Asianet Suvarna News Asianet Suvarna News

ವಿಶ್ವದ ಅತ್ಯಂತ ಭಯಾನಕ 7 ಉಗ್ರ ಸಂಘಟನೆಗಳು ಇವು, ಯಾರು ಅತ್ಯಂತ ಕ್ರೂರಿಗಳು? ಇಲ್ಲಿದೆ ಮಾಹಿತಿ

* ವಿಶ್ವಕ್ಕೇ ಮಾರಕವಾದ ಭಯೋತ್ಪಾದಕ ಸಂಘಟನೆಗಳು

* ಭಯೋತ್ಪಾದಕ ಸಂಘಟನೆಗಳ ಭೀತಿಯಿಂದ ತತ್ತರಿಸುತ್ತಿವೆ ಬಲಿಷ್ಠ ದೇಶಗಳು

* ವಿಶ್ವದ ಅತ್ಯಂತ ಭಯಾನಕ 7 ಉಗ್ರ ಸಂಘಟನೆಗಳು ಇವು, ಯಾರು ಅತ್ಯಂತ ಕ್ರೂರಿಗಳು? 

Anti Terrorism Day 2022 7 most terrific terror organizations in the world pod
Author
Bangalore, First Published May 20, 2022, 9:48 PM IST

Anti Terrorism Day 2022: ಇಡೀ ಜಗತ್ತು ಭಯೋತ್ಪಾದನಾ ಸಂಘಟನೆಯ ಹೊಡೆತದಿಂದ ಇಂದು ನಿನ್ನೆಯಿಂದ ತತ್ತರಿಸುತ್ತಿಲ್ಲ, ಬದಲಾಗಿ ನೂರಾರು ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿದೆ. ಪ್ರಪಂಚದಾದ್ಯಂತ ಅನೇಕ ಪ್ರಮುಖ ಭಯೋತ್ಪಾದಕ ದಾಳಿಗಳು ನಡೆದಿವೆ, ಭಯೋತ್ಪಾದಕ ಸಂಘಟನೆಗಳು ಸ್ವತಃ ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತವೆ. ಈ ಭಯೋತ್ಪಾದಕ ಸಂಘಟನೆಗಳು ತುಂಬಾ ಅಪಾಯಕಾರಿ ಮತ್ತು ಈ ಸಂಘಟನೆಗಳು ಉಗ್ರರು ಪ್ರಪಂಚದಾದ್ಯಂತ ಹರಡಿದ್ದಾರೆ. ಭಯೋತ್ಪಾದನಾ ವಿರೋಧಿ ದಿನದಂದು, ನಾವು ಪ್ರಪಂಚದಾದ್ಯಂತದ ಇರುವ ಕೆಲ ಭಯಾನಕ ಉಗ್ರ ಸಂಘಟನೆಗಳ ಬಗ್ಗೆ ಇಲ್ಲಿದೆ ವಿವರ.

1- ಇಸ್ಲಾಮಿಕ್ ಸ್ಟೇಟ್ ಇನ್ ಸಿರಿಯಾ ಮತ್ತು ಇರಾಕ್ (ಐಸಿಸ್):

ಅಬು ಬಕರ್ ಅಲ್-ಬಾಗ್ದಾದಿ ಐಸಿಸ್ ಎಂಬ ಭಯೋತ್ಪಾದಕ ಸಂಘಟನೆಯನ್ನು ರಚಿಸಿದನು. ಇದು ಇರಾಕ್ ಮತ್ತು ಸಿರಿಯಾದಲ್ಲಿ ಸಕ್ರಿಯವಾಗಿದೆ. ಇಡೀ ಜಗತ್ತನ್ನು ಇಸ್ಲಾಮೀಕರಣಗೊಳಿಸುವುದು ಈ ಭಯೋತ್ಪಾದಕ ಸಂಘಟನೆಯ ಗುರಿಯಾಗಿದೆ. ಈ ಸಂಸ್ಥೆ ಭಯಾನಕ ಮತ್ತು ಹಣದ ವಿಚಾರದಲ್ಲಿ ಅತ್ಯಂತ ಶ್ರೀಮಂತವಾಗಿವೆ. ಐಸಿಸ್ ಪಶ್ಚಿಮ ಸಿರಿಯಾವನ್ನು ವಶಪಡಿಸಿಕೊಂಡಿದೆ ಮತ್ತು ಅಲ್ಲಿ ತನ್ನ ಸರ್ಕಾರವನ್ನು ರಚಿಸಿದೆ. ಈ ಭಯೋತ್ಪಾದಕ ಸಂಘಟನೆಯಲ್ಲಿ ಬ್ರಿಟಿಷ್ ಮುಸ್ಲಿಮರ ಸಂಖ್ಯೆಯೇ ಅಧಿಕವಿದೆ.

