
IPL ಫೈನಲ್ ಮ್ಯಾಚ್‌ನಲ್ಲಿ ಕ್ಯಾಮೆರಾಮ್ಯಾನ್ ಆದ್ರಾ ನಟ ಸೋನು ಸೂದ್..?
ನಟ ಸೋನು ಸೂದ್ ಎಕ್ಸ್ ಖಾತೆಯಲ್ಲಿ ಐಪಿಎಲ್ಗೆ ಕ್ಯಾಮೆರಾಮ್ಯಾನ್ ಬೇಕಿದ್ರೆ ಹೇಳಿ ನಾನು ರೆಡಿಯಾಗಿದ್ದೇನೆ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಐಪಿಎಲ್ 2024ರ ಫೈನಲ್ ಪಂದ್ಯದ ವೇಳೆ ನಟ ಸೋನು ಸೂದ್(Sonu Sood) ಕ್ಯಾಮೆರಾಮ್ಯಾನ್(Camera Man) ಆಗಿ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಬಲಿಷ್ಠ ತಂಡಗಳಾದ ಕೋಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ಮತ್ತು ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ನಡುವೆ ಪಂದ್ಯ ನಡೆಯಿತು. ಮೂರನೇ ಬಾರಿಗೆ ಕೆಕೆಆರ್ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಸದ್ಯ ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನಟ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ವೀಕ್ಷಿಸಿ: ನ್ಯಾಶನಲ್ ಕ್ರಶ್ ರಶ್ಮಿಕಾಗೆ ಮತ್ತೆ ಡೀಪ್ ಫೇಕ್ ಕಾಟ! ಬಿಕಿನಿ ತೊಟ್ಟು ಜಲಪಾತದ ಪಕ್ಕದಲ್ಲಿ ನಿಂತ ನಟಿ..!