ಸಿಎಂ ವಿರುದ್ಧವೇ ಡಿಸಿಎಂ ರಣಕಹಳೆ..?! ವಿಪಕ್ಷಗಳು ಹೇಳಿದ್ದ ಹೈಕಮಾಂಡ್ VS ಯೋಗಿ ರಹಸ್ಯ ಇದೇನಾ?

ಯು.ಪಿ ಕೇಸರಿ ಭದ್ರಕೋಟೆಯಲ್ಲೇ ಬಿರುಕು ಉಂಟಾಗಿದ್ದೇಕೆ
ಮೋದಿ ಕರ್ಮಭೂಮಿಯಲ್ಲಿ ಶುರುವಾಗಿದೆ ಅಂತರ್ಯುದ್ಧ!
ಒಂದು ಸೋಲಿನಿಂದು ಉಂಟಾಯ್ತು ರಾಜಕೀಯ ಸುನಾಮಿ!
ರಣಕೌತುಕ ಮೂಡಿಸಿದ್ದೇಕೆ ಯೋಗಿ VS ಅದರ್ಸ್ ಕದನ..?

Share this Video
  • FB
  • Linkdin
  • Whatsapp

24ರ ಲೋಕಸಭಾ ಸಂಗ್ರಾಮ ಮುಗಿದಿದ್ದೂ ಆಯ್ತು. ಮತ್ತೆ ನರೇಂದ್ರ ಮೋದಿ (Narendra Modi)ಪ್ರಧಾನಿಯಾಗಿದ್ದೂ ಆಯ್ತು. ಎನ್‌ಡಿಎ(NDA) ಮಿತ್ರ ಕೂಟ ಅಧಿಕಾರ ಹಿಡಿದಿದ್ದೂ ಆಯ್ತು. ಆದ್ರೆ, ಉತ್ತರ ಪ್ರದೇಶದಲ್ಲಿ(Uttar pradesh) ಯಾಕ್ ಹಿಂಗ್ ಆಯ್ತು? ಯಾರಿಂದ ಆಯ್ತು ಅನ್ನೋ ಪ್ರಶ್ನೆಗೆ ಮಾತ್ರ ನಿಖರ ಉತ್ತರ ಸಿಕ್ಕಿಲ್ಲ. ಆದ್ರೆ ಆ ಪ್ರಶ್ನೆಗೆ ಉತ್ತರ ಹುಡುಕೋ ಪ್ರಯತ್ನವಾಗ್ತಿದ್ದ ಹಾಗೇ, ಉತ್ತರ ಪ್ರದೇಶದ ಕೇಸರಿ ಭದ್ರಕೋಟೆಯಲ್ಲೇ(BJP) ಬಿರುಕು ಉಂಟಾಗಿದೆ. ಕೋಟೆಯೊಳಗೇ ಒಂದು ಅಂತರ್ಯುದ್ಧ ನಡೀತಿರೋ ಹಾಗೆ ಕಾಣ್ತಾ ಇದೆ. ರಾಷ್ಟ್ರ ರಾಜಕಾರಣದಲ್ಲೀಗ ಹೊಸ ಚರ್ಚೆ ಉದ್ಭವಿಸಿದೆ.. ದೇಶದ ಮೂಲೆ ಮೂಲೆಯಲ್ಲೂ ಹೊಸ ಅಲೆ ಸೃಷ್ಟಿಸಿದ್ದ ಯೋಗಿ ಆದಿತ್ಯನಾಥ್ ( Yogi Adityanath) ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮುಂದುವರೀತಾರೋ ಇಲ್ವೋ ಅನ್ನೋ ಆತಂಕ ಹುಟ್ಟಿಕೊಂಡಿದೆ. ಅದಕ್ಕೆ ಕಾರಣವಾಗಿದ್ದು, ಇದೊಂದು ಸಂಗತಿ. ಉತ್ತರ ಪ್ರದೇಶದಲ್ಲಿ ರಾಜಕೀಯ ಪಲ್ಲಟದ ಭವಿಷ್ಯ ಹೇಳ್ತಾ ಇರೋದು.. ಉತ್ತರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಚೌದರಿ, ಹಾಗೂ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಇತ್ತೀಚಿಗೆ ತಾನೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡ ಅವರನ್ನ ಭೇಟಿಯಾದ್ರು.. ಭೇಟಿಯಾಗಿ ಮಾತುಕತೆ ನಡೆಸಿದ್ರು. ಈ ಸಿಂಪಲ್ ಭೇಟಿ ಯೋಗಿ ಆದಿತ್ಯನಾಥರ ಸರ್ಕಾರಕ್ಕೇ ಅಗ್ನಿಪರೀಕ್ಷೆ ತಂದೊಡ್ಡಿದೆ ಅನ್ನೋ ಮಾತಿದೆ.. ಅದಕ್ಕೆ ಕಾರಣ ಬರೀ ಮಾತುಕತೆ ಮಾತ್ರವೇ ಅಲ್ಲ, ಬದಲಾಗಿ, ಈ ಇಬ್ಬರು ರಾಜ್ಯ ನಾಯಕರು, ಹೈಕಮಾಂಡ್ ಮುಂದೆ ಇಟ್ಟಿರೋ ಆ 15 ಪುಟಗಳ ವರದಿ.. ಉತ್ತರ ಪ್ರದೇಶದಲ್ಲಷ್ಟೇ ಅಲ್ಲ, ರಾಷ್ಟ್ರ ರಾಜಕಾರಣದಲ್ಲೇ ದೊಡ್ಡದೊಂದು ಬಿರುಗಾಳಿ ಎಬ್ಬಿಸುವ ಸುಳಿವು ನೀಡ್ತಾ ಇವೆ.

ಇದನ್ನೂ ವೀಕ್ಷಿಸಿ: ಅಕ್ರಮಗಳ ಸರದಾರನ ವಿಚಾರದಲ್ಲಿ ಸಿದ್ದು ದಾರಿ ತಪ್ಪಿದ್ದು ಹೇಗೆ ? 'ಟಗರು'ರಾಮಯ್ಯಗೆ ಇಂದು 'ನಾಗ'ಕಂಟಕ..!

Related Video