2- ಅಲ್ ಖೈದಾ:

ಈ ಭಯೋತ್ಪಾದಕ ಸಂಘಟನೆಯನ್ನು ಒಸಾಮಾ ಬಿನ್ ಲಾಡೆನ್ ಸ್ಥಾಪಿಸಿದ್ದರು. ಅಲ್ ಖೈದಾ ಒಸಾಮಾ ನೇತೃತ್ವದಲ್ಲಿ ಅಮೆರಿಕದಲ್ಲಿ 9/11 ದಾಳಿ ನಡೆಸಿತು. ನಂತರ, ಮೇ 2, 2012 ರಂದು ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಗುಪ್ತಚರ ಕಾರ್ಯಾಚರಣೆಯಲ್ಲಿ ಯುಎಸ್ ಒಸಾಮಾ ಬಿನ್ ಲಾಡೆನ್‌ನನ್ನು ಕೊಂದಿತು. ಬಿನ್ ಲಾಡೆನ್ ಸಾವಿನ ನಂತರ, ಅಲ್-ಜವಾಹಾರಿ ಈ ಭಯೋತ್ಪಾದಕ ಸಂಘಟನೆಯ ಜವಾಬ್ದಾರಿಯನ್ನು ವಹಿಸಿಕೊಂಡರು.

3- ತಾಲಿಬಾನ್:

ತಾಲಿಬಾನ್ ಹುಟ್ಟಿದ್ದು ಅಫ್ಘಾನಿಸ್ತಾನದಲ್ಲಿ. ಈ ಭಯೋತ್ಪಾದಕ ಸಂಘಟನೆಯು 1996 ರಿಂದ 2001 ರವರೆಗೆ ಅಫ್ಘಾನಿಸ್ತಾನವನ್ನು ಆಳಿತು. ಇದನ್ನು ಮುಲ್ಲಾ ಮೊಹಮ್ಮದ್ ಉಮರ್ ಸ್ಥಾಪಿಸಿದರು. ಶರಿಯಾ ಕಾನೂನನ್ನು ಜಾರಿಗೊಳಿಸುವ ಮೂಲಕ ತಾಲಿಬಾನ್ ಅಫ್ಘಾನಿಸ್ತಾನದ ಜನರ ಸ್ವಾತಂತ್ರ್ಯವನ್ನು ಕಸಿದುಕೊಂಡಿತು. ನಂತರ, ಅಮೇರಿಕನ್ ಪಡೆಗಳು ತಾಲಿಬಾನ್ ಮೇಲೆ ದಾಳಿ ಮಾಡಿ ಅದನ್ನು ದುರ್ಬಲಗೊಳಿಸಿದವು. ಆದಾಗ್ಯೂ, 2021 ರಲ್ಲಿ, ಯುಎಸ್ ತನ್ನ ಪಡೆಗಳನ್ನು ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಂಡಿತು ಮತ್ತು ಮತ್ತೊಮ್ಮೆ ತಾಲಿಬಾನ್ ಅಲ್ಲಿ ಆಳ್ವಿಕೆ ನಡೆಸಿತು.

4- ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ:

ಈ ಭಯೋತ್ಪಾದಕ ಸಂಘಟನೆಯನ್ನು ಅತ್ಯಂತ ಕ್ರೂರವೆಂದು ಪರಿಗಣಿಸಲಾಗಿದೆ. 2014ರಲ್ಲಿ ಪಾಕಿಸ್ತಾನದ ಪೇಶಾವರದ ಸೇನಾ ಶಾಲೆಯಲ್ಲಿ ಈ ಭಯೋತ್ಪಾದಕ ಸಂಘಟನೆ ಅಮಾಯಕ ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸಿತ್ತು. ಈ ಸಂಘಟನೆಯನ್ನು ಪಾಕಿಸ್ತಾನಿ ಭಯೋತ್ಪಾದಕ ಬೈತುಲ್ಲಾ ಮೆಹ್ಸೂದ್ ಸ್ಥಾಪಿಸಿದ. ಆದಾಗ್ಯೂ, ಅವರು 23 ಆಗಸ್ಟ್ 2009 ರಂದು ಕೊಲ್ಲಲ್ಪಟ್ಟರು.

