ಧಾರವಾಡದ ಅತಿರಥರ ಅಖಾಡ: ಯಾರಿಗೆ ಪೇಡಾ ನೀಡುತ್ತೆ ಜಾತಿ ಸಮೀಕರಣ..?

2023ರ ಕರ್ನಾಟಕ ಕುರುಕ್ಷೇತ್ರದ ಹೈವೋಲ್ಟೇಜ್‌  ಕಾರ್ಯಕ್ರಮ ಅತಿರಥರ ಅಖಾಡದಲ್ಲಿ  ಧಾರವಾಡ ಗ್ರಾಮೀಣ ಕ್ಷೇತ್ರದ ಗ್ರೌಂಡ್ ರಿಪೋರ್ಟ್‌ ಮಾಡಲಾಗಿದೆ.

First Published Mar 18, 2023, 2:05 PM IST | Last Updated Mar 18, 2023, 2:05 PM IST

ಧಾರವಾಡ ಗ್ರಾಮೀಣ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ..ಈಗಾಗಲೇ ಎರಡು ಬಾರಿ ಗೆಲುವು ಸಾಧಿಸಿ ಜೈಲು ಪಾಲಾಗಿದ್ದ ಕಾಂಗ್ರೆಸ್ ನ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಮತ್ತೊಮ್ಮೆ ಅದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡೋ ಉತ್ಸಾಹ ಹೆಚ್ಚಿದೆ..ಇತ್ತ ಹಾಲಿ ಶಾಸಕನಾಗಿರೋ ಬಿಜೆಪಿಯ ಅಮೃತ್ ದೇಸಾಯಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ರೆಡಿಯಾಗಿದ್ದಾರೆ. 2018ರಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ವಿನಯ ಕುಲಕರ್ಣಿ,64,783 ಪಡೆದಿದ್ದರು. ಬಿಜೆಪಿಯ ಅಮೃತ ದೇಸಾಯಿ 85,123 ಮತಗಳನ್ನ ಪಡೆದು 20,340 ಮತಗಳ ಅಂತರದಲ್ಲಿ ಜಯ ಸಾಧಿಸಿದ್ರು.. ವಿನಯ ಕುಲಕರ್ಣಿ ಸೋಲಿಗೆ ನೇರವಾಗಿ ಕಾರಣವಾಗಿದ್ದೆ ಜಿ. ಪಂ ಸದಸ್ಯ ಯೋಗೀಶ್ ಗೌಡ ಹತ್ಯೆ ಕೇಸ್..ಯೋಗೀಶ್ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಅನ್ನೋ ಆರೋಪದ ಮೂಲಕವೇ ವಿನಯ್ ರನ್ನ ಕಟ್ಟಿ ಹಾಕುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಇದೀಗ ಹತ್ಯೆ ಕೇಸ್ ನಲ್ಲಿ ಜೈಲುವಾಸ ಅನುಭವಿಸಿ ಧಾರವಾಡ ಜಿಲ್ಲೆಯಿಂದ ಗಡಿಪಾರಾಗಿರೋ ವಿನಯ್ ಕುಲಕರ್ಣಿ ಮತ್ತೆ ಗ್ರಾಮೀಣ ಕ್ಷೇತ್ರದಿಂದ ನಿಲ್ಲುವ ಉತ್ಸಾಹ ಹೊಂದಿದ್ದಾರೆ.ವಿನಯ್ ಕುಲಕರ್ಣಿ ವಿರುದ್ಧ  ಅಮೃತ್ ದೇಸಾಯಿ ಮತ್ತೆ ಯೋಗೀಶ್ ಗೌಡ ಹತ್ಯಾ ಪ್ರಕರಣ ಇಟ್ಟುಕೊಂಡೆ ರಾಜಕೀಯ ದಾಳ ಉರುಳಿಸಲಿದ್ದಾರೆ.
 

Video Top Stories