Asianet Suvarna News Asianet Suvarna News

ಮಂತ್ರಿಯಾಗುವ ಆಸೆಗೆ ತಣ್ಣೀರು: MLC ವಿಶ್ವನಾಥ್‌ಗೆ ಸುಪ್ರೀಂನಲ್ಲೂ ಹಿನ್ನಡೆ

ವಿಶ್ವನಾಥ್‌ ಮಂತ್ರಿಯಾಗುವಂತಿಲ್ಲ ಎಂಬ ಹೈಕೋರ್ಟ್‌ ಆದೇಶವನ್ನ ಎತ್ತಿ ಹಿಡಿದ ಸುಪ್ರೀಂ| ಹೈಕೋರ್ಟ್‌ ಅದೇಶ ಪ್ರಶ್ನಿಸಿದ ವಿಶ್ವನಾಥ್‌ ಅರ್ಜಿ ವಜಾ| ಎಲೆಕ್ಷನ್‌ನಲ್ಲಿ ಸೋತ ವಿಶ್ವನಾಥ್‌ ಸಚಿವರಾಗುವಂತಿಲ್ಲ ಎಂಬ ಹೈಕೋರ್ಟ್‌ ಆದೇಶ| 

First Published Jan 28, 2021, 3:02 PM IST | Last Updated Jan 28, 2021, 3:24 PM IST

ಬೆಂಗಳೂರು(ಜ.28): ಬಿಜೆಪಿ ಎಂಎಲ್‌ಸಿ ಹೆಚ್‌. ವಿಶ್ವನಾಥ್‌ ಅವರಿಗೆ ಸುಪ್ರೀಂಕೋರ್ಟ್‌ನಲ್ಲೂ ಹಿನ್ನೆಡೆಯಾಗಿದೆ. ಹೌದು, ವಿಶ್ವನಾಥ್‌ ಮಂತ್ರಿಯಾಗುವಂತಿಲ್ಲ ಎಂಬ ಹೈಕೋರ್ಟ್‌ ಆದೇಶವನ್ನ ಸುಪ್ರೀಂ ಕೂಡ ಎತ್ತಿ ಹಿಡಿದಿದೆ. ಹೈಕೋರ್ಟ್‌ ಅದೇಶವನ್ನ ವಿಶ್ವನಾಥ್‌ ಅವರು ಪ್ರಶ್ನಿಸಿದ ಅರ್ಜಿಯನ್ನ ಸುಪ್ರೀಂಕೋರ್ಟ್‌ ವಜಾಗೊಳಿಸಿದೆ. ಈ ಮೂಲಕ ಮಂತ್ರಿಯಾಗಬೇಕು ಎಂಬ ವಿಶ್ವನಾಥ್‌ ಅಸೆಗೆ ಸುಪ್ರೀಂ ತಣ್ಣೀರು ಎರಚಿದೆ. ಎಲೆಕ್ಷನ್‌ನಲ್ಲಿ ಸೋತ ವಿಶ್ವನಾಥ್‌ ಅವರು ಸಚಿವರಾಗುವಂತಿಲ್ಲ ಎಂದು ಹೈಕೋರ್ಟ್‌ ಹೇಳಿತ್ತು.

ಖತರ್ನಾಕ್ ಖಲಿಸ್ತಾನ್ ರಕ್ತಚರಿತ್ರೆ: ರೈತ ಹೋರಾಟದಲ್ಲಿ ಬೇಳೆ ಬೇಯಿಸಿಕೊಂಡವರ ಕರಾಳ ಕಥೆ!

Video Top Stories