BIG 3 ವರದಿ: ಎಚ್ಚೆತ್ತ ಸರ್ಕಾರ, 10 ಲಕ್ಷ ವೆಚ್ಚದಲ್ಲಿ ವಿದ್ಯಾರ್ಥಿನಿಯರಿಗೆ ಹೈಟೆಕ್ ಶೌಚಾಲಯ ನಿರ್ಮಾಣ!
ಆ ಗ್ರಾಮದ ಮಕ್ಕಳು ಶಾಲೆಗೆ ಹೋಗಬೇಕು ಅಂದ್ರೆ ಸಾಕು ಅದೊಂದು ಕಾರಣಕ್ಕೆ ಹಿಂದೇಟು ಹಾಕ್ತಿದ್ರು. ಮರ್ಯಾದೆಗೆ ಅಂಜಿ ಮನೆಯಲ್ಲಿ ಕೂರ್ತಿದ್ರು.ಈ ಬಗ್ಗೆ ಗ್ರಾಮಸ್ಥರು ನಿರಂತರ ಹೋರಾಟ ಕೂಡ ಮಾಡಿದ್ರು.
ಧಾರವಾಡ (ಮಾ.23): ಆ ಗ್ರಾಮದ ಮಕ್ಕಳು ಶಾಲೆಗೆ ಹೋಗಬೇಕು ಅಂದ್ರೆ ಸಾಕು ಅದೊಂದು ಕಾರಣಕ್ಕೆ ಹಿಂದೇಟು ಹಾಕ್ತಿದ್ರು. ಮರ್ಯಾದೆಗೆ ಅಂಜಿ ಮನೆಯಲ್ಲಿ ಕೂರ್ತಿದ್ರು.ಈ ಬಗ್ಗೆ ಗ್ರಾಮಸ್ಥರು ನಿರಂತರ ಹೋರಾಟ ಕೂಡ ಮಾಡಿದ್ರು. ಆದ್ರೂ ಆ ಸಮಸ್ಯೆ ಮಾತ್ರ ಸಮಸ್ಯೆ ಆಗಿಯೇ ಉಳಿದಿತ್ತು. ಬಿಗ್-3 ಎಂಟ್ರಿ ಆದಮೇಲೆ ಏನೆಲ್ಲಾ ಆಯ್ತು ಗೊತ್ತಾ? ಈ ಸ್ಟೋರಿ ನೋಡಿ. ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಬ್ಯಾಲಾಳ ಗ್ರಾಮದ, ಗುಮ್ಮಗೋಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಬ್ಯಾಲಾಳದಲ್ಲಿ 200ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ರು. ಆದರೆ ಈ ಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯ ಇರಲಿಲ್ಲ. ಈ ಕಾರಣದಿಂದಾಗಿ ಗ್ರಾಮದಲ್ಲಿ ಹೆಣ್ಣು ಮಕ್ಕಳನ್ನ ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದರು.
