ಬೆಂಗಳೂರಿನಲ್ಲಿ ಭೀಕರ ಕೊಲೆ: ತಾಯಿಯನ್ನೇ ಕೊಂದು ಸೂಟ್‌ಕೇಸ್‌ನಲ್ಲಿ ಠಾಣೆಗೆ ತಂದ ಮಗಳು !

ಕೊಲ್ಕತ್ತಾ ಮೂಲದ ಸೆನಾಲಿ ಸೇನ್‌ ತನ್ನ ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದಾಳೆ. 

Share this Video
  • FB
  • Linkdin
  • Whatsapp

ಬೆಂಗಳೂರು: ತಾಯಿಯನ್ನೇ ಕೊಂದು ಮಗಳು ಶವವನ್ನು ಸೂಟ್‌ಕೇಸ್‌ನಲ್ಲಿ ಇಟ್ಟು ಮೈಕೋಲೇಔಟ್‌ ಪೊಲೀಸ್‌ ಠಾಣೆಗೆ ತಂದಿರುವ ಹೃದಯವಿದ್ರಾಹಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೀವಾಪಾಲ್‌ ಮೃತ ದುರ್ದೈವಿಯಾಗಿದ್ದಾರೆ. ಸೆನಾಲಿ ಸೇನ್‌ (39) ಕೊಲೆ ಮಾಡಿದ ಮಗಳು. ಇಲ್ಲಿನ ಬಿಳೇಕಹಳ್ಳಿಯ ಎನ್‌ಎಸ್‌ಆರ್‌ ಗ್ರೀನ್‌ ಅಪಾರ್ಟ್‌ ಮೆಂಟ್‌ನ ಒಂದೇ ಫ್ಲ್ಯಾಟ್‌ನಲ್ಲಿ ಸೆನಾಲಿ ಸೇನ್‌ , ಆಕೆಯ ತಾಯಿ ಬೀವಾ ಪಾಲ್‌ ಮತ್ತು ಅತ್ತೆ ವಾಸವಿದ್ದರು. ನಿತ್ಯ ಆರೋಪಿ ಸೆನಾಲಿ ಸೇನ್‌ ತಾಯಿ ಮತ್ತು ಅತ್ತೆ ಗಲಾಟೆ ಮಾಡುತ್ತಿದ್ದರಂತೆ. ಹೀಗಾಗಿ ಮನನೊಂದು ಈ ಕೃತ್ಯವೆಸಗಿರುವುದಾಗಿ ಆಕೆ ಪೊಲೀಸರ ಬಳಿ ಹೇಳಿದ್ದಾಳೆ. ತಾಯಿಗೆ ಮೊದಲು ನಿದ್ರೆ ಮಾತ್ರೆ ನೀಡಿದ್ದು, ಹೊಟ್ಟೆ ನೋವು ಎಂದು ಕೂಗಲು ಆರಂಭಿಸಿದಾಗ ವೇಲ್‌ನಿಂದ ಕತ್ತನ್ನು ಹಿಸುಕಿ ಕೊಂದಿದ್ದಾಳೆ ಎನ್ನಲಾಗ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: Today Horoscope:ಕುಜ ದೋಷ ನಿವಾರಣೆಗೆ ಏನು ಮಾಡಬೇಕು? : ಈ ದಿನದ ನಿಮ್ಮ ರಾಶಿ ಭವಿಷ್ಯ ಹೀಗಿದೆ..

Related Video