ಧ್ರುವ ಸರ್ಜಾ 'ಕೆಡಿ' ಅಡ್ಡಾಗೆ ಮಚ್‌ ಲಕ್ಷ್ಮಿ ಪ್ರತ್ಯಕ್ಷ: ನಾಯಕಿ ಆಗಲಿದ್ದಾರಾ ರೀಷ್ಮಾ ನಾಣಯ್ಯ ?

ಪ್ರೇಮ್  ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಕೆಡಿ’ ಒಂದಲ್ಲಾ ಒಂದು ವಿಚಾರವಾಗಿ ಸೌಂಡ್ ಮಾಡುತ್ತಲೇ ಇದೆ. ಇದೀಗ ಈ ಸಿನಿಮಾ ನಾಯಕಿ ಬಗ್ಗೆ ಏ.28ರಂದು ತಿಳಿಯಲಿದೆ.

Share this Video
  • FB
  • Linkdin
  • Whatsapp

ಕನ್ನಡದಲ್ಲಿ ಪ್ಯಾನ್‌ ಇಂಡಿಯಾ ಲೇವೆಲ್‌ನಲ್ಲಿ ಸೌಂಡ್‌ ಮಾಡಲು ಸಿದ್ಧವಾಗ್ತಿದೆ ಕೆಡಿ ಸಿನಿಮಾ. ಈ ಸಿನಿಮಾದಲ್ಲಿ ನಟ ಧ್ರುವ ಸರ್ಜಾ ನಟಿಸುತ್ತಿದ್ದಾರೆ. ಮತ್ತೊಂದೆಡೆ ನಿರ್ದೇಶಕ ಜೋಗಿ ಪ್ರೇಮ್‌ ಈ ಸಿನಿಮಾ ನಿರ್ದೇಶಿಸಲಿದ್ದಾರೆ. ಆದ್ರೆ ಚಿತ್ರತಂಡ ಇಲ್ಲಿತನಕ ಅಧಿಕೃತವಾಗಿ ನಾಯಕಿಯರ ಬಗ್ಗೆ ಏನು ಹೇಳಿಲ್ಲ. ಈಗಾಗಲೇ ಹಲವು ಪರಭಾಷಾ ನಾಯಕಿಯರ ಹೆಸರು ಕೇಳಿಬರುತ್ತಿದೆ. ಆದ್ರೆ ಈಗ ಧ್ರವ ಕೆಡಿ ಅಡ್ಡದಲ್ಲಿ ಮಚ್‌ ಲಕ್ಷ್ಮಿ ಪ್ರತ್ಯಕ್ಷವಾಗಿದ್ದಾಳೆ. ಪ್ರೇಮ್‌ ಸೃಷ್ಟಿಸಿರುವ ಈ ಮಚ್‌ ಲಕ್ಷ್ಮಿ ಎಂಟ್ರಿಗೆ ಈಗಾಗಲೇ ಕೌಂಟ್‌ಡೌನ್‌ ಶುರುವಾಗಿದೆ. ಈ ಬಗ್ಗೆ ಪೋಸ್ಟರ್‌ನನ್ನು ಸಹ ಬಿಡಲಾಗಿದೆ. ‘ಕೆಡಿ’ ಸಿನಿಮಾದ ನಾಯಕಿಯ ಪರಿಚಯವನ್ನು ಏಪ್ರಿಲ್ 28ಕ್ಕೆ ಮಾಡುವುದಾಗಿ ನಿರ್ದೇಶಕ ಜೋಗಿ ಪ್ರೇಮ್ ತಿಳಿಸಿದ್ದಾರೆ. ಇನ್ನೂ KDಗೆ ಪರಭಾಷಾ ನಟಿ ಅಲ್ಲ, ಹೊಸ ಮುಖ ಕೂಡ ಅಲ್ಲ, ರೀಷ್ಮಾ ನಾಣಯ್ಯ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಸಿನಿಮಾ ಚಿತ್ರೀಕರಣದಲ್ಲೂ ಅವರು ಭಾಗಿ ಆಗಿದ್ಧಾರೆ ಎಂದು ಹೇಳಲಾಗ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video