Asianet Suvarna News Asianet Suvarna News

ಕಾಮಾಲೆಯಿಂದ ಸತ್ತ ಅಂದುಕೊಂಡಿದ್ದರು ಎಲ್ಲರೂ..! ಪೋಸ್ಟ್ ಮಾರ್ಟಮ್ ರಿಪೋರ್ಟ್ ಕೊಟ್ಟಿತ್ತು ಸುಳಿವು..!

ಹೆಂಡತಿಯ ಮೊಬೈಲ್‌ನಲ್ಲಿತ್ತು ಕೊಲೆ ರಹಸ್ಯ..!
ವಾಟ್ಸಪ್‌ನಲ್ಲೇ ರೆಡಿಯಾಯ್ತು ಕೊಲೆಗೆ ಸ್ಕೆಚ್..!
ತಿನ್ನೋ ಅನ್ನದಲ್ಲಿ ವಿಷ ಹಾಕಿದಳು ಹೆಂಡತಿ..!

ಅವರಿಬ್ಬರದ್ದು ಅರೇಂಜ್ ಮ್ಯಾರೇಜ್. ಮೂರು ವರ್ಷದ ದಾಂಪತ್ಯಕ್ಕೆ ಒಂದು ಗಂಡು ಮಗು ಸಾಷಿಯಾಗಿತ್ತು. ಆದ್ರೆ ಇದ್ದಕಿದ್ದಂತೆ ಗಂಡ ಆವತ್ತೊಂದು ದಿನ ಸತ್ತು ಹೋಗಿಬಿಟ್ಟ. ಕಾಮಾಲೇ ಇದ್ದಿದ್ರಿಂದ ಆತ ಅದರಿಂದಲೇ ಸತ್ತಿದ್ದ ಅನ್ನೋದು ಎಲ್ಲರ ನಂಬಿಕೆಯಾಗಿತ್ತು. ಆದ್ರೆ ಯಾವಾಗ ಪೋಸ್ಟ್ ಮಾರ್ಟಮ್ ರಿಪೋರ್ಟ್(Post-mortem report) ಬಂತೋ ಕಂಪ್ಲೆಂಟ್ ದಾಖಲಿಸಿಕೊಂಡಿದ್ದ ಪೊಲೀಸರೇ(Police) ಥಂಡಾ ಹೊಡೆದಿದ್ರು. ಯಾಕಂದ್ರೆ ಆತ ಸತ್ತಿದ್ದು ಖಾಯಿಲೆಯಿಂದಲ್ಲ ಬದಲಿಗೆ ವಿಷದಿಂದ ಅನ್ನೋದು ಗೊತ್ತಾಗಿತ್ತು.ಹಾಗಾದ್ರೆ ಮಾಧವರಾವ್ ಅನಾರೋಗ್ಯದಿಂದ ಸತ್ತಿಲ್ಲ. ಮಾಧವರಾವ್ ಸತ್ತಿದ್ದು ಅನಾರೋಗ್ಯದಿಂದ ಅಲ್ಲ. ಇದೊಂದು ವ್ಯವಸ್ಥಿತ ಕೊಲೆ. ದೇಹದಲ್ಲಿ ವಿಷದ ಅಂಶಗಳಿವೆ ಎನ್ನುವುದು ವೈದ್ಯಕೀಯ ವರದಿ ಹೇಳುತ್ತೆ. ಮಾಧವರಾವನ ಪತ್ನಿ ಪ್ರೀಯಾಂಕಾ, ಗುರುರಾಜ್ ರಾಠೋಡ್ ಎನ್ನುವ ಯುವಕನ ಜೊತೆ ಸಂಬಂಧ ಇರೋದಕ್ಕೆ ಸಾಕಷ್ಟು ಸಾಕ್ಷಗಳು ಸಿಗ್ತವೆ. ಬಸವಕಲ್ಯಾಣದ(Basavakalyana) ಮಾಧವರಾವ್ (Murder) ಮಿಸ್ಟರಿ ಬಗ್ಗೆ ಆರಂಭದಲ್ಲಿ ಪೊಲೀಸರಿಗಿಂತ ಹೆಚ್ಚು ತನಿಖೆ ನಡೆಸಿದ್ದು ಅವರ ಕುಟುಂಬಸ್ಥರು. ಮಾಧವರಾವನ ಹೆಂಡತಿಯ ಮೊಬೈಲ್ ಮತ್ತಷ್ಟು ಪರಿಶೀಲನೆಗೊಳಪಡಿಸಿದಾಗ ಭಯಾನಕ ಸತ್ಯಗಳು ಅನಾವರಣಗೊಂಡಿವೆ. ಅದು ಎಷ್ಟರ ಮಟ್ಟಿಗೆ ಸಾಕ್ಷಿಗಳು ಸಿಕ್ಕಿವೆ ಅಂದರೆ ಕೊಲೆಯ ಇಂಚಿಂಚು ಮಾಹಿತಿಗಳನ್ನು ಮೊಬೈಲ್ ಬಿಚ್ಚಿಟ್ಟಿದೆ. ಗಂಡ ಬೇಡ ಅಂದ್ರೆ ಡೈವರ್ಸ ಕೊಟ್ಟು ಯಾರ ಜೊತೆಗಾದ್ರೂ ಹೋಗಿ ಬಿಡಬಹುದಿತ್ತು. ಆದ್ರೆ ಅಮಾಯಕ ಗಂಡನಿಗೆ ವಿಷ ಉಣಿಸಿ ಕೊಂದು ಹಾಕುವ ಮೂಲಕ, ಮುದಿ ವಯಸ್ಸಿನ ತಾಯಿಗೆ ಮಗನ ಮಮತೆಯನ್ನು ಕುತ್ತುಕೊಂಡಿದ್ದಾಳೆ. ಅಷ್ಟೇ ಅಲ್ಲ, ಮುಗ್ದ ಎಳೆಯ ಮಗುವಿಗೆ ತಂದೆಯ ಪ್ರೀತಿಯಿಂದ ವಂಚಿತನಾಗಿ ಮಾಡಿದ್ದಾಳೆ. 

ಇದನ್ನೂ ವೀಕ್ಷಿಸಿ:  ಅಂಗನವಾಡಿಯ ಸುತ್ತ..ಸಮಸ್ಯೆಗಳ ಹುತ್ತ: ಹೆಗ್ಗಣಗಳ ಬಿಲದಲ್ಲೇ ಮಕ್ಕಳಿಗೆ ಪಾಠ, ಆಟ !