ಕಳೆದ ಮೂರು ನಾಲ್ಕು ವರ್ಷದಿಂದ ಶಾಲೆಯಲ್ಲಿ ಶೌಚಾಲಯ ಇಲ್ಲದಕ್ಕೆ ಮಕ್ಕಳು ಬಯಲನ್ನೇ ಅವಲಂಬಿಸಿದ್ರು. ಇದನ್ನ ಕಂಡ ಗ್ರಾಮದ ಪ್ರಮುಖರು ಸ್ವಂತ ಖರ್ಚಿನಿಂದ ಒಂದು ಸ್ಡ್ಯಾಂಡ್ ಮಾಡಿ ಅದಕ್ಕೆ ಟಾರ್ಪಪಲ್ ಹಾಕಿದ್ದಾರೆ ತಾತ್ಕಲಿಕವಾಗಿ ಶೌಚಾಆಲಯ ಮಾಡಿದ್ದರು. ಆ ತಾಡಪಾಲ್ ಕೂಡಾ ಹರಿದು ಹೋಗಿತ್ತು. ಇದರಿಂದ ಮಕ್ಕಳು ಮರಿಯಾದೆಗೆ ಅಂಜುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಸುವರ್ಣನ್ಯೂಸ್ ಬಿಗ್-3 ಸಂಬಂಧ ಪಟ್ಟ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿತ್ತು. ಇನ್ನು ಬಿಗ್-3 ವರದಿ ಮಾಡಿದ ಬಳಿಕ ಜಿಲ್ಲಾ ಪಂಚಾಯತ್ ಸಿಇಓ ಸುರೇಶ್ ಇಟ್ನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್ಗೆ ಕರೆ ಮಾಡಿ ಆದಷ್ಡು ಬೇಗ ಶೌಚಾಲಯಗಳನ್ನ ನಿರ್ಮಾಣ ಮಾಡಿ ಕೊಡೋದಾಗಿ ಮಾತು ಕೊಟ್ಟಿದ್ರು. ಕೊಟ್ಟ ಮಾತಿನಂತೆ 10 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯವನ್ನ ನಿರ್ಮಾಣ ಮಾಡಿದ್ದಾರೆ.
ಇನ್ನು ಪ್ರತ್ಯೇಕವಾಗಿ ಹೆಣ್ಣು ಮಕ್ಕಳಿಗೆ ಒಂದು ಶೌಚಾಲಯ, ಗಂಡು ಮಕ್ಕಳಿಗೆ ಮತ್ತೊಂದು ಶೌಚಾಲಯ ಸೇರಿದಂತೆ ಎರಡು ಶೌಚಾಲಯಗಳನ್ನ ನಿರ್ಮಾಣ ಮಾಡಿದ್ದಾರೆ. ನಾವು ಅದೆಷ್ಟೇ ಮನವಿ ಮಾಡಿದ್ರು ಕ್ಯಾರೆ ಅಂತಿರಲಿಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು. ಏಷ್ಯಾನೆಟ್ ಸುವರ್ಣನ್ಯೂಸ್ ಬಿಗ್-3 ವರದಿ ಬಳಿಕ ಇದೆಲ್ಲ ಆಗಿದೆ. ಈ ಶಾಲೆಯಲ್ಲಿ ಮಕ್ಕಳಿಗೆ ಇನ್ಮುಂದೆ ಶೌಚಾಲದ ಕೊರತೆಯಿಲ್ಲ ನಮಗೆ ತುಂಬಾ ಖುಷಿಯಾಗಿದೆ ಎಂದು ಮಕ್ಕಳು ಶಿಕ್ಷಕರು ಸುವರ್ಣ ನ್ಯೂಸ್ಗೆ ಧನ್ಯವಾದ ಕೂಡ ತಿಳಿಸಿದರು. ಒಟ್ಟಿನಲ್ಲಿ ಅದೇನೆ ಇರಲಿ. ಕನ್ನಡ ಶಾಲೆಗಳಿಗೆ ಸಮಸ್ಯೆ ಅಂತಾ ಬಂದ್ರೆ ಸಾಕು ನಿಮ್ ಬಿಗ್-3 ಕೂಡಲೇ ಎಂಟ್ರಿ ಕೊಡುತ್ತೆ. ಸಂಭಂದ ಪಟ್ಟವರನ್ನ ತರಾಟೆಗೆ ತೆಗೆದುಕೊಂಡು ಸಮಸ್ಯೆ ಕ್ಲಿಯರ್ ಮಾಡ್ಸುತ್ತೆ. ಇದು ಬಿಗ್- ಪವರ್. ನಮಗೆ ಯಾರೂ ಟಾರ್ಗೆಟ್ ಅಲ್ಲ. ಜನರ ಸಮಸ್ಯೆಗಳೇ ನಮ್ಮ ಟಾರ್ಗೇಟ್.