Asianet Suvarna News Asianet Suvarna News

ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಓಪನ್‌ ಅಗುತ್ತಾ..?

ಕೋವಿಡ್‌ ತಾಂತ್ರಿಕ ಸಮಿತಿ ಜೊತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸುರೇಶ್‌ ಕುಮಾರ್‌ ಸಭೆ| ಸಭೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ,ಆಯುಕ್ತರು ಭಾಗಿ| ತಜ್ಞರಿಂದ ರಾಜ್ಯ ಸರ್ಕಾರಕ್ಕೆ ಸಲಹೆ| 

Jan 28, 2021, 3:15 PM IST

ಬೆಂಗಳೂರು(ಜ.28): ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನ ತೆರೆಯಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಕೋವಿಡ್‌ ತಾಂತ್ರಿಕ ಸಮಿತಿ ಜೊತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸುರೇಶ್‌ ಕುಮಾರ್‌ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ,ಆಯುಕ್ತರು ಭಾಗಿಯಾಗಿದ್ದಾರೆ. 

ಮಂತ್ರಿಯಾಗುವ ಅಸೆಗೆ ತಣ್ಣೀರು: MLC ವಿಶ್ವನಾಥ್‌ಗೆ ಸುಪ್ರೀಂನಲ್ಲೂ ಹಿನ್ನಡೆ

ಶಾಲೆಗಳನ್ನ ಅರಂಭಿಸುವುದಕ್ಕೆ ಇದು ಸೂಕ್ತ ಸಮಯಾನಾ? ಎಂಬುದರ ಬಗ್ಗೆ ತಜ್ಞರಿಂದ ರಾಜ್ಯ ಸರ್ಕಾರಕ್ಕೆ ಸಲಹೆಯನ್ನ ಕೊಡಲಿದೆ. ಕೋವಿಡ್‌ ತಾಂತ್ರಿಕ ಸಮಿತಿಯ ಅಭಿಪ್ರಾಯವನ್ನ ಪಡೆದು ಮುಂದಿನ ನಿರ್ಧಾರವನ್ನ ರಾಜ್ಯ ಸರ್ಕಾರ ತೆಗೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ.