ಪ್ರಿಯತಮನಿಗಾಗಿ ಗಂಡನನ್ನೇ ಕೊಂದುಬಿಟ್ಲು, ಫೋನ್ ರೆಕಾರ್ಡಿಂಗ್ ಕೇಳಿ ಪೊಲೀಸ್ರು ಬೆಚ್ಚಿಬಿದ್ರು!

 ಆ ಊರಿನಲ್ಲಿ ವೈರಲ್ ಆದ ಒಂದು ವಿಡಿಯೋ ರೈತನ ಸಾವಿನ ಪ್ರಕರಣಕ್ಕೆ ಬಿಗ್ಟ್ವಿಸ್ಟ್ ಸಿಕ್ಕಿಬಿಟ್ಟಿತ್ತು. ಹೀಗೆ ಬೆಳೆ ಸಾಲದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಕೇಸ್ ಕ್ಲೋಸ್ ಮಾಡಲು ಹೊರಟ ಪೊಲೀಸರಿಗೆ ಆಡಿಯೋ ಕ್ಲಿಪ್ ಒಂದು ಕೊಟ್ಟ ಶಾಕ್‌ನ ಕಥೆಯೇ ಇವತ್ತಿನ ಎಫ್.ಐ.ಆರ್...
 

Share this Video
  • FB
  • Linkdin
  • Whatsapp

ಕಲಬುರಗಿ, (ಆಗಸ್ಟ್.09): ಅದು 16-17 ವರ್ಷದ ಸಂಸಾರ. ಎದೆ ಮಟ್ಟಕ್ಕೆ ಬೆಳೆದಿರೋ ಇಬ್ಬರು ಮಕ್ಕಳು. ಕಷ್ಟವಿದ್ದರೂ ಸುಖವಾಗಿ ಬದುಕುತ್ತಿದ್ದ ಕುಟುಂಬ ಅದು. ಆದ್ರೆ ಅವತ್ತೊಂದು ದಿನ ಮನೆಯ ಒಡೆಯ ಕೆರೆಯಲ್ಲಿ ಹೆಣವಾಗಿ ಸಿಗ್ತಾನೆ. ಬೆಳೆ ಸಾಲ ಪಡೆದಿದ್ದ ಈತ ಈ ವರ್ಷ ಬಿದ್ದ ಭಾರಿ ಮಳೆಗೆ ಬೆಳೆ ನಾಶವಾಗಿದ್ರಿಂದ ಸಾಲ ಕಟ್ಟಲಾಗದೇ ಆತ್ಮಹತ್ಯೆ ಮಾಡಿಕೊಂಡ ಅಂತ ಆತನಿಗೆ ಪರಿಹಾರ ಕೊಡಲೂ ಕಂದಾಯ ಇಲಾಖೆ ರೆಡಿಯಾಗ್ತಿತ್ತು. 

ತನ್ನ ಕಾಮದ ತೀಟೆಗೆ ಹೆತ್ತ ಮಗನನ್ನೇ ಕೊಂದ ಪಾಪಿ ತಾಯಿ

ಆದ್ರೆ ಇದೇ ಟೈಂನಲ್ಲಿ ಆ ಊರಿನಲ್ಲಿ ವೈರಲ್ ಆದ ಒಂದು ವಿಡಿಯೋ ರೈತನ ಸಾವಿನ ಪ್ರಕರಣಕ್ಕೆ ಬಿಗ್ಟ್ವಿಸ್ಟ್ ಸಿಕ್ಕಿಬಿಟ್ಟಿತ್ತು. ಹೀಗೆ ಬೆಳೆ ಸಾಲದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಕೇಸ್ ಕ್ಲೋಸ್ ಮಾಡಲು ಹೊರಟ ಪೊಲೀಸರಿಗೆ ಆಡಿಯೋ ಕ್ಲಿಪ್ ಒಂದು ಕೊಟ್ಟ ಶಾಕ್‌ನ ಕಥೆಯೇ ಇವತ್ತಿನ ಎಫ್.ಐ.ಆರ್...

Related Video