5- ಬೊಕೊ ಹರಾಮ್:

ಈ ಭಯೋತ್ಪಾದಕ ಸಂಘಟನೆ ನೈಜೀರಿಯಾ ಮತ್ತು ಆಫ್ರಿಕಾದ ಇತರ ಕೆಲವು ದೇಶಗಳಲ್ಲಿ ಸಕ್ರಿಯವಾಗಿದೆ. ಅದರ ಭಯೋತ್ಪಾದಕರು ತಮ್ಮ ಕ್ರೂರತೆಗೆ ಹೆಸರುವಾಸಿಯಾಗಿದ್ದಾರೆ. ಬೊಕೊ ಹರಾಮ್ ನೈಜೀರಿಯಾದ ಶಾಲೆಯೊಂದರಿಂದ 250 ವಿದ್ಯಾರ್ಥಿನಿಯರನ್ನು ಅಪಹರಿಸಿದಾಗ ಬೆಳಕಿಗೆ ಬಂದಿತು. ಬೊಕೊ ಹರಾಮ್ ನೈಜೀರಿಯಾ ಮತ್ತು ಸುತ್ತಮುತ್ತಲಿನ ದೇಶಗಳನ್ನು ಇಸ್ಲಾಮೀಕರಿಸುವ ಗುರಿ ಹೊಂದಿದೆ. ಈ ಸಂಘಟನೆಯ ಮಾತು ಕೇಳದವನನ್ನು ಕೊಂದು ಸುಟ್ಟು ಹಾಕುತ್ತದೆ.

6- ಹಿಜ್ಬುಲ್ಲಾ:

ಈ ಲೆಬನಾನಿನ ಭಯೋತ್ಪಾದಕ ಸಂಘಟನೆಯು 1982 ರಿಂದ ಸಕ್ರಿಯವಾಗಿದೆ. ಇದನ್ನು ಹೆಚ್ಚಾಗಿ ಇಸ್ರೇಲ್ ಮತ್ತು ಸುನ್ನಿ ಅರಬ್ ದೇಶಗಳ ಶತ್ರು ಎಂದು ಕರೆಯಲಾಗುತ್ತದೆ. ಯುಎಸ್ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿಯ ಪ್ರಕಾರ, ಲೆಬನಾನ್‌ನ 40 ಪ್ರತಿಶತದಷ್ಟು ಜನರ ಬೆಂಬಲವನ್ನು ಹೆಜ್ಬೊಲ್ಲಾ ಹೊಂದಿದೆ ಎಂದು ಹೇಳಿಕೊಂಡಿದೆ.

7- ಹಮಾಸ್:

ಮುಸ್ಲಿಂ ಬ್ರದರ್‌ಹುಡ್‌ನ ಶಾಖೆಯಾಗಿ 1987 ರಲ್ಲಿ ಸ್ಥಾಪನೆಯಾದ ಪ್ಯಾಲೆಸ್ತೈನ್‌ನಲ್ಲಿ ಈ ಭಯೋತ್ಪಾದಕ ಸಂಘಟನೆ ಸಕ್ರಿಯವಾಗಿದೆ. ಈ ಭಯೋತ್ಪಾದಕ ಸಂಘಟನೆಯು ಇಸ್ರೇಲ್ ವಿರುದ್ಧ ಹೋರಾಡುತ್ತದೆ. ಇಸ್ರೇಲ್ ಅನ್ನು ಸೋಲಿಸುವುದು ಮತ್ತು ಪ್ಯಾಲೆಸ್ತೀನ್ ಪ್ರಾಬಲ್ಯವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಇದು ಹೆಚ್ಚಾಗಿ ಆತ್ಮಹತ್ಯಾ ದಾಳಿಗಳನ್ನು ಮಾಡುತ್ತದೆ.

Follow Us:
Download App:
  • android
  • ios