ಯ್ಯೂಟೂಬ್ನಿಂದ ಮಾರ್ಟಿನ್ ಟೀಸರ್ ಡಿಲೀಟ್: ಹ್ಯಾಕರ್ಸ್ ಕೈವಾಡದ ಶಂಕೆ
ಮಾರ್ಟಿನ್ ಸಿನಿಮಾ ಬಿಡುಗಡೆಗೂ ಮುನ್ನವೇ ಚಿತ್ರತಂಡಕ್ಕೆ ಹ್ಯಾಕರ್ಸ್ ಶಾಕ್ ನೀಡಿದ್ದಾರೆ. ಸದ್ಯ ಯ್ಯೂಟೂಬ್ನಲ್ಲಿ ಸಿನಿಮಾ ಟೀಸರ್ ಡಿಲೀಟ್ ಆಗಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದ ಧ್ರುವ ಸರ್ಜಾ ಸಿನಿಮಾ ಟೀಸರ್ ಯ್ಯೂಟೂಬ್ನಲ್ಲಿ ಸಖತ್ ಸದ್ದು ಮಾಡಿತ್ತು. ಆದ್ರೆ ಇದೀಗ ಆ ಸಿನಿಮಾ ಟೀಸರ್ ಅಲ್ಲಿ ಕಾಣಿಸ್ತಾನೆ ಇಲ್ಲ. ನಾವು ನಿಮಗೆ ಇಲ್ಲಿ ಹೇಳುತ್ತಿರುವುದು ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾದ ಬಗ್ಗೆ. ಈ ಸಿನಿಮಾ ಟೀಸರ್ ತೆಗೆದುಹಾಕಲಾಗಿದ್ದು, ಚಿತ್ರ ಬಿಡುಗಡೆಗೂ ಮುನ್ನವೇ ಚಿತ್ರತಂಡಕ್ಕೆ ಹ್ಯಾಕರ್ಸ್ ಶಾಕ್ ನೀಡಿದ್ದಾರೆ. ರಷ್ಯಾದ ಹ್ಯಾಕರ್ಸ್ ಟೀಸರ್ ಡಿಲೀಟ್ ಮಾಡಿದ್ದಾರೆ ಎನ್ನಲಾಗ್ತಿದೆ. ಈ ಸಿನಿಮಾ ಟೀಸರ್ ಲಹರಿ ಆಡಿಯೋದಲ್ಲಿ ಬಿಡುಗಡೆಯಾಗಿದ್ದು, ಸಖತ್ ಸದ್ದು ಮಾಡಿತ್ತು. 83.50 ಮಿಲಿಯನ್ ವೀಕ್ಷಣೆ ಪಡೆದು ಹೊಸ ರೆಕಾರ್ಡ್ ಬರೆದಿತ್ತು. ಆದ್ರೆ ಇದೀಗ ಸಿನಿಮಾ ಟೀಸರ್ ಡಿಲೀಟ್ ಆಗಿದ್ದು, ಸಿನಿಮಾ ತಂಡ ಅದನ್ನು ಮರಳಿ ಪಡೆಯಲು ಹರಸಾಹಸ ಪಡುತ್ತಿದೆ.
ಇದನ್ನೂ ವೀಕ್ಷಿಸಿ: ಧ್ರುವ ಸರ್ಜಾ 'ಕೆಡಿ' ಅಡ್ಡಾಗೆ ಮಚ್ ಲಕ್ಷ್ಮಿ ಪ್ರತ್ಯಕ್ಷ: ನಾಯಕಿ ಆಗಲಿದ್ದಾರಾ ರೀಷ್ಮಾ ನಾಣಯ್ಯ ?