ಹೆತ್ತ ಮಗನೇ ತಾಯಿಯ ಹೆಣ ಹಾಕಿಬಿಟ್ಟನಾ..? ಪುತ್ರನ ನಡವಳಿಕೆ ಪೊಲೀಸರಿಗೆ ಕೊಟ್ಟಿತ್ತು ಸುಳಿವು ..!

ತಾಯಿಯ ಕಥೆ ಮುಗಿಸಿ ಹುಡುಕುವ ನಾಟಕ ಮಾಡಿದ್ದ..!
ಅಜ್ಜಿಯನ್ನ ಕೊಂದು ಮನೆ ಬೀಗ ಹಾಕಿ ಹೋಗಿದ್ರು..!
ಸತ್ತು 3 ದಿನವಾದ್ರೂ ಮಕ್ಕಳಿಗೆ ಸುಳಿವೇ ಸಿಕ್ಕಿರಲಿಲ್ಲ..!
ಹಂತಕರು ಪೊಲೀಸರಿಗೆ ತಗ್ಲಾಕಿಕೊಂಡದ್ದೇ ರೋಚಕ..!
 

Share this Video
  • FB
  • Linkdin
  • Whatsapp

ಅವಳು 63 ವರ್ಷದ ವೃದ್ಧೆ. ಮಕ್ಕಳಿದ್ರೂ ಒಂಟಿಯಾಗಿ ಜೀವನ ಮಾಡ್ತಿದ್ಲು. ಕೂಲಿ ಮಾಡೋದು ಈಕೆಯ ಫುಲ್ ಟೈಂ ಜಾಬ್ ಆದ್ರೆ ದಾನಮ್ಮ ದೇವಿಯ ದೇವಸ್ಥಾನದ ಅರ್ಚಕಿಯಾಗಿ ಬಂದವರಿಗೆ ಭವಿಷ್ಯ ಹೇಳೋದು ಇವಳ ಪಾರ್ಟ್ ಟೈಂ ಜಾಬ್. ಜ್ಯೋತಿಷಿ ಹೇಳ್ತಿದ್ರಿಂದ ಈಕೆಗೆ ದುಡ್ಡು ಕಾಸಿನ ತೊಂದರೆ ಏನೂ ಇರಲಿಲ್ಲ. ಆದ್ರೆ ಆವತ್ತೊಂದು ದಿನ ಇದೇ ಅಜ್ಜಿ(Grand Mother) ತನ್ನದೇ ಮನೆಯಲ್ಲಿ ಹೆಣವಾಗಿ ಸಿಕ್ಕಿದ್ದಳು. ಒಂಟಿಯಾಗಿ ಜೀವನ ಮಾಡ್ತಿದ್ದವಳನ್ನ ಹಂತಕರು ಕೊಂದು ಎಸ್ಕೇಪ್ ಆಗಿದ್ರು. ಆದರೆ ತನಿಖೆ ನಡೆಸಿದ ಪೊಲೀಸರಿಗೆ(police) ಹಂತಕರ ಸುಳಿವು ಸಿಕ್ಕಿ ಹೆಡೆಮುರಿ ಕಟ್ಟೋ ಹೊತ್ತಿಗೆ ಸಾಕು ಸಾಕಾಗಿ ಹೋಗಿತ್ತು. ದಾನಮ್ಮ ದೇವಿಯ(Danamma Devi) ಪರಮ ಭಕ್ತಿಯಾಗಿದ್ದ, ಜ್ಯೋತಿಷ್ಯ ಹೇಳುತ್ತಿದ್ದ ಅಜ್ಜಿ ರತ್ನಬಾಯಿಯ ಕೊಲೆ(Murder) ಪ್ರಕರಣ ಭೇದಿಸುವಲ್ಲಿ R.G ನಗರ ಪೊಲೀಸರು ಯಶಸ್ವಿಯಾದರು. ತನಿಖೆ ಕೈಗೊಂಡ ಪೊಲೀಸರಿಗೆ, ಹಂತಕರು ಯಾರು ಎನ್ನುವುದು ಗೊತ್ತಾಗಿ ಸ್ವತಃ ಪೊಲೀಸರೇ ಶಾಕ್ ಆಗುವಂತಾಗಿತ್ತು. ಗುಡ್ಡಾಪುರ ದಾನಮ್ಮ ದೇವಿಯ ಪರಮ ಭಕ್ತೆಯಾಗಿದ್ದ ಮತ್ತು ಕಷ್ಟ ಅಂತ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಜ್ಯೋತಿಷ್ಯ ಹೇಳುತ್ತಿದ್ದ ಅಜ್ಜಿಯನ್ನ ತನ್ನ ಸ್ವಂತ ಮಗನೇ ಕೊಂದು ಮುಗಿಸಿದ್ದ. ಅಜ್ಜಿಯ ಸ್ನೇಹಿತನೊಂದಿಗೆ ಸೇರಿಕೊಂಡು ಅಮ್ಮನ ಕಥೆ ಮುಗಿಸಿ ನಂತರ ತಾಯಿಯನ್ನ ಹುಡುಕೋ ನಾಟಕವಾಡಿದ್ದ. ನಾವು ಅಲ್ಲಿಗೆ ಹೋದಾಗಲೂ ನಮ್ಮ ಬಳಿ ಅಮ್ಮನ ಬಗ್ಗೆ ಮಾತನ್ನಾಡಿ ಕಣ್ಣೀರು ಹಾಕಿದ್ದ. ಸಲ್ಲದ ಚಟಕ್ಕೆ ದಾಸರಾದರೆ ಆಗಬಾರದ್ದು ಆಗುತ್ತೆ ಅನ್ನೋದಕ್ಕೆ ಈ ಸ್ಟೋರಿ ಉತ್ತಮ ಎಕ್ಸಾಂಪಲ್. ಇನ್ನೂ ತಾಯಿ ಮಗನ ಎದುರಲ್ಲೇ ಕೊಲೆಯಾಗಿ ಹೋದ್ರೆ, ಮಗ ಮತ್ತು ಗೆಳೆಯ ಮಾಡಬಾರದನ್ನ ಮಾಡಿ ಜೈಲು ಸೇರಿದ್ದಾರೆ.

ಇದನ್ನೂ ವೀಕ್ಷಿಸಿ: ‘ಪಂಚ’ ಫಲಿತಾಂಶ ಲೋಕ ಕದನಕ್ಕೆ ದಿಕ್ಸೂಚಿನಾ..? ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ !

Related Video