
ರಚನಾ ರೈ ಜೊತೆ ರೊಮ್ಯಾಂಟಿಕ್ ಮೂಡ್‌ನಲ್ಲರೋ 'ದಿ ಡೆವಿಲ್'.. ಒಂದೇ ಒಂದು ಸಲ' ಏನ್ ಮಾಡ್ತಾರಂತೆ?
ಒಂದೇ ಒಂದು ಸಲ ಸಾಂಗ್ನಲ್ಲಿ ದರ್ಶನ್ ಅಂಡ್ ರಚನಾ ಹಾಟ್ ಕೆಮೆಸ್ಟ್ರಿ ಇರಲಿದೆ ಅನ್ನೋದ್ರ ಸೂಚನೆ ಕೊಟ್ಟಿದೆ ಪೋಸ್ಟರ್. ಪ್ರಮೋದ್ ಮರವಂತೆ ಈ ಹಾಡಿಗೆ ಲಿರಿಕ್ಸ್ ಬರೆದಿದ್ದು ಅಜನೀಶ್ ಲೋಕನಾಶ್ ಮ್ಯೂಸಿಕ್ ಇದೆ.
ಕಾಂತಾರ ಅಬ್ಬರದ ನಡುವೆ ದರ್ಶನ್ ತೂಗುದೀಪ (Darshan Thoogudeepa) ನಟನೆಯ ದಿ ಡೆವಿಲ್ ಸಿನಿಮಾ ತಂಡ ಹೊಸ ನ್ಯೂಸ್ವೊಂದನ್ನ ಕೊಟ್ಟಿದೆ. ಮೊದಲ ಹಾಡು ರಿಲೀಸ್ ಮಾಡಿ ಇದ್ರೆ ನೆಮ್ಮದಿಯಾಗ್ ಇರ್ಬೇಕ್ ಅಂತ ಸಾರಿದ್ದ ಡೆವಿಲ್ ಟೀಂ, ಈಗ ‘ಒಂದೇ ಒಂದು ಸಲ’ ಅನ್ನೋ ರೊಮ್ಯಾಂಟಿಕ್ ಸಾಂಗ್ನ ರಿಲೀಸ್ ಮಾಡೋದಕ್ಕೆ ಸಜ್ಜಾಗಿದೆ.
ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಪರದಾಡ್ತಾ ಇರೋದು, ಹಾಸಿಗೆ ದಿಂಬಿಗಾಗಿ ಪದೇ ಪದೇ ಕೋರ್ಟ್ ನಲ್ಲಿ ವಾದ ಪ್ರತಿವಾದ ನಡೀತಾ ಇರೋದು ಗೊತ್ತೇ ಇದೆ. ಒಂದೇ ಒಂದು ಸಲ ಹಾಸಿಗೆ ದಿಂಬು ಕೊಟ್ಬಿಡಿ ಅಂತಿರೋ ದರ್ಶನ್ ಕಥೆ ಇದಲ್ಲ. ಇದು ದಿ ಡೆವಿಲ್ ಕುರಿತ ಕಹಾನಿ.
ದಿ ಡೆವಿಲ್ ಸಿನಿಮಾದ ಮೊದಲ ಹಾಡು ಇದ್ರೆ ನೆಮ್ಮದಿಯಾಗ್ ಇರ್ಬೇಕ್ ಟ್ರೆಂಡ್ ಸೃಷ್ಟಿಸಿರೋದು ಗೊತ್ತೇ ಇದೆ. ಹಾಡಿನ ಲಿರಿಕ್ಸ್, ಮ್ಯೂಸಿಕ್ ಅಷ್ಟೋಂದು ಮಜ ಕೊಡದೇ ಹೋದ್ರೂ ಇದ್ರೆ ನೆಮ್ಮದಿಯಾಗ್ ಇರ್ಬೇಕ್ ಅನ್ನೋ ಒಂದು ಸಾಲಂತೂ ಭಾರೀ ಸದ್ದು ಮಾಡಿದೆ.
ಮತ್ತೀಗ ದಿ ಡೆವಿಲ್ ಸಿನಿಮಾದ ಎರಡನೇ ಹಾಡು ಒಂದೇ ಒಂದು ಸಲ ಅಕ್ಟೋಬರ್ 10 ರಿಲೀಸ್ ಆಗಲಿದೆ. ಇದು ಪಕ್ಕಾ ರೊಮ್ಯಾಂಟಿಕ್ ಸಾಂಗ್. ಸದ್ಯ ರಿಲೀಸ್ ಆಗಿರೋ ಪೋಸ್ಟರ್ ನಲ್ಲಿ ನಾಯಕಿ ರಚನಾ ರೈ ಹಾಟ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಪಡ್ಡೆ ಹೈಕಳು ಫುಲ್ ಫಿಧಾ ಆಗಿದ್ದಾರೆ.
ಒಂದೇ ಒಂದು ಸಲ ಸಾಂಗ್ನಲ್ಲಿ ದರ್ಶನ್ ಅಂಡ್ ರಚನಾ ಹಾಟ್ ಕೆಮೆಸ್ಟ್ರಿ ಇರಲಿದೆ ಅನ್ನೋದ್ರ ಸೂಚನೆ ಕೊಟ್ಟಿದೆ ಪೋಸ್ಟರ್. ಪ್ರಮೋದ್ ಮರವಂತೆ ಈ ಹಾಡಿಗೆ ಲಿರಿಕ್ಸ್ ಬರೆದಿದ್ದು ಅಜನೀಶ್ ಲೋಕನಾಶ್ ಮ್ಯೂಸಿಕ್ ಇದೆ.
ದರ್ಶನ್ ಸಿನಿಮಾಗಳಲ್ಲಿ ಅದೆಷ್ಟು ಮಾಸ್ ಹಾಡುಗಳಿರ್ತಾವೋ ಜೊತೆಗೊಂದು ರೊಮ್ಯಾಂಟಿಕ್ ನಂಬರ್ ಕೂಡ ಇದ್ದೇ ಇರುತ್ತೆ. ಯಜಮಾನ, ಕ್ರಾಂತಿ, ರಾಬರ್ಟ್, ಕಾಟೇರಗಳಲ್ಲಿ ಇದು ವರ್ಕ್ ಆಗಿದೆ.
ದಿ ಡೆವಿಲ್ ಟೀಸರ್, ಪೋಸ್ಟರ್ ನೋಡ್ತಿದ್ರೆ ಇದು ಪಕ್ಕಾ ಮಾಸ್ ಸಿನಿಮಾ ಅನ್ನೋದು ಗೊತ್ತಾಗುತ್ತೆ. ಈ ಮಾಸ್ ನಡುವೆ ಒಂಚೂರು ಮಸಾಲೆ ಕೂಡ ಇದೆ ಅನ್ನೋದಕ್ಕೆ ಈ ಸಾಂಗ್ ಸಾಕ್ಷಿ.
ದಿ ಡೆವಿಲ್ ಸಿನಿಮಾದ ರಿಲೀಸ್ ಡಿಸೆಂಬರ್ 12ಕ್ಕೆ ಫಿಕ್ಸ್ ಆಗಿದೆ. ಸಿನಿತಂಡ ಇನ್ನೂ ಪ್ರಚಾರವನ್ನ ಶುರುಮಾಡಿಲ್ಲ. ಎರಡನೇ ಸಾಂಗ್ ಮೂಲಕ ಪ್ರಚಾರ ಕೂಡ ಶುರುಮಾಡಲಿರೋ ಡೆವಿಲ್ ಟೀಂ.. ಸಿನಿಮಾದಲ್ಲಿರೋ ಒಂದೋಂದೇ ಸರ್ಪ್ರೈಸ್ಗಳನ್ನ ರಿವೀಲ್ ಮಾಡೋ ತಯಾರಿಯಲ್ಲಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ನೋಡಿ...