Asianet Suvarna News Asianet Suvarna News

ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಶುರುವಾಯ್ತು ಡಾಲಿ ದರ್ಬಾರ್: ಧನಂಜಯ್ ಹೊಯ್ಸಳ ಟೀಸರ್ ರಿಲೀಸ್‌ಗೆ ಡೇಟ್ ಫಿಕ್ಸ್!

ಕನ್ನಡದ ನಟ ರಾಕ್ಷಸ ಡಾಲಿ ಧನಂಜಯ್ ಕಳೆದ ವರ್ಷ ಆರು ಸಿನಿಮಾಗಳಲ್ಲಿ ಮಿಂಚಿದ್ರು. ಆದ್ರೆ 2022 ಡಾಲಿ ಪಾಲಿಗೆ ದೊಡ್ಡ ಸಕ್ಸಸ್ ತಂದು ಕೊಡ್ಲಿಲ್ಲ, ಭಟ್ ಡಾಲಿ ಕೀರ್ತಿಗೇನು ಕಡಿಮೆ ಆಗಿಲ್ಲ. ಅದು ಹೆಚ್ಚಾಗ್ತಾನೆ ಹೋಯ್ತು.

ಕನ್ನಡದ ನಟ ರಾಕ್ಷಸ ಡಾಲಿ ಧನಂಜಯ್ ಕಳೆದ ವರ್ಷ ಆರು ಸಿನಿಮಾಗಳಲ್ಲಿ ಮಿಂಚಿದ್ರು. ಆದ್ರೆ 2022 ಡಾಲಿ ಪಾಲಿಗೆ ದೊಡ್ಡ ಸಕ್ಸಸ್ ತಂದು ಕೊಡ್ಲಿಲ್ಲ, ಭಟ್ ಡಾಲಿ ಕೀರ್ತಿಗೇನು ಕಡಿಮೆ ಆಗಿಲ್ಲ. ಅದು ಹೆಚ್ಚಾಗ್ತಾನೆ ಹೋಯ್ತು. ಯಾಕಂದ್ರೆ ಧನಂಜಯ್ ಮಾಡಿದ ಕ್ಯಾರೆಕ್ಟರ್‌ಗಳು ಬೆಳ್ಳಿತೆರೆ ಮೇಲೆ ಮಾರ್ಕ್ ಮಾಡಿದ್ವು. ಈಗ ಮತ್ತೆ ನಟ ರಾಕ್ಷಸನ ಆರ್ಭಟ ಮೇಳೈಸೋಕೆ ಹೊಯ್ಸಳ ಬರ್ತಾ ಇದ್ದಾನೆ. ಡಾಲಿ ಪೊಲೀಸ್ ಕಾಪ್ ಆಗಿ ನಟಿಸಿರೋ ಹೊಯ್ಸಳ ಟೀಸರ್ ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿದೆ. ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದ 'ಹೊಯ್ಸಳ' ಚಿತ್ರದ ಟೀಸರ್ ಫೆಬ್ರವರಿ 5ಕ್ಕೆ ರಿಲೀಸ್ ಆಗ್ತಿದೆ. 

ಹೊಯ್ಸಳ ಡಾಲಿಯ 25ನೇ ಸಿನಿಮಾ ಅನ್ನೋದು ಮತ್ತೊಂದು ಸ್ಪೆಷಲ್. ವಿಜಯ್.ಎನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರೋ ಹೊಯ್ಸಳ ಮಾರ್ಚ್ 30ಕ್ಕೆ ರಿಲೀಸ್ ಆಗ್ತಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಕಾರ್ತಿಕ್ ಎಸ್ ಛಾಯಾಗ್ರಹಣ ಇರೋ ಈ ಸಿನಿಮಾದಲ್ಲಿ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಧನಂಜಯ ಹಾಗೂ ಅಮೃತ ಅಯ್ಯಂಗಾರ್ ಕಾಂಬೋ ಮತ್ತೆ ಹೊಯ್ಸಳನಲ್ಲಿ ನೋಡ್ಬಹುದು. ಇನ್ನುಳಿದಂತೆ ಅಚ್ಯುತಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ ಹಾಗೂ ನಾಗಭೂಷಣ್ ಈ ಸಿನಿಮಾದ ಪಾರ್ಟ್ ಆಗಿದ್ದಾರೆ. ಜೆಸ್ಟ್ ಒಂದು ಪೋಸ್ಟರ್‌ನೀಂದ ಸ್ಯಾಂಡಲ್‌ವುಡ್‌ನಲ್ಲಿ ಸೌಂಡ್ ಮಾಡಿರೋ ಹೊಯ್ಸಳ ಟೀಸರ್ ಹೇಗಿರುತ್ತೆ ಅನ್ನೋ ಕುತೂಹಲ ಡಾಲಿ ಫ್ಯಾನ್ಸ್‌ಗೆ ಹೆಚ್ಚಾಗಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories