ಬೆಂಗಳೂರಿನ ಹೋಟೆಲ್‌ನಲ್ಲಿ ವಿದೇಶಿ ಮಹಿಳೆ ಶವ ಪತ್ತೆ: 4 ದಿನದ ಹಿಂದೆ ಟೂರಿಸ್ಟ್ ವೀಸಾದಡಿ ಬಂದಿದ್ದ ಜರೀನಾ!

ಶೇಷಾದ್ರಿಪುರಂ ಪೊಲೀಸ್, FSL ಟೀಮ್‌ನಿಂದ ಶೋಧಕಾರ್ಯ
ಡಿಸಿಪಿ ಅರುಣಾಂಶು, ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಭೇಟಿ 
ಸದ್ಯ ಹೋಟೆಲ್ ಸಿಸಿಟಿವಿ ಹಾಗೂ ಲೆಡ್ಜರ್ ಬುಕ್ ಪರಿಶೀಲನೆ

Share this Video
  • FB
  • Linkdin
  • Whatsapp

ಬೆಂಗಳೂರಿನಲ್ಲಿ ವಿದೇಶಿ ಮಹಿಳೆ(Foreign woman) ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಉಸಿರುಗಟ್ಟಿಸಿ ಕೊಲೆ(Murder) ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇವರು ಉಜ್ಬೇಕಿಸ್ತಾನ(Uzbekistan) ಮೂಲದ ಜರೀನಾ ಎಂದು ಗುರುತಿಸಲಾಗಿದೆ. ಶೇಷಾದ್ರಿಪುರಂ ಠಾಣೆ ಸಮೀಪದ ಜಗದೀಶ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಹೋಟೆಲ್‌ನ ಸೆಕೆಂಡ್ ಪ್ಲೋರ್‌ನಲ್ಲಿ ವಿದೇಶಿ ಮಹಿಳೆ ರೂಮ್ ಪಡೆದಿದ್ದರು. 4 ದಿನದ ಹಿಂದೆ ಟೂರಿಸ್ಟ್ ವೀಸಾದಡಿ ಬೆಂಗಳೂರಿಗೆ(Bengaluru) ಜರೀನಾ ಬಂದಿದ್ದರು. ಮಧ್ಯರಾತ್ರಿ ಮಾಸ್ಟರ್ ಕೀ ಬಳಸಿ ರೂಮ್ ಓಪನ್ ಮಾಡಿದಾಗ ಮಹಿಳೆ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. FSL ಟೀಮ್‌ನಿಂದಲೂ ಶೋಧ ಕಾರ್ಯ ನಡೆದಿದೆ. 

ಇದನ್ನೂ ವೀಕ್ಷಿಸಿ:  Today Horoscope: ಶುಭ ಕಾರ್ಯಗಳಿಗೆ ಈ ದಿನ ಉತ್ತಮವಲ್ಲ..ಇಂದು ಸೂರ್ಯ ದೇವನ ಪ್ರಾರ್ಥನೆ ಮಾಡಿ

Related Video