Asianet Suvarna News Asianet Suvarna News

ಲಾಂಗ್‌ ಹಿಡಿದು ನಡುರಸ್ತೆಯಲ್ಲೇ ಯುವಕರ ಅಟ್ಟಹಾಸ: ಮಾರಕಾಸ್ತ್ರ ಪ್ರದರ್ಶನ ಕಂಡು ಬೆಚ್ಚಿಬಿದ್ದ ಜನ!


ರಸ್ತೆಯಲ್ಲೇ ಲಾಂಗ್  ಹಿಡಿದು  ಓಡಾಡಿದ ಪುಂಡರು 
ಮದುವೆಗೆ ಬಂದಿದ್ದ ಸಾಗರದ ಯುವಕರು ಪುಂಡಾಟ
ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
 

ಶಿವಮೊಗ್ಗದಲ್ಲಿ(Shivamogga) ಹಾಡಹಗಲೇ ಲಾಂಗ್ ಹಿಡಿದು ಯುವಕರು(Youths) ರಸ್ತೆಯಲ್ಲೇ ಅಟ್ಟಹಾಸ ಮೆರೆದಿರುವ ಘಟನೆ ನಡೆದಿದೆ. ಯುವಕರ ಮಾರಕಾಸ್ತ್ರ ಪ್ರದರ್ಶನ ಕಂಡು ಜಿಲ್ಲೆಯ ಆನಂದಪುರದ ಜನ ಬೆಚ್ಚಿಬಿದ್ದಿದ್ದಾರೆ. ನಾಲ್ವರು ಯುವಕರು ಲಾಂಗ್ ಹಿಡಿದು ಬಡಿದಾಡಿಕೊಂಡಿದ್ದಾರೆ. ಶಿವಮೊಗ್ಗದ ಆನಂದಪುರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಗಾಂಜಾ ಮತ್ತಿನಲ್ಲಿದ್ದ ಯುವಕರು  ಲಾಂಗ್ ಹಿಡಿದು ಬಡಿದಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಓರ್ವ ಯುವಕನನ್ನು  ಪೊಲೀಸರಿಗೆ ಸಾರ್ವಜನಿಕರು ಒಪ್ಪಿಸಿದ್ದಾರೆ. ಪರಾರಿಯಾಗಿರುವ  ಮೂವರ ಹಿಂದೆ ಪೊಲೀಸರು ಬಿದ್ದಿದ್ದಾರೆ. ಮದುವೆಗೆ ಬಂದಿದ್ದ ಸಾಗರದ ಯುವಕರು ಈ ರೀತಿ ಪುಂಡಾಟ ಮೆರೆದಿದ್ದಾರೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ವೀಕ್ಷಿಸಿ:  ಒಂದಲ್ಲ ಎರಡಲ್ಲ 8 ಹುಡುಗಿಯರ ಜೊತೆಗೆ ಗಣೇಶ್ ಮದುವೆ..! ನನ್ನ ಮದುವೆ ಫಿಕ್ಸ್..ರೆಡಿ ಟು ಟೇಕ್ ರಿಸ್ಕ್..!