Asianet Suvarna News Asianet Suvarna News

ಮೇಷದಿಂದ ವೃಷಭ ರಾಶಿಗೆ ಗುರುಪ್ರವೇಶ, ಯಾರಿಗಿದೆ ಗುರು ಬಲ?

ಈ ವರ್ಷಗುರು ವೃಷಭ ರಾಶಿಗೆ ಬದಲಾಗುವ ವರ್ಷ. 2024 ಮೇ 01 ರಂದು ಮೇಷದಿಂದ ವೃಷಭ ರಾಶಿಗೆ ಗುರುಪ್ರವೇಶ ಮಾಡಲಿದ್ದಾನೆ. ಖ್ಯಾತ ಜ್ಯೋತಿಷಿ ಹರೀಶ್ ಕಶ್ಯಪ್  ಗುರು ಬಲ ಬಗ್ಗೆಹೇಳಿದ್ದಾರೆ. 
 

 ಗುರು ವೃಷಭ ರಾಶಿಗೆ ಬದಲಾಗುವ ವರ್ಷ. 2024 ಮೇ 01 ರಂದು ಮೇಷದಿಂದ ವೃಷಭ ರಾಶಿಗೆ ಗುರುಪ್ರವೇಶ. ವರ್ಷವೆಲ್ಲ ಗುರು ವೃಷಭದಲ್ಲಿ ಸಂಚಾರವಿರುತ್ತದೆ. ವೃಷಭ ಶುಕ್ರನ ರಾಶಿಯಲ್ಲಿ ಗುರು ಸೇರಿದಾಗ - ಸ್ವಸ್ಥ ಆರೋಗ್ಯವೂ, ಸುಖ, ಧನ, ವ್ಯಾಪಾರ ವರ್ಧನೆ, ಮಿತ್ರ- ಪುತ್ರ ಬಂಧುಗಳ ಸುಖ,ದಾನ, ಧರ್ಮ ಕಾರ್ಯ, ದೈವ, ಗುರು ಭಕ್ತಿ ಸೇವೆ,  ಸದಾಚಾರವೂ ವರ್ಧಿಸುತ್ತವೆ. ಶ್ರವಣಾ ಚಂದ್ರ ಮಕರದಲ್ಲಿ, ಬುಧವಾರ  ಮಧ್ಯಾಹ್ನ ಗುರು ಬದಲಾವಣೆಯ ಶುಭದಿನವಸವಾಗಿದೆ. ಬುಧವಾರ ಆಗಿರುವುರಿಂದ ಬೋಧಕರು, ಲೆಕ್ಕಿಗರು, ಮಾಧ್ಯಮಗಳು, ಬರಹಗಾರರು, ಮಂತ್ರಿಗಳು, ಚಾಣಾಕ್ಷಮತಿಗಳು ಮುನ್ನೆಲೆಗೆ ಬರುವರು.