ಹೆಂಡತಿಗೆ ಮಚ್ಚಿನೇಟು ಬೀಳುವಾಗ್ಲೆ ತಂಗಾ 2 ಎಂಟ್ರಿ! 10 ತಿಂಗಳಲ್ಲಿ 9 ಕೇಸ್‌ಗಳನ್ನ ಪತ್ತೆ ಮಾಡಿರುವ ಪೊಲೀಸ್ ಡಾಗ್‌!

ಪಾರ್ಲರ್ ಆಂಟಿ..ಎಗ್‌ರೈಸ್ ಅಂಕಲ್ ! 
ಆ ಕುಟುಂಬಕ್ಕೆ ಎಂಟ್ರಿ ಕೊಟ್ಟ ಮೇಸ್ತ್ರಿ..! 
ಎರಡೇ ಏಟಿಗೆ ಮೇಸ್ತ್ರಿಯ ಕೊಂದುಬಿಟ್ಟ..! 

Share this Video
  • FB
  • Linkdin
  • Whatsapp

ಅವಳು ಕರ್ನಾಟಕ ಪೊಲೀಸ್ ಡಿಪಾರ್ಟ್‌ಮೆಂಟ್‌ನ ಲೇಡಿ ಸಿಂಗಂ ಅಂತಲೇ ಫೇಮಸ್ ಆಗಿದ್ದವಳು. 14 ವರ್ಷದ ಸರ್ವೀಸ್‌ನಲ್ಲಿ 70 ಮರ್ಡರ್ ಕೇಸ್, 35 ರಾಬರಿ ಕೇಸ್ ಅನ್ನ ಏಕಾಂಗಿಯಾಗಿ ಪತ್ತೆ ಹಚ್ಚಿದ್ದಳು. ಆದ್ರೆ ಕಳೆದ ವರ್ಷ ಆಕೆ ಕೊನೆಯುಸಿರೆಳೆದಿದ್ಲು, ಅವಳ ಸ್ಥಾನವನ್ನ ತುಂಬೋ ಮತ್ತೊಬ್ಬಳು ಸಿಗೋದೇ ಇಲ್ಲ ಅಂತ ಅಂದುಕೊಂಡಿದ್ರು. ಆದ್ರೆ ಲೇಡಿ ಸಿಂಗಂ ಲೆಗಸಿಯನ್ನ ಮರಿ ಸಿಂಗಂ ಮುಂದುವರೆಸುತ್ತಿದ್ದಾಳೆ. ಡಿಪಾರ್ಟ್‌ಮೆಂಟ್‌ಗೆ (Police department) ಬಂದ ಹತ್ತೇ ತಿಂಗಳಲ್ಲಿ ಒಂದು ಡೆಡ್ಲಿ ಮರ್ಡರ್ ಕೇಸ್‌ವೊಂದನ್ನ(Murder case) ಬೇಧಿಸಿದ್ದಾಳೆ. ಈ ಮೂಲಕ ನಾನು ಮರಿ ಸಿಂಗಂ ಅನ್ನೋದನ್ನ ಪ್ರೂವ್ ಮಾಡಿಕೊಂಡಿದ್ದಾಳೆ. ತುಂಗಾಳನ್ನೇ ಮೀರಿಸುತ್ತಾಳೆ ಈ ತುಂಗಾ ಟು. ಕೇವಲ 10 ತಿಂಗಳಲ್ಲಿ 9 ಕೇಸ್‌ಗಳನ್ನ ಬೇಧಿಸಿರುವ ತುಂಗಾ 2 (Tunga 2) ಇವತ್ತು ಒಬ್ಬ ಹಂತಕನನ್ನ ಹಿಡಿಯೋದಲ್ಲದೇ ಒಂದು ಜೀವವನ್ನೂ ಉಳಿಸಿದ್ದಾಳೆ. ಅವರಿಬ್ಬರು ಮದುವೆಯಾಗಿ ಎಂಟು ವರ್ಷವಾಗಿತ್ತು. ಹೆಂಡ್ತಿ ಬ್ಯೂಟ್ ಪಾರ್ಲರ್ ಇಟ್ಟುಕೊಂಡಿದ್ರೆ ಗಂಡ ಎಗ್ರೈಸ್ ವ್ಯಾಪಾರ ಮಾಡ್ತಿದ್ದ. ಇಬ್ಬರಿಗೂ ಎರಡು ಮುದ್ದಾದ ಮಕ್ಕಳಿದ್ವು. ಆದ್ರೆ ಈ ಸುಂದರ ಸಂಸಾರದಲ್ಲಿ ಅವನೊಬ್ಬ ಎಂಟ್ರಿ ಕೊಟ್ಟಿದ್ದ. ಆತ ಬಂದ ಮೇಲೆ ಹೆಂಡತಿ ಬದಲಾಗೋಕೆ ಶುರುವಾದಳು. ಆತನೊಂದಿಗೆ ಅನೈತಿಕ ಸಂಬಂಧ ಬೆಳಸಿಕೊಂಡುಬಿಟ್ಟಳು. ಆದ್ರೆ ಈ ವಿಷ್ಯ ಒಂದು ದಿನ ಗಂಡನಿಗೆ ಗೊತ್ತಾಗಿ ಹೆಂಡತಿ ಮತ್ತು ಆಕೆಯ ಲವ್ವರ್ ಇಬ್ಬರನ್ನೂ ಮುಗಿಸಲು ನಿರ್ಧರಿಸಿಬಿಟ್ಟ. ಅಂದುಕೊಂಡಂತೆ ಹೋಗಿ ಪ್ರೀಯಕರನ ಕಥೆಯನ್ನೂ ಮುಗಿಸಿದ ಆದ್ರೆ ಮನೆಗೆ ಹೋಗಿ ಹೆಂಡತಿಗೂ ಮಚ್ಚು ಬೀಸಿದ್ದ ಆದ್ರೆ ಅಷ್ಟರಲ್ಲಿ ಎಂಟ್ರಿ ಆದವಳು ತುಂಗಾ 2. ತುಂಗಾ 2 ಡಿಪಾರ್ಟ್‌ಮೆಂಟ್‌ಗೆ ಎಂಟ್ರಿ ಕೊಟ್ಟು ಇನ್ನೂ ಹತ್ತೇ ತಿಂಗಳಾಗಿರೋದು. ಆಗಲೆ ತನ್ನ ಪರಾಕ್ರಮವನ್ನ ಪ್ರದರ್ಶಿಸುತ್ತಿದೆ.

ಇದನ್ನೂ ವೀಕ್ಷಿಸಿ:  ಸಿಎಂ ವಿರುದ್ಧವೇ ಡಿಸಿಎಂ ರಣಕಹಳೆ..?! ವಿಪಕ್ಷಗಳು ಹೇಳಿದ್ದ ಹೈಕಮಾಂಡ್ VS ಯೋಗಿ ರಹಸ್ಯ ಇದೇನಾ?

Related Video