ಹೆತ್ತ ತಂದೆ- ತಾಯಿಗೆ ಚಟ್ಟ ಕಟ್ಟಿದ ಸೈಕೋ ಮಗ: ಅಪ್ಪ-ಅಮ್ಮ, ಮಕ್ಕಳು..ಇಲ್ಲಿ ಸಂಬಂಧಗಳಿಗಿಲ್ವಾ ಬೆಲೆ..?

ರಿಟೈರ್ಡ್ ಲೈಫ್ ಬಗ್ಗೆ ಕನಸುಕಂಡವರಿಗೆ ಮಗನೇ ವಿಲನ್..!
ಜಗಳ ವಾಡುತ್ತಲೇ ತಲೆಗೆ ದೊಣ್ಣೆಯಿಂದ ಹೊಡೆದುಬಿಟ್ಟ..!
ಅಪ್ಪ-ಅಮ್ಮನನ್ನ ಕೊಂದು ಎಸ್ಕೇಪ್ ಆದ ಸೈಕೋ ಮಗ..!

Share this Video
  • FB
  • Linkdin
  • Whatsapp

ಇಷ್ಟು ದಿನ ಗಂಡ ಹೆಂಡತಿ ನಡುವಿನ ಜಗಳ, ಕೊಲೆ(Murder), ರೌಡಿಗಳ ಮರ್ಡರ್ ಕಥೆಗಳನ್ನ ಓದಿರುತ್ತೀರಿ. ಆದ್ರೆ ಇವತ್ತು 2 ಡಿಫರೆಂಟ್ ಕ್ರೈಂ ಕಥೆಗಳ ಬಗ್ಗೆ ಇಲ್ಲಿ ನೋಡಬಹುದು. ಇಲ್ಲಿ ಹೆತ್ತವರು ಮಗ ಅನ್ನೋದನ್ನೂ ನೋಡದೇ.. ಮಕ್ಕಳು ಹೆತ್ತವರೂ ಅನ್ನೋದನ್ನೂ ನೋಡದೇ ಕೊಂದು ಹಾಕಿದ್ದಾರೆ. ಮೊದಲಿಗೆ ನಾವು ಒಬ್ಬ ಸೈಕೋ ಮಗನೊಬ್ಬನ(Psycho son) ಕಥೆ ಹೇಳ್ತೀವಿ. ಅವರಿಬ್ಬರು ವೃದ್ಧರು. ರಿಟೈರ್‌ಮೆಂಟ್‌ ಲೈಫ್ ಅನ್ನ ಮಕ್ಕಳೊಂದಿಗೆ ಕಳೆಯಬೇಕು ಅಂತ ಆಸೆ ಪಟ್ಟವರು. ಆದ್ರೆ ಅವರ ಮಗ ಮಾತ್ರ ಹೆತ್ತವರನ್ನ ವಿಲನ್‌ಗಳಂತೇ ನೋಡಿದ್ದ. ಪ್ರತೀ ನಿತ್ಯ ಅವರೊಂದಿಗೆ ಜಗಳ(Conflict) ತೆಗೆದು ಹಲ್ಲೇ ಮಾಡ್ತಿದ್ದ. ಆದ್ರೆ ಆವತ್ತು ಅವನಿಗೇನಾಯ್ತೋ ಏನೋ ಸೀದಾ ತಂದೆ ತಾಯಿಯ ತಲೆಗೆ ಪೆಟ್ಟು ಕೊಟ್ಟುಬಿಟ್ಟದ್ದ. ಆ ವೃದ್ಧರು ಅಲ್ಲೇ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ರು. ಹೀಗೆ ಮಗನಿಂದಲೇ ಹೆತ್ತವರು ಕೊಲೆಯಾಗಿದ್ದಾರೆ.

ಇದನ್ನೂ ವೀಕ್ಷಿಸಿ: ಸೆಂಟ್ರಲ್ ಜೈಲ್ ಈಗ ಟೆರರಿಸ್ಟ್ ಯುನಿವರ್ಸಿಟಿ: ಪರಪ್ಪನ ಅಗ್ರಹಾರದಲ್ಲಿ ಟೆರರ್ ಉಪನ್ಯಾಸಕರು ..!

Related Video