Asianet Suvarna News Asianet Suvarna News

ಮುಂದಿನ ವರ್ಷ ದೊಡ್ಮನೆಯಿಂದ ಸಿಕ್ತಿದೆ ಬಿಗ್ ನ್ಯೂಸ್: ಯುವನ ಜತೆ ನಟಿಸಬೇಕಾ? ಇಲ್ಲಿದೆ ಚಾನ್ಸ್!

ಸ್ಯಾಂಡಲ್‌ವುಡ್‌ನ ದೊಡ್ಮನೆ ಅಪ್ಪು ಇಲ್ಲದೇ ನೊಂದು ಬೆಯುತ್ತಿದೆ. ಪವರ್ ಸ್ಟಾರ್‌ರನ್ನ ಕಳೆದು ಕೊಂಡ ನೋವು ಎಂದೂ ಮಾಸಲ್ಲ. ಆ ನೋವು ಒಂದ್ ಕಡೆ ಆದ್ರೆ ಮನೆ ಮಗನ ನೆನಪಲ್ಲೇ ದೊಡ್ಮನೆಯಿಂದ ಮತ್ತೊಬ್ಬ ಬಿಗ್ ಸ್ಟಾರ್ ಹುಟ್ಟಿಕೊಳ್ಳುತ್ತಿದ್ದಾರೆ. 

ಸ್ಯಾಂಡಲ್‌ವುಡ್‌ನ ದೊಡ್ಮನೆ ಅಪ್ಪು ಇಲ್ಲದೇ ನೊಂದು ಬೆಯುತ್ತಿದೆ. ಪವರ್ ಸ್ಟಾರ್‌ರನ್ನ ಕಳೆದು ಕೊಂಡ ನೋವು ಎಂದೂ ಮಾಸಲ್ಲ. ಆ ನೋವು ಒಂದ್ ಕಡೆ ಆದ್ರೆ ಮನೆ ಮಗನ ನೆನಪಲ್ಲೇ ದೊಡ್ಮನೆಯಿಂದ ಮತ್ತೊಬ್ಬ ಬಿಗ್ ಸ್ಟಾರ್ ಹುಟ್ಟಿಕೊಳ್ಳುತ್ತಿದ್ದಾರೆ. ಅವರೇ ರಾಘವೇಂದ್ರ ರಾಜ್‌ಕುಮಾರ್ ಕಿರಿಯ ಪುತ್ರ ಯುವ ರಾಜ್ ಕುಮಾರ್. ದೊಡ್ಮನೆಯ ಜ್ಯೂ. ಪವರ್ ಸ್ಟಾರ್ ಅಂತಲೇ ಕರೆಸಿಕೊಳ್ಳುತ್ತಿರೋ ಯುವ ರಾಜ್‌ಕುಮಾರ್ ಬೆಳ್ಳಿತೆರೆ ಎಂಟ್ರಿಯಾಗೋದಕ್ಕೆ ವೇದಿಕೆ ಸಿದ್ಧವಾಗಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಯುವ ರಾಜ್‌ಮಾರ್‌ರನ್ನ ಬಿಗ್ ಸ್ಕ್ರೀನ್‌ಗೆ ಲಾಂಚ್ ಮಾಡುತ್ತಿದ್ದಾರೆ. 

ಪುನೀತ್ ರಾಜ್‌ಕುಮಾರ್ ಉತ್ತರಾಧಿಕಾರಿ ಎಂದೇ ಕರೆಸಿಕೊಳ್ಳುತ್ತಿರುವ ಯುವ ರಾಜ್‌ಕುಮಾರ್ ಅಭಿನಯಿಸೋ ಮೊದಲ ಸಿನಿಮಾದ ಮೇಲೆ ಅಪ್ಪು ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇದೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಶುರುವಾಗುತ್ತಿದೆ ಅಂತ ನಿರ್ದೇಶಕ ಸಂತೋಷ್ ಆನಂದ್ ರಾಮ್ ತಿಳಿಸಿದ್ದಾರೆ. ಇದೀಗ ಆ ಸಿನಿಮಾದಲ್ಲಿ ನಟಿಸೋ ಕಲಾವಿದರಿಗೆ ಸುವರ್ಣಾವಕಾಶ ಒಂದು ಸಿಗುತ್ತಿದೆ. ಜ್ಯೂ. ಪವರ್ ಸ್ಟಾರ್ ಜೊತೆ ನಟಿಸೋಕೆ ಕಲಾವಿಧರಿಗಾಗಿ ಆಡಿಷನ್ ಕರೆಯಲಾಗಿದೆ. 16 ರಿಂದ 25 ವರ್ಷದೊಳಗಿನ ಕಲಾವಿದರು ಈ  ಆಡಿಷನ್‌ನಲ್ಲಿ ಭಾಗವಹಿಸಬಹುದು. ಮಂಗಳೂರು ನಗರದ ಕೂಟಕ್ಕಳ ಆಡಿಟೋರಿಯಂನಲ್ಲಿ ನವೆಂಬರ್ 26ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆಡಿಷನ್ ನಡೆಯಲಿದೆ. ಈ ಆಡಿಷನ್‌ನಲ್ಲಿ ಸೆಲೆಕ್ಟ್ ಆಗೋ ಅದೃಷ್ಟವಂತ ಕಲಾವಿದರಿಗೆ ಆಲ್‌ ದ ಬೆಸ್ಟ್ ಹೇಳೋಣ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment