ಶಿವಣ್ಣನ ಹಾಡಿಗೆ ಶಾರುಖ್ ಸ್ಟೆಪ್: ದಿಗ್ಗಜರ ಜೋಶ್ ನೋಡಿ ಫ್ಯಾನ್ಸ್ ಖುಷ್

ಬಾಲಿವುಡ್ ಕಿಂಗ್‌ ಖಾನ್‌ ಶಾರುಖ್ ಖಾನ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿದೆ.
 

Share this Video
  • FB
  • Linkdin
  • Whatsapp

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಬಾಲಿವುಡ್ ನಟ ಶಾರುಖ್ ಖಾನ್ ಒಂದೇ ವೇದಿಕೆಯಲ್ಲಿ ಮುಖಾಮುಖಿ ಆಗಿದ್ದಾರೆ. ವೇದಿಕೆಯಲ್ಲಿ ನಟ ಶಿವರಾಜ್ ಕುಮಾರ್ ಜೋಗಿ ಸಿನಿಮಾದ ಹಾಡನ್ನು ಹಾಡಿದರು. ಇದೇ ವೇಳೆ ಶಿವಣ್ಣನ ಹಾಡಿಗೆ ಶಾರುಖ್ ಖಾನ್ ಕುಣಿದು ಕುಪ್ಪಳಿಸಿದ್ದಾರೆ. ನೆರೆದಿದ್ದ ಇಬ್ಬರ ಅಭಿಮಾನಿಗಳು ಭಾರೀ ಶಿಳ್ಳೆ ಚಪ್ಪಾಳೆ ಹೊಡೆದು ಕೇಕೆ ಹಾಕಿದ್ದಾರೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ‌.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video