾಡಬೇಕು? ಯಾಕಾಗಿ ಮಾಡಬೇಕು ಎಂಬ ವಿವರಗಳನ್ನು ಗುರೂಜಿ ತಿಳಿಸಿದ್ದಾರೆ. 

Related Video