Today Horoscope: ಇಂದು ಹನುಮ ಜಯಂತಿ ಇದ್ದು, ಸುಂದರಕಾಂಡ ಪಾರಾಯಣ ಮಾಡಿ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Bindushree N  | Published: Apr 23, 2024, 9:31 AM IST

ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಮಂಗಳವಾರ, ಪೌರ್ಣಮಿ ತಿಥಿ, ಚಿತ್ರಾ ನಕ್ಷತ್ರ.

ಈ ದಿನ ಚಿತ್ರಾ ಪೌರ್ಣಮಿ ಇದ್ದು, ಇಂದು ಬೆಂಗಳೂರಿನಲ್ಲಿ ಕರಗ ಉತ್ಸವ ನಡೆಯುತ್ತದೆ. ಇಂದು ಹನುಮ ಜಯಂತಿ ಆಚರಿಸುವುದು ವಾಡಿಕೆಯಾಗಿದೆ. ಸಿಂಹ ರಾಶಿಯವರಿಗೆ ಅನ್ನ ಸಮೃದ್ಧಿ. ಸ್ತ್ರೀಯರಿಗೆ ಬಲ. ಕುಟುಂಬ ಸೌಖ್ಯ. ನಷ್ಟದ ಫಲ. ನರಸಿಂಹ ಪ್ರಾರ್ಥನೆ ಮಾಡಿ. ಕನ್ಯಾ ರಾಶಿಯವರಿಗೆ ಸಮಾಧಾನ ಇರಲಿ. ಸಂಗಾತಿಯಲ್ಲಿ ಭಿನ್ನಾಭಿಪ್ರಾಯ. ಅಲೆದಾಟ. ಲಾಭವೂ ಇದೆ. ವ್ಯಾಪಾರಿಗಳಿಗೆ ಅನುಕೂಲ. ನರಸಿಂಹ ಪ್ರಾರ್ಥನೆ ಮಾಡಿ. 

ಇದನ್ನೂ ವೀಕ್ಷಿಸಿ:  ಮೇಷದಿಂದ ವೃಷಭ ರಾಶಿಗೆ ಗುರುಪ್ರವೇಶ, ಯಾರಿಗಿದೆ ಗುರು ಬಲ?

Read More...