ತೆರಿಗೆ ವಂಚಿಸಿದ್ರಾ ನಟ ಆರ್ಯ? ಪಾಪರಾಜಿಗಳಿಂದ ಸಮಂತಾಗೆ ಕಿರಿಕಿರಿ..!

ನಟಿ ಸಮಂತಾ ರುತ್ ಪ್ರಭು ಮುಂಬೈನಲ್ಲಿದ್ದಾರೆ. ಅಲ್ಲಿಯೇ ಅವರು ಜಿಮ್​ಗೆ ತೆರಳಿದ್ದಾರೆ. ಅವರ ಫೋಟೋ ಮತ್ತು ವಿಡಿಯೋ ಚಿತ್ರಿಸುವ ಸಲುವಾಗಿ ಪಾಪರಾಜಿಗಳು ಮುಗಿಬಿದ್ದಿದ್ದಾರೆ. ಇದರಿಂದ ಸಮಂತಾಗೆ ಕೋಪ ಬಂದಿದೆ. ಬೇಡ ಎಂದರೂ ಕೂಡ ತಮ್ಮ ಫೋಟೋ ತೆಗೆಯಲು ಬಂದ ಪಾಪರಾಜಿಗಳ ಮೇಲೆ ಸಮಂತಾ ಗರಂ ಆಗಿದ್ದಾರೆ.

Share this Video
  • FB
  • Linkdin
  • Whatsapp

ತೆರಿಗೆ ವಂಚಿಸಿದ್ರಾ ನಟ ಆರ್ಯ?
ಸ್ಟಾರ್ ನಟ ಆರ್ಯ ವಿರುದ್ಧ ತೆರಿಗೆ ಕದ್ದ ಆರೋಪ ಕೇಳಿ ಬಂದಿದೆ. ಇದೇ ಕಾರಣಕ್ಕೆ ಇಂದು ಆರ್ಯ ಅವರ ಮಾಲೀಕತ್ವದ ಹೋಟೆಲ್ ​ಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಟ ಮತ್ತು ನಿರ್ಮಾಪಕರೂ ಆಗಿರುವ ಆರ್ಯ ‘ಸೀ ಶೆಲ್’ ಹೆಸರಿನ ಹೋಟೆಲ್ ರೆಸ್ಟೊರೆಂಟ್ ಹೊಂದಿದ್ದಾರೆ. ಆ ಹೋಟೆಲ್ ಗಳಿಂದ ದೊಡ್ಡ ಮೊತ್ತದ ಆದಾಯವನ್ನು ಆರ್ಯ ಪಡೆಯುತ್ತಿದ್ದು, ಆದರೆ ಆದಾಯವನ್ನು ಸರ್ಕಾರದಿಂದ ಮುಚ್ಚಿಟ್ಟಿದ್ದಾರೆ ಎಂಬ ಆರೋಪದ ಮೇಲೆ ಆರ್ಯ ಗೆ ಸೇರಿದ ಸೀ ಶೆಲ್ ರೆಸ್ಟೋರೆಂಟ್​ನ ಹಲವಾರು ಬ್ರ್ಯಾಂಚ್​ಗಳ ಮೇಲೆ ಏಕಕಾಲಕ್ಕೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಪಾಪರಾಜಿಗಳಿಂದ ಸಮಂತಾಗೆ ಕಿರಿಕಿರಿ..!
ನಟಿ ಸಮಂತಾ ರುತ್ ಪ್ರಭು ಮುಂಬೈನಲ್ಲಿದ್ದಾರೆ. ಅಲ್ಲಿಯೇ ಅವರು ಜಿಮ್​ಗೆ ತೆರಳಿದ್ದಾರೆ. ಅವರ ಫೋಟೋ ಮತ್ತು ವಿಡಿಯೋ ಚಿತ್ರಿಸುವ ಸಲುವಾಗಿ ಪಾಪರಾಜಿಗಳು ಮುಗಿಬಿದ್ದಿದ್ದಾರೆ. ಇದರಿಂದ ಸಮಂತಾಗೆ ಕೋಪ ಬಂದಿದೆ. ಬೇಡ ಎಂದರೂ ಕೂಡ ತಮ್ಮ ಫೋಟೋ ತೆಗೆಯಲು ಬಂದ ಪಾಪರಾಜಿಗಳ ಮೇಲೆ ಸಮಂತಾ ಗರಂ ಆಗಿದ್ದಾರೆ. ಈ ಸಂದರ್ಭದ ವಿಡಿಯೋ ಈಗ ವೈರಲ್ ಆಗಿದೆ. ಪಾಪರಾಜಿಗಳ ಈ ವರ್ತನೆಯನ್ನು ಕಿರುಕುಳ ಎಂದು ನೆಟ್ಟಿಗರು ಹೇಳಿದ್ದಾರೆ. ಸೆಲೆಬ್ರಿಟಿಗಳ ಖಾಸಗಿತನಕ್ಕೆ ಗೌರವ ಕೊಡಿ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.

ಆಲ್ಫಾ ಮೆನ್ ಲವ್ ವೈಲೆನ್ಸ್ ಸಿನಿಮಾ ಮೇಕಿಂಗ್ರಿಲೀಸ್:
ಆಲ್ಫಾ ಮೆನ್ ಲವ್ ವೈಲೆನ್ಸ್ ಈಗಾಗಲೇ ಫಸ್ಟ್ಲುಕ್ನಿಂದಲೇ ಸದ್ದು ಮಾಡಿದ ಸಿನಿಮಾ.. ಗೀತಾ , ಹೊಯ್ಸಳ ಸಿನಿಮಾವನ್ನ ನಿರ್ದೇಶನ ಮಾಡಿದ್ದ ವಿಜಯ್ಅವ್ರೇ ಆಕ್ಷನ್ಕಟ್ಹೇಳ್ತಿರೋ ಸಿನಿಮಾ ಆಲ್ಫಾ... ಹೀರೋ ಫಸ್ಟ್ಲುಕ್ಹಾಗೂ ಥೀಮ್ಮ್ಯೂಸಿಕ್ನಿಂದ ಗಮನ ಸೆಳೆದಿದ್ದ ಆಲ್ಫಾ ಸಿನಿಮಾತಂಡ ಸದ್ಯ ಚಿತ್ರದ ಮೇಕಿಂಗ್ರಿಲೀಸ್ಮಾಡೋದ್ರ ಜೊತೆಗೆ ಹೀರೋಯಿನ್ಅನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ. ಹೇಮಂತ್ಕುಮಾರ್ನಾಯಕನಾಗಿ ಆಕ್ಟ್ಮಾಡ್ತಿರೋ ಆಲ್ಫಾ ಮೆನ್ ಲವ್ ವೈಲೆನ್ಸ್ ಸಿನಿಮಾಗೆ ಗೋಪಿಕಾ ಸುರೇಶ್ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆಲ್ಫಾ ಮೆನ್ ಲವ್ ವೈಲೆನ್ಸ್ ಚಿತ್ರದಲ್ಲಿ ಅಚ್ಚುತ್ಕುಮಾರ್ , ರಮೇಶ್ಇಂದಿರಾ, ಬಾಲು ನಾಗೇಂದ್ರ, ಅವಿನಾಶ್ಮಾನ್ಸಿ ಸುಧೀರ್ ಹೀಗೆ ಸಾಕಷ್ಟು ಕಲಾವಿದರು ಚಿತ್ರದಲ್ಲಿ ಭಾಗಿಯಾಗಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ಉಸಿರು ಟೀಸರ್ ರಿಲೀಸ್..!
ಆರ್.ಎಸ್.ಪಿ. ಪ್ರೊಡಕ್ಷನ್ಸ್ ನ ಲಕ್ಷ್ಮಿ ಹರೀಶ್ ನಿರ್ಮಾಣದ ಸಸ್ಪೆನ್ಸ್ , ಥ್ರಿಲ್ಲರ್ ಕಥಾಹಂದರ ಒಳಗೊಂಡ ಉಸಿರು ಸಿನಿಮಾ ಬಿಡುಗಡೆ ಆಗುತ್ತಿದೆ. ನಟ ತಿಲಕ್ ಈ ಸಿನಿಮಾದಲ್ಲಿ ನಾಯಕನಾಗಿದ್ದು, ಪ್ರಿಯಾ ಹೆಗ್ಡೆ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಉಸಿರು ಸಿನಿಮಾಗೆ ಪ್ರಭಾಕರ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ ಈ ಸಿನಿಮಾದ ಟೀಸರ್ನ್ನು ನಟ ಶ್ರೀನಗರ ಕಿಟ್ಟಿ ಹಾಗೂ ರವಿ ಆರ್.ಗರಣಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಮೂಡಿಗೆರೆ ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದೆ.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

Related Video