ಬೆಂಗಳೂರಲ್ಲಿ ಸೆರೆಸಿಕ್ಕ ಉಗ್ರರಿಗೆ ಅಲ್​ಖೈದಾ ಸಂಬಳ: ಬೆಚ್ಚಿ ಬೀಳಿಸುತ್ತೆ ಟೆರರಿಸ್ಟ್ ಬ್ಯಾಕ್‌ಗ್ರೌಂಡ್

ಜಾಗತಿಕ ಮಟ್ಟದಲ್ಲಿ ಐಟಿ ಹಬ್‌ ಹಾಗೂ ಶಾಂತಿನೆಲೆವೀಡು ಎಂದೆಲ್ಲ ಪ್ರಖ್ಯಾತಿ ಹೊಂದಿರುವ ಬೆಂಗಳೂರು ಈಗ ದೇಶದ ಆಂತರಿಕ ಭದ್ರತೆಗೆ ಅಪಾಯ ತಂದೊಡ್ಡಿರುವ ಭಯೋತ್ಪಾದಕ ಸಂಘಟನೆಗಳ ಸ್ಲಿಪರ್‌ ಸೆಲ್‌ ಕೇಂದ್ರವಾಗಿದೆ ಎಂಬ ಆತಂಕ ವ್ಯಕ್ತವಾಗಿದೆ.

Share this Video
  • FB
  • Linkdin
  • Whatsapp

ಜಾಗತಿಕ ಮಟ್ಟದಲ್ಲಿ ಐಟಿ ಹಬ್‌ ಹಾಗೂ ಶಾಂತಿನೆಲೆವೀಡು ಎಂದೆಲ್ಲ ಪ್ರಖ್ಯಾತಿ ಹೊಂದಿರುವ ಬೆಂಗಳೂರು ಈಗ ದೇಶದ ಆಂತರಿಕ ಭದ್ರತೆಗೆ ಅಪಾಯ ತಂದೊಡ್ಡಿರುವ ಭಯೋತ್ಪಾದಕ ಸಂಘಟನೆಗಳ ಸ್ಲಿಪರ್‌ ಸೆಲ್‌ ಕೇಂದ್ರವಾಗಿದೆ ಎಂಬ ಆತಂಕ ವ್ಯಕ್ತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲ್‌ಖೈದಾ ಜೊತೆ ಅಖ್ತರ್ ಹುಸೇನ್‌ಗೆ ಲಿಂಕ್, ಬೆಂಗಳೂರು ಗಲಭೆಗೆ ಮಾಸ್ಟರ್ ಪ್ಲ್ಯಾನ್

ಇದಕ್ಕೆ ಎರಡು ತಿಂಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಮೂವರು ಶಂಕಿತ ಉಗ್ರರು ಒಂದೆಡೆ ಕಾರಣವಾದರೆ ಮತ್ತೊಂದೆಡೆ ಪದೇ ಪದೇ ರಾಜಧಾನಿಯಲ್ಲಿ ಉಗ್ರರ ಬಂಧಿತರಾಗುತ್ತಿದ್ದರೂ ನಗರದಲ್ಲಿ ಬೇರು ಬಿಟ್ಟಿರುವ ಭಯೋತ್ಪಾದಕ ಸಂಘಟನೆಗಳ ಜಾಲ ಪತ್ತೆಗೆ ಕಾರ್ಯನ್ಮುಖರಾಗದ ಪೊಲೀಸರ ಉದಾಸೀತನೆ ಆತಂಕ ಹೆಚ್ಚಿಸಿದೆ.

ವಿಶ್ವದ ಅತ್ಯಂತ ಭಯಾನಕ 7 ಉಗ್ರ ಸಂಘಟನೆಗಳು ಇವು, ಯಾರು ಅತ್ಯಂತ ಕ್ರೂರಿಗಳು? ಇಲ್ಲಿದೆ ಮಾಹಿತಿ

ನಾಲ್ಕು ತಿಂಗಳ ಹಿಂದೆ ಸಾಮಾಜಿಕ ಜಾಲತಾಣಗಳ ಮೂಲಕ ಬೆಂಗಳೂರಿನಲ್ಲಿ ಸೆರೆಯಾದ ಅಖ್ತರ್‌ ಹುಸೇನ್‌ ಲಷ್ಕರ್‌ ಹಾಗೂ ತಮಿಳುನಾಡಿನ ಸೇಲಂ ಪಟ್ಟಣದ ಅಬ್ದುಲ್‌ ಮಂಡಲ್‌ ಅಲಿಯಾಸ್‌ ಜುಬಾಗೆ ಆಲ್‌ ಖೈದಾ ಸಂಘಟನೆ ಸದಸ್ಯರು ಗಾಳ ಹಾಕಿ ಸೆಳೆದಿದ್ದರು. ಈ ಇಬ್ಬರ ಕುಟುಂಬದ ಹಿನ್ನಲೆ ಬಗ್ಗೆ ಮಾಹಿತಿ ಪಡೆದ ಉಗ್ರರು, ಮೂಲಭೂತ ಬೋಧನೆ ಜೊತೆಗೆ ಹಣದಾಸೆ ತೋರಿಸಿ ಅಖ್ತರ್‌ ಹಾಗೂ ಅಬ್ದುಲ್‌ರ ಬ್ರೈನ್‌ ವಾಶ್‌ ಮಾಡಿದ್ದರು ಎಂದು ತಿಳಿದು ಬಂದಿದೆ. 

‘ನಿಮ್ಮ ಕುಟುಂಬಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ನಾವು ಆರ್ಥಿಕವಾಗಿ ಸಹಾಯ ಮಾಡುತ್ತೇವೆ. ನಿಮಗೆ ಪ್ರತಿ ತಿಂಗಳು 20-30 ಸಾವಿರ ರುಪಾಯಿ ಸಂಬಳ ರೂಪದಲ್ಲಿ ಹಣ ನೀಡುತ್ತೇವೆ’ ಎಂದು ಇಬ್ಬರು ಶಂಕಿತ ಉಗ್ರರಿಗೆ ಅಲ್‌ಖೈದಾ ನೇಮಕಾತಿ ಜಾಲದ ಸದಸ್ಯರು ಭರವಸೆ ಕೊಟ್ಟಿದ್ದ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Related Video