Asianet Suvarna News Asianet Suvarna News

ಅಧಿಕಾರಿ ಚಂದ್ರಶೇಖರನ್‌ಗೆ 50 ಕೋಟಿ ಮೊತ್ತದ ಚೆಕ್‌ಗೆ ಸಹಿ ಮಾಡಿದ್ದೆ ಮುಳುವಾಯ್ತಾ..?

ಚಂದ್ರಶೇಖರ್ ನಿವಾಸದಲ್ಲಿ ಸಿಐಡಿ ಅಧಿಕಾರಿಗಳಿಂದ ತಪಾಸಣೆ
ಸಾಕ್ಷಾಧಾರ ಪರಿಶೀಲನೆ ವೇಳೆ ದೊರಕಿದೆ ಚಂದ್ರಶೇಖರನ್ ಬ್ಯಾಗ್
ಬ್ಯಾಗ್‌ನಲ್ಲಿದ್ದವು ಪೆನ್‌ಡ್ರೈವ್‌, ಲ್ಯಾಪ್‌ಟಾಪ್‌ ಇನ್ನಿತರ ವಸ್ತುಗಳು

ವಾಲ್ಮೀಕಿ ನಿಗಮ ಅಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ(Valmiki corporation officer suicide case) ಇದೀಗ ಸಿಐಡಿ ಎಂಟ್ರಿಯಾಗಿದೆ. ಪ್ರಕರಣದ ಸಂಪೂರ್ಣ ತನಿಖೆಯನ್ನು ಸಿಐಡಿ ಕೈಗೆತ್ತಿಕೊಂಡಿದೆ. ವಾಲ್ಮೀಕಿ ನಿಗಮದ 80 ಕೋಟಿ  ಹಗರಣದ ತನಿಖೆ, ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣವೂ(Officer Chandrashekhar suicide case) ಸಿಐಡಿ ತನಿಖೆಗೆ ವಹಿಸಲಾಗಿದೆ. ಸಿಐಡಿ(CID) ಅಧಿಕಾರಿ ರಫಿ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದೆ. ಶಿವಮೊಗ್ಗ ವಿನೋಬನಗರ ಪೊಲೀಸರಿಂದ ಸಿಐಡಿಗೆ ಪ್ರಕರಣ ಹಸ್ತಾಂತರ ಮಾಡಲಾಗಿದೆ. ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆಗೆ ಕಾರಣವಾಗಿದ್ದು 50 ಕೋಟಿ  ಚೆಕ್‌ಗೆ ಸಹಿ ಮಾಡಿದ್ದು, ಇದೇ ಮುಳುವಾಯ್ತು ಎಂದು ಹೇಳಲಾಗುತ್ತಿದೆ. ಪೆನ್ ಡ್ರೈವ್ ಮೇಲೆ ಎಂ ಡಿ ಪದ್ಮನಾಭನ್ ಹೆಸರು ಇದೆ ಎಂದ ಪತ್ನಿ ಕವಿತಾ ಆರೋಪ ಮಾಡಿದ್ದಾರೆ. ಕುಟುಂಬಸ್ಥರಿಗೆ ಪೆನ್ ಡ್ರೈವ್‌ನನ್ನು ಅಧಿಕಾರಿಗಳು ತೋರಿಸಿಲ್ಲ. ಅಧಿಕಾರಿಗಳ ನಡೆ ಅನುಮಾನ ಹುಟ್ಟಿಸಿದೆ ಎಂದು ಚಂದ್ರಶೇಖರನ್ ಕುಟುಂಬ ಆರೋಪಿಸಿದೆ.

ಇದನ್ನೂ ವೀಕ್ಷಿಸಿ:  IPL ಫೈನಲ್ ಮ್ಯಾಚ್‌ನಲ್ಲಿ ಕ್ಯಾಮೆರಾಮ್ಯಾನ್ ಆದ್ರಾ ನಟ ಸೋನು ಸೂದ್..?